ಒಮ್ಮೆ ಚಾರ್ಜ್ ಮಾಡಿದ್ರೆ 250 KM ಸಂಚಾರ :BMTC ಎಲೆಕ್ಟ್ರಿಕಲ್ ಬಸ್ ಪ್ರಯೋಗಾರ್ಥ ಸಂಚಾರ
ಬೆಂಗಳೂರಿನ ಶಾಂತಿ ನಗರದಲ್ಲಿರುವ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದಿಂದ ವಿಧಾನಸೌಧದವರೆಗೆ ಇಂದು ಎಲೆಕ್ಟ್ರಿಕ್ ಬಸ್ಸಿನಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಯಿತು. ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಎಲೆಕ್ಟ್ರಿಕ್ ಬಸ್ಸುಗಳನ್ನು ವೀಕ್ಷಿಸಿ ನೂತನ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಬೆಂಗಳೂರಿನ ಶಾಂತಿ ನಗರದಲ್ಲಿರುವ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದಿಂದ ವಿಧಾನಸೌಧದವರೆಗೆ ಇಂದು ಎಲೆಕ್ಟ್ರಿಕ್ ಬಸ್ಸಿನಲ್ಲಿ ಪ್ರಾಯೋಗಿಕ ಸಂಚಾರ .
ವಿನೂತನ ಟೆಕ್ನಾಲಜಿ ಯನ್ನು ಹೊಂದಿರುವ ತೆಲಂಗಾಣ ಮೂಲದ ಓಲೆಕ್ಟ್ರಾ ಕಂಪನಿಯ ಎಲೆಕ್ಟ್ರಿಕ್ ಬಸ್ ಒಮ್ಮೆ 2 ಗಂಟೆ 30 ನಿಮಿಷ ಚಾರ್ಜ್ ಮಾಡಿದ್ರೆ 250 ಕಿ.ಮೀ ಸಂಚಾರ ಮಾಡಲಿದೆ. 100% ಪೋಲ್ಯುಷನ್ ಫ್ರೀ ಬಸ್ ಗಳನ್ನು ಓಡಿಸಲು ಮುಂದಾದ ಬಿಎಂಟಿಸಿ. ಬಸ್ ನಲ್ಲಿ 35 ಆಸನಗಳ ವ್ಯವಸ್ಥೆ ಮಾಡಲಾಗಿದೆ
ಆಟೋಮ್ಯಾಟಿಕ್ ರೂಟ್ ಬದಲಾವಣೆ, ಎಮರ್ಜೆನ್ಸಿ ಕರೆ ಮಾಡುವ ವ್ಯವಸ್ಥೆ( ಪೊಲೀಸ್. ಆ್ಯಂಬುಲೆನ್ಸ್. ಅಗ್ನಿಶಾಮಕ) ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ. ಬಸ್ ಒಳಭಾಗದಲ್ಲಿ ಎರಡು ಕ್ಯಾಮರಾ ಹೊರಭಾಗದಲ್ಲಿ ಒಂದು ಬ್ಯಾಕ್ ಕ್ಯಾಮರಾ ಹೊಂದಿರುತ್ತದೆ
ಅಂಗವಿಕಲರು ಬಸ್ ಹತ್ತಲು ಫೋಲ್ಡಿಂಗ್ ಸ್ಟೇಪ್ ಅಳವಡಿಸಲಾಗಿದೆ
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಲೆಕ್ಟ್ರಿಕ್ ಬಸ್ಸುಗಳನ್ನು ವೀಕ್ಷಿಸಿ ನೂತನ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಬಿಎಂಟಿಸಿ ಅಧ್ಯಕ್ಷರಾದ ಶ್ರೀ ನಂದೀಶ್ ರೆಡ್ಡಿ, ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವಯೋಗಿ ಕಳಸದ್, ಬಿಎಂಟಿಸಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಸ್ ನಲ್ಲಿರುವ ಪ್ರಯಾಣಿಕರಿಗೆ ಏನಾದರೂ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡರೇ ಆಸ್ಪತ್ರೆಗೆ ಸೇರಿಸಲು ಆ್ಯಂಬುಲೆನ್ಸ್ ರೀತಿಯಲ್ಲಿ ಸೈರನ್ ವ್ಯವಸ್ಥೆ