ಸುಸೈಡ್ ಮಾಡಿಕೊಂಡ ಗುಂಡ್ಲುಪೇಟೆ ಅಭಿಮಾನಿ ಮನೆಗೆ BSY ಭೇಟಿ, ಸಾಂತ್ವನ
ಗುಂಡ್ಲುಪೇಟೆ(ಜು. 30) ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುದ್ದಿ ಕೇಳಿ ಗುಂಡ್ಲುಪೇಟೆಯ ಅಭಿಮಾನಿ ರವಿ ಆತ್ಮಹತ್ಯೆಗೆ ಶರಂಣಾಗಿದ್ದರು. ಶುಕ್ರವಾರ ಯಡಿಯೂರಪ್ಪ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.
BS Yediyurappa
ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಯಡಿಯೂರಪ್ಪನವರ ಅಭಿಮಾನಿ ರವಿ ಆತ್ಮಹತ್ಯೆ ಮಾಡಿಕೊಂಡಿದ್ದರು.
BS Yediyurappa
ಮೃತರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಬಿಎಸ್‌ವೈ 5 ಲಕ್ಷ ರೂ ಪರಿಹಾರವನ್ನು ನೀಡಿದರು.
BS Yediyurappa
ಕುಟುಂಬದ ಮನೆ ನಿರ್ಮಾಣಕ್ಕೆ ಇನ್ನೂ 5 ಲಕ್ಷ ರೂ ನೀಡುವುದಾಗಿ ತಿಳಿಸಿದರು.
BS Yediyurappa
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ.ವಿಜಯೇಂದ್ರ, ಶಾಸಕ ಸಿ.ಎಸ್.ನಿರಂಜನ್ ಕುಮಾರ್, ವಿಧಾನಸಭಾ ಕ್ಷೇತ್ರದ ಶಾಸಕ ಎಸ್ಆರ್ ವಿಶ್ವನಾಥ್ ರವರು,ಕೊಳ್ಳೇಗಾಲ ಶಾಸಕರಾದ ಎನ್. ಮಹೇಶ್ ಇದ್ದರು.
BS Yediyurappa
ಅಭಿಮಾನ ಅತಿರೇಕಕ್ಕೆ ಹೋಗಿ ಜೀವ ಕಳೆದುಕೊಂಡು, ತಮ್ಮನ್ನೇ ನಂಬಿರುವ ಕುಟುಂಬದವರಿಗೆ ಶಾಶ್ವತ ಶೋಕ ನೀಡಿರುವ ದುರ್ಘಟನೆ ವೈಯಕ್ತಿಕವಾಗಿ ನನಗೆ ಅತ್ಯಂತ ನೋವನ್ನು ತಂದಿದೆ. ಇಂದು ಗುಂಡ್ಲುಪೇಟೆಯ ಬೊಮ್ಮಲಾಪುರದಲ್ಲಿ, ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ ರವಿ ಅವರ ಮನೆಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
BS Yediyurappa
ಯಡಿಯೂರಪ್ಪ ರಾಜೀನಾಮೆ ಸುದ್ದಿ ನಂತರ ರವಿ ಸುಸೈಡ್ ಮಾಡಿಕೊಂಡಿದ್ದರು.