ಡಿ.ಜೆ.ಹಳ್ಳಿ ಗಲಭೆ ಹಿಂದಿರುವ SDPI ನಿಷೇಧಿಸಿ: ನಳಿನ್‌ ಕುಮಾರ್‌ ಕಟೀಲ್‌

First Published 1, Oct 2020, 10:44 AM

ಬೆಂಗಳೂರು(ಅ.01): ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ದಾಳಿಯ ಹಿಂದಿರುವ ಎಸ್‌ಡಿಪಿಐ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಒತ್ತಾಯಿಸಿದ್ದಾರೆ.

<p>ಬಿಜೆಪಿ ಕಚೇರಿಯಲ್ಲಿ ಬುಧವಾರ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಕುರಿತಂತೆ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಸಿದ್ಧಪಡಿಸಿದ ಬಿಜೆಪಿ ಸತ್ಯಶೋಧನಾ ಸಮಿತಿಯ ವರದಿಯನ್ನು ಸ್ವೀಕರಿಸಿದರು.</p>

ಬಿಜೆಪಿ ಕಚೇರಿಯಲ್ಲಿ ಬುಧವಾರ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಕುರಿತಂತೆ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಸಿದ್ಧಪಡಿಸಿದ ಬಿಜೆಪಿ ಸತ್ಯಶೋಧನಾ ಸಮಿತಿಯ ವರದಿಯನ್ನು ಸ್ವೀಕರಿಸಿದರು.

<p>ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ವ್ಯವಸ್ಥಿತ ಪಿತೂರಿಯಿಂದಲೇ ಈ ಗಲಭೆ ನಡೆದಿದೆ. ಇದು ಪೂರ್ವ ನಿಯೋಜಿತ ಕೃತ್ಯ ಎಂಬುದಾಗಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದು ಖಂಡನೀಯವಾಗಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.</p>

ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ವ್ಯವಸ್ಥಿತ ಪಿತೂರಿಯಿಂದಲೇ ಈ ಗಲಭೆ ನಡೆದಿದೆ. ಇದು ಪೂರ್ವ ನಿಯೋಜಿತ ಕೃತ್ಯ ಎಂಬುದಾಗಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದು ಖಂಡನೀಯವಾಗಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

<p>ಕಾಂಗ್ರೆಸ್‌ ಅಧಿಕಾರದ ಹುಚ್ಚು ಈ ಗಲಭೆಯ ಹಿಂದಿದೆ. ಗಲಭೆ ಎರಡು-ಮೂರು ಗಂಟೆಗಳ ಕಾಲ ನಡೆದಿದೆ. ಸಿ.ಸಿ.ಟಿವಿಯನ್ನು ಒಡೆದು ಹಾಕಿರುವುದು, ವಾಹನಕ್ಕೆ ಬೆಂಕಿ ಹಚ್ಚಲು ಮತ್ತು ಗಲಭೆಗೆ ಬೇಕಾದವುಗಳನ್ನು ತರಲಾಗಿತ್ತು. ಆದ್ದರಿಂದ ಇದು ಪೂರ್ವಯೋಜಿತ ಕೃತ್ಯ ಎಂಬುದು ಖಚಿತ. ಬಿಬಿಎಂಪಿ ಸದಸ್ಯರಾದ ಅಬ್ದುಲ್‌ ಹಫೀಝ್‌ ಜಾಫಿ, ಸಂಪತ್‌ ರಾಜ್‌, ಇರ್ಷಾದ್‌ ಬೇಗಂ ಅವರ ಪತಿ ಈ ಕೃತ್ಯದಲ್ಲಿ ಕೈ ಜೋಡಿಸಿರುವುದು ಸ್ಪಷ್ಟವಾಗಿದೆ ಎನ್ನುವುದನ್ನೂ ವರದಿಯಲ್ಲಿ ತಿಳಿಸಲಾಗಿದೆ. ಕಾಂಗ್ರೆಸ್‌ ಪಕ್ಷವು ತನ್ನ ಒಳಗಿನ ನಾಯಕತ್ವದ ಸಮಸ್ಯೆಯನ್ನು ಪರಿಹರಿಸದೆ ಇರುವುದೇ ಈ ಗಲಭೆಗೆ ಕಾರಣ ಎಂದು ಆರೋಪಿಸಿದರು.</p>

ಕಾಂಗ್ರೆಸ್‌ ಅಧಿಕಾರದ ಹುಚ್ಚು ಈ ಗಲಭೆಯ ಹಿಂದಿದೆ. ಗಲಭೆ ಎರಡು-ಮೂರು ಗಂಟೆಗಳ ಕಾಲ ನಡೆದಿದೆ. ಸಿ.ಸಿ.ಟಿವಿಯನ್ನು ಒಡೆದು ಹಾಕಿರುವುದು, ವಾಹನಕ್ಕೆ ಬೆಂಕಿ ಹಚ್ಚಲು ಮತ್ತು ಗಲಭೆಗೆ ಬೇಕಾದವುಗಳನ್ನು ತರಲಾಗಿತ್ತು. ಆದ್ದರಿಂದ ಇದು ಪೂರ್ವಯೋಜಿತ ಕೃತ್ಯ ಎಂಬುದು ಖಚಿತ. ಬಿಬಿಎಂಪಿ ಸದಸ್ಯರಾದ ಅಬ್ದುಲ್‌ ಹಫೀಝ್‌ ಜಾಫಿ, ಸಂಪತ್‌ ರಾಜ್‌, ಇರ್ಷಾದ್‌ ಬೇಗಂ ಅವರ ಪತಿ ಈ ಕೃತ್ಯದಲ್ಲಿ ಕೈ ಜೋಡಿಸಿರುವುದು ಸ್ಪಷ್ಟವಾಗಿದೆ ಎನ್ನುವುದನ್ನೂ ವರದಿಯಲ್ಲಿ ತಿಳಿಸಲಾಗಿದೆ. ಕಾಂಗ್ರೆಸ್‌ ಪಕ್ಷವು ತನ್ನ ಒಳಗಿನ ನಾಯಕತ್ವದ ಸಮಸ್ಯೆಯನ್ನು ಪರಿಹರಿಸದೆ ಇರುವುದೇ ಈ ಗಲಭೆಗೆ ಕಾರಣ ಎಂದು ಆರೋಪಿಸಿದರು.

<p>ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಗಲಭೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂಬುದನ್ನು ವರದಿಯಲ್ಲಿ ಒತ್ತಾಯಿಸಲಾಗಿದೆ. ಗಲಭೆಯು ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ವ್ಯವಸ್ಥಿತ ಪಿತೂರಿಯಿಂದ ಸಂಭವಿಸಿದೆ. ವರದಿಯನ್ನು ಗುರುವಾರ ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು ಎಂದರು. ಸಂಸದರಾದ ನಾರಾಯಣಸ್ವಾಮಿ, ಪಿ.ಸಿ.ಮೋಹನ್‌ ಮತ್ತಿತರರು ಉಪಸ್ಥಿತರಿದ್ದರು.</p>

ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಗಲಭೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂಬುದನ್ನು ವರದಿಯಲ್ಲಿ ಒತ್ತಾಯಿಸಲಾಗಿದೆ. ಗಲಭೆಯು ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ವ್ಯವಸ್ಥಿತ ಪಿತೂರಿಯಿಂದ ಸಂಭವಿಸಿದೆ. ವರದಿಯನ್ನು ಗುರುವಾರ ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು ಎಂದರು. ಸಂಸದರಾದ ನಾರಾಯಣಸ್ವಾಮಿ, ಪಿ.ಸಿ.ಮೋಹನ್‌ ಮತ್ತಿತರರು ಉಪಸ್ಥಿತರಿದ್ದರು.

loader