ಬಿಎಸ್‌ವೈ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ: ನಳಿನ್‌ ಕುಮಾರ್‌ ಕಟೀಲ್‌

First Published 3, Oct 2020, 10:55 AM

ಶಿರಾ(ಅ.03): ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ಹಿಂದುಳಿದ ಗೊಲ್ಲ ಸಮುದಾಯದ ಅಭಿವೃದ್ಧಿಗೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ 50 ಕೋಟಿ ಅನುದಾನವನ್ನು ನೀಡಿದ್ದಾರೆ. ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನರ ಕಣ್ಣೀರು ಒರೆಸುವ ಮುಖ್ಯಮಂತ್ರಿ. ಅವರ ಕೈ ಬಲಪಡಿಸಲು ಶಿರಾ ಕ್ಷೇತ್ರದ ಜನತೆ ಈ ಬಾರಿ ಬಿಜೆಪಿಯನ್ನು ಗೆಲ್ಲಿಸಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ತಾಲೂಕಿನ ಚಿಕ್ಕನಹಳ್ಳಿ ಬಳಿ ಕಳ್ಳಂಬೆಳ್ಳ ಹಾಗೂ ಚಿಕ್ಕನಹಳ್ಳಿ ಶಕ್ತಿಕೇಂದ್ರದ ಬಿಜೆಪಿ ಬೂತ್‌ಮಟ್ಟದ ಕಾರ್ಯಕರ್ತ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ಶಿರಾದಲ್ಲಿ ಬಿಜೆಪಿಯ ಬಿರುಗಾಳಿ ಎದ್ದಿದೆ. ಕ್ಷೇತ್ರದ ಎಲ್ಲಾ ಕಡೆಗಳಲ್ಲೂ ಬಿಜೆಪಿಯ ಗಾಳಿ ಬೀಸುತ್ತಿದೆ. ಪಕ್ಷದ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ ಎಂದಿದ್ದಾರೆ.

ಅದೇ ರೀತಿ ಚುನಾವಣೆಯಲ್ಲಿಯೂ ಸಹ ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು. ಎಲ್ಲರ ಮನೆ ಮನೆಯಲ್ಲಿ ಕಮಲವನ್ನು ಅರಳಿಸುವ ಕೆಲಸ ಮಾಡಬೇಕು. ಭಾರತೀಯ ಜನತಾ ಪಾರ್ಟಿ ಸಂಕಲ್ಪ ಮಾಡಿದೆ. ಬಿಜೆಪಿ ಅತಿ ಹೆಚ್ಚು ಮತಗಳ ಅಂತರದಿಂದ ಜಯಗಳಿಸುತ್ತದೆ ಎಂದರು.

ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯೇ ಕೇಂದ್ರ ಬಿಂದು. ಮೊದಲೆಲ್ಲ ಭಾರತವನ್ನು ಅಮೆರಿಕ ಮಾಡುವುದಾಗಿ ಹೇಳುತ್ತಿದ್ದರು. ಈಗ ಅಮೆರಿಕದ ರಾಜಕೀಯ ಪಕ್ಷಗಳು ನಾವು ಭಾರತದ ರೀತಿ ಮಾಡುತ್ತೇವೆಂದು ಹೇಳುತ್ತಿದ್ದಾರೆ ಎಂದರು.

ರಾಜ್ಯ ಮೂರು ಮುಖ್ಯಮಂತ್ರಿಗಳನ್ನು ಕಂಡಿದೆ. ಒಬ್ಬರು ಕಣ್ಣೀರು ತರಿಸಿದ ಮುಖ್ಯಮಂತ್ರಿ. ಇನ್ನೊಬ್ಬರು ಕಣ್ಣೀರು ಬರಿಸಿದ ಸಿಎಂ. ಇನ್ನೊಬ್ಬರು ಕಣ್ಣೀರು ಒರೆಸಿದ ಸಿಎಂ. ಕಣ್ಣೀರು ಒರೆಸಿದ ಮುಖ್ಯಮಂತ್ರಿ ಎಂದರೆ ಬಿ.ಎಸ್‌.ಯಡಿಯೂರಪ್ಪ ಎಂದರು.

ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನವಾಗಿದೆ.

loader