- Home
- Karnataka Districts
- ಬೆಂಗಳೂರಿನಲ್ಲಿ ಖಾಕಿ ಖದೀಮರು: ಎಸ್‌ಐ ಯೇಸುದಾಸ್, ಪೇದೆ ಸಂತೋಷ್ ವಿರುದ್ಧ ಕಮಿಷನರ್‌ಗೆ ರಾಬರಿ ದೂರು!
ಬೆಂಗಳೂರಿನಲ್ಲಿ ಖಾಕಿ ಖದೀಮರು: ಎಸ್‌ಐ ಯೇಸುದಾಸ್, ಪೇದೆ ಸಂತೋಷ್ ವಿರುದ್ಧ ಕಮಿಷನರ್‌ಗೆ ರಾಬರಿ ದೂರು!
ಕೌಟುಂಬಿಕ ಕಲಹದ ಕೇಸ್ ಇತ್ಯರ್ಥಪಡಿಸುವ ನೆಪದಲ್ಲಿ ಬೆಂಗಳೂರಿನ ವರ್ತೂರು ಠಾಣೆಯ ಪೊಲೀಸರು ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ. ಪಿಎಸ್‌ಐ ಮತ್ತು ಪೇದೆಯೊಬ್ಬರು 137 ಗ್ರಾಂ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ನಗದು ದೋಚಿದ್ದು, ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಮಹಿಳೆ ದೂರು ನೀಡಿದ್ದಾರೆ.

ಬೆಂಗಳೂರು: ಜನರ ಆಸ್ತಿ, ಪಾಸ್ತಿ ಹಾಗೂ ಜೀವರಕ್ಷಣೆ ಮಾಡಬೇಕಾದ ಪೊಲೀಸರೇ ಖದೀಮರಂತೆ (Robbers) ಮನೆಗೆ ನುಗ್ಗಿ ದರೋಡೆ ಮಾಡಿರುವ ಅತಿ ಆಘಾತಕಾರಿ ಘಟನೆ ಸಿಲಿಕ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಕೌಟುಂಬಿಕ ಕಲಹದ (Domestic Dispute) ಕೇಸ್ ಇತ್ಯರ್ಥ ಪಡಿಸುವ ನೆಪದಲ್ಲಿ ಮನೆಗೆ ನುಗ್ಗಿದ ಪೊಲೀಸರು, ಬರೋಬ್ಬರಿ 137 ಗ್ರಾಂ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ನಗದನ್ನು ದೋಚಿಕೊಂಡು ಹೋಗಿರುವ ಕರಾಳ ಕರ್ಮಕಾಂಡ ಬಯಲಾಗಿದೆ. ಈ ದರೋಡೆಯ ಸಂಪೂರ್ಣ ದೃಶ್ಯಾವಳಿಗಳು 'ಏಷ್ಯಾನೆಟ್ ಸುವರ್ಣ ನ್ಯೂಸ್'ಗೆ (Asianet Suvarna News EXCLUSIVE) ಲಭ್ಯವಾಗಿದ್ದು, ಇಡೀ ರಾಜ್ಯ ಪೊಲೀಸ್ ಇಲಾಖೆಯ ಮಾನ ಹರಾಜಾಗಿದೆ.
ವರ್ತೂರು ಪೊಲೀಸರ ವಿರುದ್ಧ ಕಮಿಷನರ್‌ಗೆ ದೂರು:
ಈ ಕೃತ್ಯ ಎಸಗಿದ ವರ್ತೂರು ಪೊಲೀಸ್ ಠಾಣೆಯ (Varthur Police Station) ಪಿಎಸ್‌ಐ ಯೇಸುದಾಸ್ (PSI Yesudas) ಹಾಗೂ ಪೇದೆ ಸಂತೋಷ್ ನಾಯಕ್ (PC Santosh Naik) ವಿರುದ್ಧ ಉಮೇರಾ ಎಂಬ ಸಂತ್ರಸ್ತ ಮಹಿಳೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ (City Police Commissioner) ಬಿ.ದಯಾನಂದ್ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ (SHRC) ಸಿಸಿಟಿವಿ (CCTV Footage) ಸಾಕ್ಷ್ಯಾಧಾರಗಳ ಸಮೇತ ದೂರು ನೀಡಿದ್ದಾರೆ.
ಘಟನೆಯ ಹಿನ್ನೆಲೆ ಏನು?
ಬೆಂಗಳೂರಿನ ವರ್ತೂರಿನ ಪ್ರಕಾಶ್ ಲೇಔಟ್ ನಿವಾಸಿ ಉಮೇರಾ ಅವರ ಮಗ ಜುನೈದ್ ಎಂಬುವವರ ಜೊತೆಗೆ ಕುಲ್ಸುಮ್ ಎಂಬಾಕೆಯ ಮದುವೆ ಇದೇ ವರ್ಷ ನಡೆದಿತ್ತು. ಮದುವೆಯಾಗಿ 4 ತಿಂಗಳ ನಂತರ ದಂಪತಿ ನಡುವೆ ಮನಸ್ತಾಪ ಉಂಟಾಗಿ, ಕುಲ್ಸುಮ್ ಗಂಡ ಮತ್ತು ಅತ್ತೆಗೆ ತಿಳಿಸದೇ ತವರು ಮನೆಗೆ ಹೋಗಿದ್ದಳು. ಹಲವು ಬಾರಿ ಮಾತುಕತೆ ನಡೆಸಿದರೂ ಆಕೆ ಗಂಡನ ಮನೆಗೆ ಬರಲಿಲ್ಲ. ಇತ್ತೀಚೆಗೆ ಕುಲ್ಸುಮ್ ವರ್ತೂರು ಪೊಲೀಸ್ ಠಾಣೆಯಲ್ಲಿ ಗಂಡ ಜುನೈದ್ ವಿರುದ್ಧ ಕೌಟುಂಬಿಕ ದೌರ್ಜನ್ಯ ದೂರು ನೀಡಿದ್ದಳು.
20-30 ಜನರ ಗುಂಪು ಕರೆತಂದು ಪೊಲೀಸರಿಂದಲೇ ಲೂಟಿ!
ಜುಲೈ 17ರಂದು ‘ನಿಮ್ಮ ಮೇಲೆ ಕೇಸ್ ಇದೆ’ ಎಂದು ಹೇಳಿ ವರ್ತೂರು ಪಿಎಸ್‌ಐ ಯೇಸುದಾಸ್ ಹಾಗೂ ಪೇದೆ ಸಂತೋಷ್ ನಾಯಕ್, ದೂರುದಾರ ಕುಲ್ಸುಮ್, ಆಕೆಯ ತಂದೆ-ತಾಯಿ ಮತ್ತು ಬರೋಬ್ಬರಿ 20 ರಿಂದ 30 ಜನರ ಅಕ್ರಮ ಗುಂಪನ್ನು (Illegal Mob) ಕರೆದುಕೊಂಡು ಉಮೇರಾ ಅವರ ಮನೆಗೆ ಏಕಾಏಕಿ ನುಗ್ಗಿದ್ದಾರೆ. ನ್ಯಾಯಾಲಯದ ಯಾವುದೇ ಸರ್ಚ್ ವಾರಂಟ್ (Search Warrant) ಇಲ್ಲದೆ ಕಾನೂನುಬಾಹಿರವಾಗಿ ಮನೆಗೆ ನುಗ್ಗಿದ ಪೊಲೀಸರು, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ.
137 ಗ್ರಾಂ ಚಿನ್ನಾಭರಣ (Gold Jewellery)
₹5 ಲಕ್ಷ ನಗದು ಹಣ (Cash)
ಅಡುಗೆ ಮನೆಯಲ್ಲಿದ್ದ ₹10,000 ನಗದು (Kitchen Cash)
ಬೆಲೆಬಾಳುವ ಸೀರೆಗಳು, ಬ್ರಾಂಡೆಡ್ ವಾಚ್, ಕೂಲಿಂಗ್ ಗ್ಲಾಸ್ ಹಾಗೂ 3 ಮೊಬೈಲ್‌ಗಳು
ಪೇದೆ ಸಂತೋಷ್ ನಾಯಕ್ ಸ್ವತಃ ನಿಂತು ಮನೆಯಲ್ಲಿದ್ದ ವಸ್ತುಗಳನ್ನು ಜಾಲಾಡಿ, ಅಡುಗೆ ಮನೆಯಲ್ಲಿದ್ದ 10 ಸಾವಿರ ಹಣವನ್ನೂ ಬಿಡದೇ ಕದ್ದುಕೊಂಡು ಹೋಗಿದ್ದಾನೆ ಎಂದು ಉಮೇರಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಖಾಕಿ ಕಳಂಕ: ತೀವ್ರ ಆಕ್ರೋಶ!
ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಪೊಲೀಸರು (Karnataka Police) ಹೊರ ರಾಜ್ಯಗಳಲ್ಲಿ ಅರೆಸ್ಟ್ ಆಗುವುದು, ಹಫ್ತಾ ವಸೂಲಿ, ಕಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿ ಇಲಾಖೆಗೆ ಕಪ್ಪುಚುಕ್ಕೆ ತರುತ್ತಿದ್ದಾರೆ. ಈಗ ಬೆಂಗಳೂರಿನಲ್ಲೇ ರಕ್ಷಣೆ ನೀಡಬೇಕಾದ ಪೊಲೀಸರು ಸುಪಾರಿ ಗ್ಯಾಂಗ್‌ನಂತೆ ಮನೆಗೆ ನುಗ್ಗಿ ರಾಬರಿ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಪ್ಪಿತಸ್ಥ ಪಿಎಸ್‌ಐ ಹಾಗೂ ಪೇದೆಯನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಿ (Dismissal) ಜೈಲಿಗಟ್ಟಬೇಕು ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

