- Home
- Karnataka Districts
- ಬೆಂಗಳೂರು ನೈಸ್ ರೋಡ್ ಬಳಿ 2 ಸ್ಕೂಲ್ ಬಸ್‌ಗಳ ಅಪಘಾತ, ಒಂದು ಬಸ್ ಪಲ್ಟಿ, ಗಾಯಗೊಂಡ ಮಕ್ಕಳು!
ಬೆಂಗಳೂರು ನೈಸ್ ರೋಡ್ ಬಳಿ 2 ಸ್ಕೂಲ್ ಬಸ್‌ಗಳ ಅಪಘಾತ, ಒಂದು ಬಸ್ ಪಲ್ಟಿ, ಗಾಯಗೊಂಡ ಮಕ್ಕಳು!
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿ ಎರಡು ಶಾಲಾ ಬಸ್‌ಗಳ ನಡುವೆ ಅಪಘಾತ ಸಂಭವಿಸಿದೆ. ಒಂದು ಬಸ್ ಪಲ್ಟಿಯಾಗಿದ್ದರೂ ಮಕ್ಕಳು ಗಾಯಗೊಂಡಿದ್ದಾರೆ. ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
- FB
- TW
- Linkdin
Follow Us
)
ಬೆಂಗಳೂರು (ಜೂ. 10): ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿಯ ಮಾದಾವಾರದ ನೈಸ್ ರಸ್ತೆಯ ಪಿಕಾಕ್ ಬಡಾವಣೆಯ ಬಳಿ ಸೋಮವಾರ ಬೆಳಿಗ್ಗೆ ಎರಡು ಶಾಲಾ ಬಸ್‌ಗಳ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಒಂದು ಸ್ಕೂಲ್ ಬಸ್ ಪಲ್ಟಿಯಾಗಿದ್ದರೂ ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ.
ಬೆಂಗಳೂರು ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್‌ಗೆ ಸೇರಿದ ಬಸ್ ಅಪಘಾತಕ್ಕೊಳಗಾಗಿದ್ದು, 20ಕ್ಕೂ ಹೆಚ್ಚಿನ ಶಾಲಾ ಮಕ್ಕಳು ಅದರೊಳಗೆ ಪ್ರಯಾಣಿಸುತ್ತಿದ್ದರು. ಬೆಳಗ್ಗೆ ಶಾಲೆಗೆ ಕರೆಯ್ಯುತ್ತಿದ್ದ ಬಸ್ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಬಸ್‌ನಲ್ಲಿ ಕೆಲ ಮಕ್ಕಳು ಸಣ್ಣಪುಟ್ಟ ಗಾಯಗಳಾಗಿವೆ.
ಆದರೆ, ಎಲ್ಲ ಮಕ್ಕಳು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೊತೆಗೆ, ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಗಾಯಗೊಂಡ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಇನ್ನು ಎರಡು ಬಸ್‌ಗಳ ನಡುವೆ ಸಂಭವಿಸಿದ ಅಪಘಾತದ ಸಂದರ್ಭದಲ್ಲಿ ಮತ್ತೊಂದು ಬಸ್ ಪಲ್ಟಿಯಾಗದ ಕಾರಣ ಗಂಭೀರ ದುರ್ಘಟನೆ ತಪ್ಪಿದಂತೆ ಆಗಿದೆ. ಈ ಘಟನೆಯಿಂದ ಪೋಷಕರು ಆತಂಕಗೊಂಡಿದ್ದಾರೆ. ಘಟನೆಯ ಮಾಹಿತಿಯೊಂದಿಗೆ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಈ ಘಟನೆ ಚಾಲಕರ ಅಜಾಗರೂಕತೆಯ ಪರಿಣಾಮವಾಗಿದ್ದರೂ, ಶಾಲಾ ವಾಹನಗಳ ಸುರಕ್ಷತೆ ಮತ್ತು ಡ್ರೈವರ್‌ಗಳ ಪ್ರಾಥಮಿಕ ತರಬೇತಿಯ ಕುರಿತು ಇದೀಗ ಪ್ರಶ್ನೆಗಳು ಮೂಡುತ್ತಿವೆ. ಪೋಷಕರು ಹಾಗೂ ಸಾರ್ವಜನಿಕರು ಸಂಬಂಧಿತ ಇಲಾಖೆಗಳಿಂದ ಸೂಕ್ತ ಕ್ರಮದ ನಿರೀಕ್ಷೆಯಲ್ಲಿ ಇದ್ದಾರೆ.