ವಿಮಾನ ನಿಲ್ದಾಣದಲ್ಲಿ ತುಳು ನಾಡಿನ ಸಂಸ್ಕೃತಿ..! ಇಲ್ಲಿವೆ ಕಣ್ಮನ ಸೆಳೆಯೋ ಕಲಾಕೃತಿ

First Published 5, Jan 2020, 9:54 AM IST

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕಲಾಕೃತಿಗಳಿಂದ ಸುಂದರಗೊಳಿಸುವ ಯೋಜನೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಗಿದೆ. ತುಳು ನಾಡಿನ ಸಂಸ್ಕೃತಿ ಬಿಂಬಿಸುವ ಸುಂದರ ಕಲಾಕೃತಿಗಳು ವಿಮಾನ ನಿಲ್ದಾಣದಲ್ಲಿ ರಚಿಸಲಾಗಿದ್ದು, ಪ್ರಯಾಣಿಸಕರನ್ನು ರಂಜಿಸುತ್ತಿದೆ.

26 ಅಡಿ ಎತ್ತರದ ಮಾನವನ ಕೈ ಮತ್ತು ಅದರಲ್ಲಿ ಕಾಗದದ ರಾಕೆಟ್‌ ಕಲಾಕೃತಿಯನ್ನು ವಿಮಾನ ನಿಲ್ದಾಣದ ಹೊರಭಾಗದಲ್ಲಿ ನಿರ್ಮಿಸಲಾಗಿದೆ.

ದಂಪತಿಗಳಿಬ್ಬರು ಕುಳಿತು ವಿಶ್ರಮಿಸುತ್ತಿರುವ ಕಲಾಕೃತಿ ರಚಿಸಲಾಗಿದ್ದು, ಇದು ತುಳುನಾಡಿನ ಜನಜೀವನವನ್ನು ಬಿಂಬಿಸುತ್ತದೆ.

ಮಾನವನ ಕೈಯಲ್ಲಿ ಕಾಗದದ ರಾಕೆಟ್. ಇದು ವಿಮಾನ ಪ್ರಯಾಣಿಕರ ಕನಸು ಮತ್ತು ಆಕಾಂಕ್ಷೆಗಳನ್ನು ಸೂಚಿಸುವ ಚಿತ್ರ.

ಫೈಬರ್‌ ಗ್ಲಾಸ್‌ ಮತ್ತು ಸ್ಟೀಲ್‌ ಮೆಟೀರಿಯಲ್‌ನಿಂದ ಹುಲಿವೇಷ ಕುಣಿತದ ಚಿತ್ರಣವನ್ನು ಆಗಮನ ದ್ವಾರದಲ್ಲಿ ನಿರ್ಮಿಸಲಾಗಿದೆ.

ಕಲಾವಿದೆ ರೇಷ್ಮಾ ಎಸ್‌.ಶೆಟ್ಟಿಅವರು ಮೂಡುಬಿದಿರೆ ಜೈನ ಮಠ ಮತ್ತು ಶ್ರವಣ ಬೆಳಗೊಳ ಮಠದ ಅಧಿಕೃತ ಸಾಂಪ್ರದಾಯಿಕ ಜೈನ ವರ್ಣ ಚಿತ್ರಗಳನ್ನು ಆಧರಿಸಿ 18*6 ಅಡಿಯ ಜೈನ್‌ ಮಿನಿಯೇಚರ್‌ ಪೈಂಟಿಂಗ್‌ ರಚಿಸಿದ್ದಾರೆ.

ನಿಲ್ದಾಣದ ನಿರ್ಗಮನ ಆವರಣದಲ್ಲಿ ಕಂಬಳದ ಫೈಬರ್‌ ಗ್ಲಾಸ್‌ ಶಿಲ್ಪವನ್ನು ರಚಿಸಲಾಗಿದ್ದು, ಕರಾವಳಿಯ ಜಾನಪದ ಕಲೆಯನ್ನು ಪ್ರವಾಸಿಗರಿಗೆ ಪರಿಚಯಿಸುವುದು ಉದ್ದೇಶ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕಲಾಕೃತಿಗಳಿಂದ ಸುಂದರಗೊಳಿಸುವ ಯೋಜನೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಗಿದೆ ಎಂದು ರಥಬೀದಿಯ ಎಸ್‌ಕ್ಯೂಬ್‌ ಆರ್ಟ್‌ ಗ್ಯಾಲರಿಯ ಮುಖ್ಯಸ್ಥ ಶಶಾಂಕ್‌ ತಿಳಿಸಿದ್ದಾರೆ.

ಹುಲಿ ವೇಷದ ಕಲಾಕೃತಿ ಮೂಲಕ ವಿಶ್ವ ಪ್ರಸಿದ್ಧ ಮಂಗಳೂರಿನ ಹುಲಿವೇಷವನ್ನು ಪ್ರವಾಸಿಗರಿಗೆ ಪರಿಚಯಿಸಲಾಗುತ್ತಿದೆ ಎಂದು ಈ ಕಲಾಕೃತಿಗಳನ್ನು ರಚಿಸಿದ ಕಲಾವಿದ ಹರೀಶ್‌ ಕೊಡಿಯಾಲ್‌ಬೈಲ್‌ ವಿವರಿಸಿದ್ದಾರೆ.

ತುಳು ನಾಡಿನ ವಿಶೇಷ ಆರಾಧನೆಗಳ ಕುರಿತು ತಿಳಿಸುವ ಕಲಾಕೃತಿಗಳನ್ನೂ ರಚಿಸಲಾಗಿದೆ.

Mangalore Airport

Mangalore Airport

loader