ದೇವರ ಪಟ್ಟಾಭಿಷೇಕಕ್ಕೆ 18 ವರ್ಷ: ಗವಿಮಠಕ್ಕೆ ಗತವೈಭವ ಮರುಕಳಿಸಿದ ಶ್ರೀಗಳು
First Published Dec 13, 2020, 10:30 AM IST
ಸೋಮರಡ್ಡಿ ಅಳವಂಡಿ
ಕೊಪ್ಪಳ(ಡಿ.13): ಸಮಾಜಮುಖಿ ಕಾರ್ಯಗಳಿಂದ ಇಡೀ ರಾಜ್ಯದ ಗಮನ ಸೆಳೆದಿರುವ ಕೊಪ್ಪಳ ಗವಿಮಠದ 18ನೇ ಪೀಠಾಧಿಪತಿ ಗವಿಸಿದ್ಧೇಶ್ವರ ಸ್ವಾಮಿಗಳ ಪಟ್ಟಾಭಿಷೇಕವಾಗಿ ಇಂದಿಗೆ ಬರೋಬ್ಬರಿ 18 ವರ್ಷ ಪೂರ್ಣಗೊಂಡು 19ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದಾರೆ.

ಶ್ರೀಗಳು ಇದುವರೆಗೂ ಎಂದೂ ತಮ್ಮ ಪಟ್ಟಾಭಿಷೇಕ ಮಹೋತ್ಸವವನ್ನು ಆಚರಣೆ ಮಾಡಿಕೊಂಡಿಲ್ಲ. ಅಂದು ಸಹ ಎಂದಿನಂತೆ ವಿಶೇಷ ದಿನವೆಂದು ಪರಿಗಣಿಸದೆ ಕಾಯಕದಲ್ಲಿ ನಿರತರಾಗುತ್ತಾರೆ.

2002ರ ಡಿ. 13ರಂದು ಕೊಪ್ಪಳ ಸಂಸ್ಥಾನ ಗವಿಮಠದ 18ನೇ ಪೀಠಾಧಿಪತಿಗಳಾಗಿ ಕಲಬುರಗಿ ಜಿಲ್ಲೆಯ ಹಾಗರಗುಂಡಿ ಗ್ರಾಮದ ಪರ್ವತಯ್ಯ ದೇವರ ಪಟ್ಟಾಭಿಷೇಕವಾಯಿತು. ಕೇವಲ 25ನೇ ವಯಸ್ಸಿನಲ್ಲಿಯೇ ಪಟ್ಟಕ್ಕೇರಿದರು. ಕನ್ನಡ, ಸಂಸ್ಕೃತ ಪಂಡಿತ ಸ್ನಾತಕ ಪದವಿಧರರು. ಪದವಿಯಲ್ಲಿ ಕಲಬುರಗಿ ವಿವಿಯ 6ನೇ ರಾರಯಂಕ್ ಪಡೆದ ಹಿರಿಮೆ ಇವರದು. 6ನೇ ತರಗತಿ ಇರುವಾಗಲೇ ಮಠದಲ್ಲಿ ಅಭ್ಯಾಸ ಮಾಡುತ್ತಿರುವಾಗ 17ನೇ ಪೀಠಾಧಿಪತಿಗಳಾಗಿದ್ದ ಶಿವಶಾಂತವೀರ ಸ್ವಾಮಿಗಳ ಕೃಪೆಗೆ ಪಾತ್ರವಾಗಿರುತ್ತಾರೆ. ಅವರ ಲಿಂಗೈಕ್ಯದ ಬಳಿಕ ಇವರಿಗೆ ಪಟ್ಟಕಟ್ಟಲಾಗುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?