ಉಳಿದಿದ್ದು ಬರಿ ಕಣ್ಣೀರು..ಪೋಟೋ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿ ಮನವಿ ಮಾಡಿಕೊಂಡ್ರು!

First Published Feb 6, 2021, 5:28 PM IST

ಧಾರವಾಢ(ಫೆ. 06) ಜನವರಿ 15 ರಂದು ಧಾರವಾಡ ತಾಲೂಕಿನ ಇಟಿಗಟ್ಟಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 10 ಮಹಿಳೆಯರು ಮೃತಪಟ್ಟಿದ್ದರು. ಒಟ್ಟಾಗಿ ಗೋವಾಕ್ಕೆ ಹೊರಟಿದ್ದ ಬಾಲ್ಯ ಗೆಳತಿಯರೆಲ್ಲ ಮಸಣ ಸೇರಿದ್ದರು.  ರಸ್ತೆ ಅಗಲವಾಗಿ ಇಲ್ಲದಿರುವುದೆ ದುರ್ಘಟನೆಗೆ ಕಾರಣ ಎಂದು ಹೇಳಿರುವ ಕುಟುಂಬಸ್ಥರು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ.