ಐಪಿಎಲ್ ಟೂರ್ನಿಯಲ್ಲಿ ಅತಿವೇಗದ ಶತಕ ಸಿಡಿಸಿದ ಟಾಪ್ 5 ಕ್ರಿಕೆಟಿಗರಿವರು..!

First Published 10, Sep 2020, 5:08 PM

ಬೆಂಗಳೂರು: ಭಾರತದ ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್ ಟೂರ್ನಿ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹೊಡಿಬಡಿಯಾಟಕ್ಕೆ ಹೆಸರಾದ ಐಪಿಎಲ್ ಟೂರ್ನಿಯಲ್ಲಿ ಹಲವಾರು ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿ ಬೊಬ್ಬಿರಿದಿದ್ದಾರೆ.
ಇದುವರೆಗೂ 12 ಐಪಿಎಲ್ ಆವೃತ್ತಿಗಳು ಮುಕ್ತಾಯವಾಗಿದ್ದು 57 ಶತಕಗಳು ದಾಖಲಾಗಿವೆ. ಕ್ರಿಸ್‌ ಗೇಲ್ ಒಬ್ಬರೇ 6 ಶತಕ ಚಚ್ಚಿದ್ದರೆ, ವಿರಾಟ್ ಕೊಹ್ಲಿ 5, ಡೇವಿಡ್ ವಾರ್ನರ್ ಹಾಗೂ ಶೇನ್ ವಾಟ್ಸನ್ ತಲಾ 4 ಶತಕ ಸಿಡಿಸಿದ್ದಾರೆ. ಈ ಸಂದರ್ಭದಲ್ಲಿ ಐಪಿಎಲ್ ಇತಿಹಾಸದಲ್ಲಿ ಅತಿವೇಗವಾಗಿ ಶತಕ ಸಿಡಿಸಿದ ಟಾಪ್ 5 ಆಟಗಾರರ ಪಟ್ಟಿ ನಿಮ್ಮ ಮುಂದೆ...

1. ಕ್ರಿಸ್ ಗೇಲ್: 30 ಎಸೆತ

1. ಕ್ರಿಸ್ ಗೇಲ್: 30 ಎಸೆತ

ಏಪ್ರಿಲ್ 23, 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಕ್ರಿಸ್‌ ಗೇಲ್ ಪುಣೆ ವಾರಿಯರ್ಸ್ ವಿರುದ್ಧ ಕೇವಲ 30 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಖಲಿಸಿದ್ದರು. ಈ ಪಂದ್ಯದಲ್ಲಿ ಗೇಲ್ ಒಟ್ಟು 66 ಎಸೆತಗಳನ್ನು ಎದುರಿಸಿ 17 ಸಿಡಿಲಬ್ಬರದ ಸಿಕ್ಸರ್‌ಗಳ ನೆರವಿನಿಂದ 175 ರನ್ ಬಾರಿಸಿದ್ದರು.

2. ಯೂಸೂಪ್ ಪಠಾಣ್: 37 ಎಸೆತ

2. ಯೂಸೂಪ್ ಪಠಾಣ್: 37 ಎಸೆತ

ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ಯೂಸುಪ್ ಪಠಾಣ್ ಮಾರ್ಚ್ 13, 2010ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಪಠಾಣ್ ಸ್ಪೋಟಕ ಶತಕದ ಹೊರತಾಗಿಯೂ ರಾಜಸ್ಥಾನ ರಾಯಲ್ಸ್ ತಂಡ 4 ವಿಕೆಟ್‌ಗಳಿಂದ ಶರಣಾಗಿತ್ತು.

3. ಡೇವಿಡ್ ಮಿಲ್ಲರ್: 38 ಎಸೆತ

3. ಡೇವಿಡ್ ಮಿಲ್ಲರ್: 38 ಎಸೆತ

ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿದ್ದ ಡೇವಿಡ್ ಮಿಲ್ಲರ್ ಮೇ 06, 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಕ್ಷರಶಃ ಅಬ್ಬರಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿ 190 ರನ್ ಗಳಿಸಿದ್ದ ಆರ್‌ಸಿಬಿ ಬಳಿಕ 9.5 ಓವರ್‌ಗಳಲ್ಲಿ ಕೇವಲ 64 ರನ್ ನೀಡಿ 4 ವಿಕೆಟ್ ಕಬಳಿಸಿ ಗೆಲುವಿನ ಕನವರಿಕೆಯಲ್ಲಿತ್ತು. ಈ ವೇಳೆ ಕೇವಲ 38 ಎಸೆತಗಳಲ್ಲಿ ಶತಕ ಸಿಡಿಸಿ ಮಿಲ್ಲರ್ ಆರ್‌ಸಿಬಿ ಪಾಲಿಗೆ ಕಿಲ್ಲರ್ ಮಿಲ್ಲರ್ ಎನಿಸಿದರು.

4. ಆಡಂ ಗಿಲ್‌ಕ್ರಿಸ್ಟ್: 42 ಎಸೆತ

4. ಆಡಂ ಗಿಲ್‌ಕ್ರಿಸ್ಟ್: 42 ಎಸೆತ

ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಆಡಂ ಗಿಲ್‌ಕ್ರಿಸ್ಟ್ ಏಪ್ರಿಲ್ 27, 2008ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 42 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಅವರ ಈ ಇನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 10 ಸಿಕ್ಸರ್‌ಗಳು ಸೇರಿದ್ದವು.

5. ಎಬಿ ಡಿವಿಲಿಯರ್ಸ್: 43 ಎಸೆತ

5. ಎಬಿ ಡಿವಿಲಿಯರ್ಸ್: 43 ಎಸೆತ

ಮಿಸ್ಟರ್ 360 ಖ್ಯಾತಿಯ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಮೇ.14, 2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಕೇವಲ 43 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಪಂದ್ಯದಲ್ಲಿ ಕೊಹ್ಲಿ ಕೂಡಾ ಶತಕ ಬಾರಿಸಿದ್ದರು. ಅಂತಿಮವಾಗಿ ಗುಜರಾತ್ ಲಯನ್ಸ್ ವಿರುದ್ಧ ಆರ್‌ಸಿಬಿ 144 ರನ್‌ಗಳ ಭಾರೀ ಅಂತರದ ಜಯ ಸಾಧಿಸಿತ್ತು.

6. ಡೇವಿಡ್ ವಾರ್ನರ್: 43 ಎಸೆತ

6. ಡೇವಿಡ್ ವಾರ್ನರ್: 43 ಎಸೆತ

ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಏಪ್ರಿಲ್ 30, 2017ರಲ್ಲಿ ಕೊಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಕೇವಲ 43 ಎಸೆತಗಳಲ್ಲಿ ಶತಕ ಪೂರೈಸಿ ಎಬಿಡಿ ಜತೆ ಜಂಟಿ 5ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

loader