IPL ಟೂರ್ನಿಯ ಟಾಪ್ 10 ಸಾರ್ವಕಾಲಿಕ ಗೇಮ್‌ ಚೇಂಜರ್‌ಗಳಿವರು..!

First Published 9, Sep 2020, 5:48 PM

ನವದೆಹಲಿ: ಭಾರತದ ಚುಟುಕು ಕ್ರಿಕೆಟ್ ಹಬ್ಬ ಎಂದೇ ಕರೆಯಲ್ಪಡುವ ಇಂಡಿಯನ್ ಪ್ರೀಮಿಯರ್ ಲೀಗ್ 12 ಯಶಸ್ವಿ ಆವೃತ್ತಿಗಳನ್ನು ಪೂರೈಸಿದ್ದು, ಇದೀಗ 13ನೇ ಆವೃತ್ತಿಯ ಐಪಿಎಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ಹಲವು ಮಂದಿ ಮಿಂಚಿ ಮರೆಯಾಗಿದ್ದಾರೆ, ಮತ್ತೆ ಕೆಲವರೂ ಇಂದಿಗೂ ತಮ್ಮ ಖದರ್ ಉಳಿಸಿಕೊಂಡಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಕೆಲ ಆಟಗಾರರು ಏಕಾಂಗಿಯಾಗಿ ಪಂದ್ಯದ ಗತಿಯನ್ನೇ ಬದಲಾಯಿಸಿದ್ದಾರೆ. ಇನ್ನೇನು ತಂಡ ಹೀನಾಯ ಸೋಲು ಕಾಣಲಿದೆ ಎಂದು ಲೆಕ್ಕಾಹಾಕುವಷ್ಟರಲ್ಲೇ ಏಕಾಏಕಿ ಕೆಲ ಆಟಗಾರರು ಪಂದ್ಯದ ದಿಕ್ಕನ್ನೇ ಬದಲಿಸಿ ಬಿಟ್ಟಿದ್ದಾರೆ. ಅಂತಹ ಟಾಪ್ 10 ಸಾರ್ವಕಾಲಿಕ ಶ್ರೇಷ್ಠ ಟಾಪ್ 10 ಆಟಗಾರರು ನಿಮ್ಮ ಮುಂದೆ.

1. ಕ್ರಿಸ್ ಗೇಲ್:

1. ಕ್ರಿಸ್ ಗೇಲ್:

ಕೆರಿಬಿಯನ್ ದೈತ್ಯ ಪ್ರತಿಭೆ. 11 ಐಪಿಎಲ್ ಟೂರ್ನಿ ಆಡಿರುವ ಗೇಲ್ 41ರ ಸರಾಸರಿಯಲ್ಲಿ 4100 ರನ್ ಬಾರಿಸಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಗೇಲ್ ಎದುರಾಳಿ ತಂಡದ ಜಂಘಾಬಲವನ್ನೇ ಉಡುಗಿ ಹೋಗುವಂತೆ ಮಾಡಿದ್ದಾರೆ.

2. ರೋಹಿತ್ ಶರ್ಮಾ

2. ರೋಹಿತ್ ಶರ್ಮಾ

3. ರೋಹಿತ್ ಶರ್ಮಾ (ಪಂದ್ಯ: 188, ರನ್‌:4898, ಗರಿಷ್ಠ ವೈಯುಕ್ತಿಕ ಸ್ಕೋರ್: 109*)

3 ಸುರೇಶ್ ರೈನಾ;

3 ಸುರೇಶ್ ರೈನಾ;

ಮಿಸ್ಟರ್ ಐಪಿಎಲ್ ಎಂದೇ ಕರೆಸಿಕೊಳ್ಳುವ ಸುರೇಶ್ ರೈನಾ ಸ್ಥಿರ ಪ್ರದರ್ಶನಕ್ಕೆ ಹೆಸರಾಗಿದ್ದಾರೆ. ರೈನಾ ಕಳೆದ 12 ಆವೃತ್ತಿಗಳ ಪೈಕಿ 9 ಆವೃತ್ತಿಗಳಲ್ಲಿ 400+ ರನ್ ಬಾರಿಸಿದ್ದಾರೆ. ಇದರ ಜತೆಗೆ ಸಿಎಸ್‌ಕೆ ತಂಡ 3 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ರೈನಾ ಪಾತ್ರ ಮರೆಯುವಂತಿಲ್ಲ.

4. ವಿರಾಟ್ ಕೊಹ್ಲಿ:

4. ವಿರಾಟ್ ಕೊಹ್ಲಿ:

ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್‌ಮನ್. 2016ನೇ ಆವೃತ್ತಿ ಐಪಿಎಲ್‌ನಲ್ಲಿ 4 ಶತಕ ಸೇರಿದಂತೆ 970ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಕೊಹ್ಲಿ ಕಪ್ ಗೆಲ್ಲದಿದ್ದರು, ಬೆಂಗಳೂರು ಅಭಿಮಾನಿಗಳ ಮನಗೆದ್ದಿರುವುದಂತು ಸುಳ್ಳಲ್ಲ.

5. ಎಬಿ ಡಿವಿಲಿಯರ್ಸ್:

5. ಎಬಿ ಡಿವಿಲಿಯರ್ಸ್:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್ ಮಷೀನ್‌, ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಇದುವರೆಗೂ 154 ಪಂದ್ಯಗಳನ್ನಾಡಿ 4400 ರನ್ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಎಬಿಡಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

6. ಎಂ ಎಸ್ ಧೋನಿ:

6. ಎಂ ಎಸ್ ಧೋನಿ:

ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಸಿಎಸ್‌ಕೆ ಪಾಲಿನ ಆರಾಧ್ಯ ದೈವ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ತಂಡ 3 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ಜತೆಗೆ ಸಿಎಸ್‌ಕೆ ಆಡಿದ ಎಲ್ಲಾ ಆವೃತ್ತಿಯಲ್ಲೂ ಪ್ಲೇ ಆಫ್ ಹಂತ ಪ್ರವೇಶಿಸಿದೆ. ಕ್ಲಾಸ್ ವಿಕೆಟ್ ಕೀಪರ್, ಮ್ಯಾಚ್‌ ಫಿನಿಶರ್ ಧೋನಿ ನಿಜಕ್ಕೂ ರಿಯಲ್ ಗೇಮ್‌ ಚೇಂಜರ್.

7. ಆ್ಯಂಡ್ರೆ ರಸೆಲ್:

7. ಆ್ಯಂಡ್ರೆ ರಸೆಲ್:

ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಯಾವ ಕ್ಷಣದಲ್ಲಿ ಬೇಕಾದರೂ ಪಂದ್ಯದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯವಿರುವ ಆಟಗಾರನೆಂದರೆ ಅದು ಆ್ಯಂಡ್ರೆ ರಸೆಲ್. ಐಪಿಎಲ್ ಇತಿಹಾಸದಲ್ಲಿ ಬೌಂಡರಿಗಿಂತ ಸಿಕ್ಸರ್ ಹೆಚ್ಚು ಬಾರಿಸಿದ ಕೆಲವೇ ಕೆಲವು ಆಟಗಾರರಲ್ಲಿ ರಸೆಲ್ ಅಗ್ರಗಣ್ಯ ಬ್ಯಾಟ್ಸ್‌ಮನ್. ಬೌಲಿಂಗ್ ರಸೆಲ್ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ.

8 ಅಮಿತ್ ಮಿಶ್ರಾ

8 ಅಮಿತ್ ಮಿಶ್ರಾ

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಸ್ಪಿನ್ನರ್ ಎಂದರೆ ಅದು ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ. 12 ಆವೃತ್ತಿಗಳಲ್ಲಿ ಮಿಶ್ರಾ 157 ಬಲಿ ಪಡೆದಿದ್ದಾರೆ. ಇದರ ಜತೆಗೆ ಮಿಶ್ರಾ 3 ಹ್ಯಾಟ್ರಿಕ್ ಕಬಳಿಸಿ ದಾಖಲೆ ಬರೆದಿದ್ದಾರೆ.

9. ಜಸ್ಪ್ರೀತ್ ಬುಮ್ರಾ

9. ಜಸ್ಪ್ರೀತ್ ಬುಮ್ರಾ

ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್ ತಬ್ಬಿಬ್ಬು ಮಾಡುವ ಸಾಮರ್ಥ್ಯವಿರುವ ಆಟಗಾರ. ಡೆತ್ ಓವರ್‌ನಲ್ಲೂ ಪರಿಣಾಮಕಾರಿ ದಾಳಿ ಸಂಘಟಿಸಿ ಬುಮ್ರಾ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಲವಾರು ಸ್ಮರಣೀಯ ಗೆಲುವನ್ನು ತಂದುಕೊಟ್ಟಿದ್ದಾರೆ.

10. ಲಸಿತ್ ಮಾಲಿಂಗ:

10. ಲಸಿತ್ ಮಾಲಿಂಗ:

ಮುಂಬೈ ಇಂಡಿಯನ್ಸ್ ತಂಡದ ಅನುಭವಿ ವೇಗಿ ಲಸಿತ್ ಮಾಲಿಂಗ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್. ತಮ್ಮ ಮೊನಚಾದ ಬೌಲಿಂಗ್ ದಾಳಿಯ ಮೂಲಕ ಮಾಲಿಂಗ ಹಲವಾರು ಬಾರಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ದಾರೆ.

loader