IPL 2020 - ಕೂಲ್ ಹೇರ್‌ಸ್ಟೈಲ್‌ನ ಅಂಪೈರ್ ಲೇಡಿನಾ?
ಈ ಬಾರಿಯ ಐಪಿಎಲ್ ಮ್ಯಾಚ್‌ಗಳನ್ನು ನೇರವಾಗಿ ನೋಡಿ ಎಂಜಾಯ್ ಮಾಡುವ ಅವಕಾಶವನ್ನು ಖಂಡಿತವಾಗಿಯೂ ಭಾರತದಲ್ಲಿನ ಫ್ಯಾನ್ಸ್ ಮಿಸ್ ಮಾಡುಕೊಳ್ಳುತ್ತಿದ್ದಾರೆ. ದುಬೈನಲ್ಲಿ ನೆಡೆಯುತ್ತಿರುವ ಈ ಸೀಸನ್‌ನ ಪಂದ್ಯಗಳಿಗೆ ಪ್ರೇಕ್ಷಕರ ಪ್ರವೇಶವಿಲ್ಲದಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೂ ಐಪಿಎಲ್ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ಆಟಗಾರರ ಜೊತೆ ಈ ಬಾರಿ ಅಂಪೈರ್ ಕೂಡ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ನಡೆದ ಕೆಕೆಆರ್ ಮತ್ತು ಎಸ್‌ಆರ್‌ಹೆಚ್ ನಡುವಿನ ಐಪಿಎಲ್ ಪಂದ್ಯದಲ್ಲಿ ಅಂಪೈರ್ ಹುಡುಗನಾ? ಹುಡುಗಿನಾ? ಎಂಬ ಪ್ರಶ್ನೆ ಎಲ್ಲರಿಗೂ ಕಾಡಿತ್ತು. ಇದಕ್ಕೆ ಕಾರಣ ಅವರ ಕೂಲ್ ಹೇರ್‌ಸೈಲ್. ಆ ಅಂಪೈರ್ ಯಾರು? ವಿವರ ಇಲ್ಲಿದೆ.
ಕೆಕೆಆರ್ ಮತ್ತು ಎಸ್‌ಆರ್‌ಹೆಚ್ ನಡುವಿನ ಐಪಿಎಲ್ ಪಂದ್ಯದ ಅಂಪೈರ್ ಹೇರಸ್ಟೈಲ್ ಸಖತ್ ಚರ್ಚೆಗೆ ಕಾರಣವಾಯಿತು. ಪಂದ್ಯದ ಅಂಪೈರ್ ಹುಡುಗಿನಾ ಹುಡುಗನಾ ಎಂಬ ಪ್ರಶ್ನೆಗಳು ಇಂಟರ್‌ನೆಟ್‌ನಲ್ಲಿ ಹರಿದಾಡಿದ್ದವು.
ಕೆಕೆಆರ್ ಮತ್ತು ಎಸ್‌ಆರ್‌ಹೆಚ್ ನಡುವಿನ ಹೆಚ್ಚು ಮ್ಯಾಚ್ ಸುದ್ದಿಯಾಗಲು ಕಾರಣದವರು ಅಂಪೈರ್ ಪಶ್ವಿಮ್ ಪಾಠಕ್. ಉದ್ದ ಕೇಶ ವಿನ್ಯಾಸದ ಕಾರಣ ಎಲ್ಲರೂ ಲೇಡಿ ಅಂಪೈರ್ ಎಂದು ಕನ್ಫೂಸ್ ಆದರು.
ರಾಕ್‌ಸ್ಟಾರ್ ಸಿನಿಮಾದಲ್ಲಿನ ರಣಬೀರ್ ಕಪೂರ್ ನೆನಪಿಸುವ ಇವರ ಹೇರ್‌ಸ್ಟೈಲ್‌ಗೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆದರು ಪಠಾಕ್.
43 ವರ್ಷದ ಪಶ್ಚಿಮ್ ಗಿರೀಶ್ ಪಾಠಕ್ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಅಂಪೈರ್. 2012ರಲ್ಲಿ ನಡೆದ ಎರಡು ಮಹಿಳಾ ಏಕದಿನ ಪಂದ್ಯಗಳಲ್ಲಿ ಅಂಪೈರ್ ಹಾಗೂ ಭಾರತದಲ್ಲಿ ನಡೆದ ಎರಡು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಿಗೆ ಸ್ಟ್ಯಾಂಡ್‌ಬೈ ಅಂಪೈರ್ ಆಗಿದ್ದರು.
ಪಠಾಕ್ 2015 ರಲ್ಲಿ, ಹೆಲ್ಮೆಟ್ ಧರಿಸಿದ ಮೊದಲ ಭಾರತೀಯ ಅಂಪೈರ್ ಎನಿಸಿಕೊಂಡರು.
ಕಳೆದ ವಾರ ನೆಡೆದ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅಂಪೈರಿಂಗ್ ಮಾಡುತ್ತಿದ್ದಾರೆ ಎಂದು ವೈರಲ್ ಆಗಿತ್ತು. ಕಾರಣ ಪಶ್ಚಿಮ್ ಪಠಾಕ್‌ರ ಧ್ವನಿ ಅಷ್ಟರ ಮಟ್ಟಿಗೆ ತೆಂಡಲ್ಕೂರ್ ಧ್ವನಿಗೆ ಹೋಲುತ್ತದೆ.
ಮಹರಾಷ್ಟ್ರ ಮೂಲದ ಪಸ್ಚಿಮ್ ಪಾಠಕ್ ಒಂದು ದಶಕದಿಂದ ಭಾರತೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 2014 ರಿಂದ 9 ಬಾರಿ ಐಪಿಎಲ್ ಭಾಗವಾಗಿರುವ ಇವರು ಅಂಪೈರ್ ಇವರು.