ಮಗಳನ್ನು ಮಿಸ್ ಮಾಡಿಕೊಂಡ ಶಮಿ, ಸೆಲ್ಫಿಯಲ್ಲಿ ಮುಳುಗಿರುವ ಪತ್ನಿ!
ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ 2020 ಪ್ಲೇ-ಆಫ್ ಘಟ್ಟ ತಲುಪಿದೆ. ಈ ಸೀಸನ್‌ನಲ್ಲಿ ಟ್ರೋಫಿ ಗೆಲ್ಲುವ ಕಿಂಗ್ಸ್ ಇಲೆವೆನ್ ಪಂಜಾಬ್ ಕನಸು ಭಗ್ನವಾಗಿದ್ದು ಟೂರ್ನಿಮೆಂಟ್‌ನಿಂದ ತಂಡ ಹೊರಬಿದ್ದಿದೆ. ಆದರೆ ತಂಡದ ಆಟಗಾರರು ಇನ್ನೂ ದುಬೈನಲ್ಲಿದ್ದಾರೆ. ಮೊಹಮ್ಮದ್ ಶಮಿ ತನ್ನ ಮಗಳನ್ನು ಬಹಳಷ್ಟು ಮಿಸ್ ಮಾಡಿಕೊಳ್ಳಿತ್ತಿದ್ದು, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಶಮಿ ಪತ್ನಿ ಹಸೀನ್ ತಮ್ಮ ಹಾಟ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ತಮ್ಮನ್ನು ಕೆಂಪು ಮೆಣಸಿನ ಕಾಯಿ ಎಂದು ಹೇಳಿಕೊಂಡಿದ್ದಾರೆ.
ಮೊಹಮ್ಮದ್ ಶಮಿ ಮತ್ತು ಹಸೀನ್ ಜಹಾನ್ 2 ವರ್ಷಗಳಿಂದ ಪರಸ್ಪರ ದೂರವಿರದ್ದಾರೆ. ಆದರೆ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್.
ಹಸೀನ್ ವೀಡಿಯೊ ಅಥವಾ ಫೋಟೋವನ್ನು ಅಂತರ್ಜಾಲದಲ್ಲಿ ಶೇರ್ ಮಾಡಿದಾಗ ಸುದ್ದಿಯಾಗುತ್ತದೆ. ಅದೇ ಸಮಯದಲ್ಲಿ, ಶಮಿ ಸಹ ಕಪ್ಪಿಂಗ್ ಥೆರಪಿಯ ಸಮಯದಲ್ಲಿ ಪೂಲ್‌ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಫೋಸ್ಟ್ ಮಾಡಿದ್ದರು.
ಇತ್ತೀಚೆಗೆ, ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್‌ಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ, ಇದರಲ್ಲಿ ಶಮಿ ತನ್ನ ಮಗಳನ್ನು ನೆನಪು ಮಾಡಿಕೊಂಡಿದ್ದರೆ, ಹಸೀನ್ ಜಹಾನ್ ಸೆಲ್ಫ್ ಲವ್‌ನಲ್ಲಿ ಮುಳುಗಿದ್ದಾರೆ.
ಮೊಹಮ್ಮದ್ ಶಮಿ ತಮ್ಮ ಮಗಳು ಐರಾ ಶಮಿ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಹಡಗಿನಲ್ಲಿ ಅವಳು ತನ್ನ ನಾಯಿ ಹಿಡಿದುಕೊಂಡಿದ್ದು ತುಂಬಾ ಮುದ್ದಾಗಿ ಕಾಣಿಸುತ್ತಾಳೆ.
ಈ ಫೋಟೋದೊಂದಿಗೆ ಶಮಿ 'ಅನಿಮಲ್ ಲವರ್' ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋದಲ್ಲಿ, ಐರಾ ತನ್ನ ತಂದೆಯಂತೆ ಕಾಣಿಸುತ್ತಾಳೆ.
ಶಮಿಗೆ ಮಗಳನ್ನು ತುಂಬಾ ಪ್ರೀತಿಸುತ್ತಾರೆ . ಕೆಲವು ತಿಂಗಳ ಹಿಂದೆ ಲಾಕ್ ಡೌನ್ ಸಮಯದಲ್ಲಿ ಅವರು ತಮ್ಮ ಮಗಳನ್ನು ತುಂಬಾ ಮಿಸ್ ಮಾಡಿಕೊಂಡು ಮಗಳ ನೆನಪಿಗಾಗಿ ಅವಳ ಪೇಟಿಂಗ್ ಮಾಡಿದ್ದರು
ಮತ್ತೊಂದೆಡೆ, ಶಮಿ ಅವರ ಪತ್ನಿ ಹಸೀನ್ ಜಹಾನ್ ತಮ್ಮ ಬ್ಲ್ಯಾಕ್ ಆಂಡ್ ವೈಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿನ ಓಪನ್ ಹೇರ್ ಹಾಗೂ ಕಣ್ಣಿಗೆ ಹಚ್ಚಿದ ಮಸ್ಕರಾ ಆಕೆ ಸೌಂದರ್ಯವನ್ನು ಹೆಚ್ಚಿಸಿದೆ.
ಈ ಫೋಟೋವನ್ನು ಹಂಚಿಕೊಳ್ಳುತ್ತಾ, ನೀವು ನನ್ನೊಂದಿಗೆ ಇರುವುದಕ್ಕೆ ದೇವರಿಗೆ ಕೃತಜ್ಞತೆ ಎಂದಿದ್ದಾರೆ. ಜೊತೆಗೆ ಮೆಣಸಿನಕಾಯಿ ಎಮೋಜಿಯನ್ನು ಹಾಕಿದ್ದಾರೆ.
ಈ ಫೋಟೋವನ್ನು ನೋಡಿದ ಅಭಿಮಾನಿಯೊಬ್ಬರು 'ನಿಮಗೆ ತುಂಬಾ ಸುಂದರವಾಗಿ ಕಾಣುವ ಹಕ್ಕಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ. ನಂತರ ಕೆಲವು ಅಭಿಮಾನಿಗಳು ಮತ್ತೆ ಶಮಿಯನ್ನು ನೆನಪಿಸಿಕೊಂಡರು ಮತ್ತು ಅವರ ಬಳಿಗೆ ಹಿಂದಿರುಗಿ ಎಂದು ಪುಕ್ಕಟೆ ಸಲಹೆ ಕೊಟ್ಟಿದ್ದಾರೆ.
ಮೊಹಮ್ಮದ್ ಶಮಿ ಮತ್ತು ಹಸೀನ್ ಕಳೆದ 2 ವರ್ಷಗಳಿಂದ ಪರಸ್ಪರ ಬೇರೆಯಾಗಿ ವಾಸಿಸುತ್ತಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ಲೈಂಗಿಕ ಕಿರುಕುಳ ಆರೋಪವನ್ನು ಹೊರಿಸಿದ್ದಾರೆ ಹಸೀನ್.
2015 ರಲ್ಲಿ, ಜನಸಿಸಿದ ಮಗಳು ಐರಾ ಇಬ್ಬರು ಪ್ರತ್ಯೇಕವಾಗಿದ್ದು, ಮಗಳು ಹಸೀನ್ ಜೊತೆ ವಾಸಿಸುತ್ತಾಳೆ.
ಮೊಹಮ್ಮದ್ ಶಮಿ ಪ್ರಸ್ತುತ ಐಪಿಎಲ್ 2020ಗಾಗಿ ದುಬೈನಲ್ಲಿದ್ದಾರೆ. ಆದರೆ ಅವರ ತಂಡವು ಐಪಿಎಲ್ ಪ್ಲೇ-ಆಫ್‌ಗಳಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದೇ, ಸರಣಿಯಿಂದ ಹೊರಗುಳಿದಿದೆ.
ಮತ್ತೊಂದೆಡೆ, ಹಸೀನ್ ಜಹಾನ್ ತಮ್ಮ ಹಾಟ್ ಫೋಟೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.