ಇವರೇ ನೋಡಿ, ಆರೆಂಜ್ ಕ್ಯಾಪ್‌ ಗೆದ್ದ 12 ಸ್ಫೋಟಕ ಬ್ಯಾಟ್ಸ್‌ಮನ್‌ಗಳು..!

First Published 7, Sep 2020, 7:11 PM

ಬೆಂಗಳೂರು: ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಹೊಡಿಬಡಿ ಆಟವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದವರು ಆರೆಂಜ್ ಕ್ಯಾಪ್‌ ಪಡೆದುಕೊಳ್ಳುತ್ತಾರೆ

ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎನಿಸಿರುವ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್ ಗೇಲ್ ಹಾಗೂ ಡೇವಿಡ್ ವಾರ್ನರ್ ಎರಡೆರಡು ಬಾರಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಮತ್ತೆ ಯಾವ ಬ್ಯಾಟ್ಸ್‌ಮನ್‌ಗಳು ಯಾವಾಗ ಆರೆಂಜ್ ಕ್ಯಾಪ್ ಪಡೆದಿದ್ದಾರೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ ನೋಡಿ.

1. ಶಾನ್‌ ಮಾರ್ಷ್‌(2008) 618 ರನ್

1. ಶಾನ್‌ ಮಾರ್ಷ್‌(2008) 618 ರನ್

ಚೊಚ್ಚಲ ಆವೃತ್ತಿಯಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಶಾನ್ ಮಾರ್ಷ್ 11 ಇನಿಂಗ್ಸ್‌ಗಳಲ್ಲಿ 68ರ ಸರಾಸರಿಯಲ್ಲಿ 1 ಶತಕ ಹಾಗೂ 5 ಅರ್ಧಶತಕಗಳ ನೆರವಿನಿಂದ 618 ರನ್ ಕಲೆ ಹಾಕುವ ಮೂಲಕ ಆರೆಂಜ್ ಕ್ಯಾಪ್‌ ಗೌರವಕ್ಕೆ ಭಾಜನರಾದರು.

2. ಮ್ಯಾಥ್ಯೂ ಹೇಡನ್(2009) 572 ರನ್

2. ಮ್ಯಾಥ್ಯೂ ಹೇಡನ್(2009) 572 ರನ್

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಆಸೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಹೇಡನ್ 12 ಇನಿಂಗ್ಸ್‌ಗಳನ್ನಾಡಿ 52ರ ಸರಾಸರಿಯಲ್ಲಿ 5 ಫಿಫ್ಟಿ ಸಹಿತ 572 ರನ್ ಬಾರಿಸಿ 2ನೇ ಆವೃತ್ತಿಯ ಟೂರ್ನಿಯಲ್ಲೇ ಗರಿಷ್ಠ ರನ್ ಬಾರಿಸಿದ ಆಟಗಾರರಾಗಿ ಹೊರಹೊಮ್ಮಿದರು.

3. ಸಚಿನ್ ತೆಂಡುಲ್ಕರ್(2010) 618 ರನ್

3. ಸಚಿನ್ ತೆಂಡುಲ್ಕರ್(2010) 618 ರನ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮೂರನೇ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ 15 ಪಂದ್ಯಗಳನ್ನಾಡಿ 47ರ ಸರಾಸರಿಯಲ್ಲಿ 5 ಅರ್ಧಶತಕ ಸಹಿತ 618 ರನ್ ಬಾರಿಸುವ ಮೂಲಕ ಟೂರ್ನಿಯ ಸರ್ವಾಧಿಕ ರನ್‌ ಬಾರಿಸಿದ ಆಟಗಾರರೆನಿಸಿಕೊಂಡಿದ್ದರು.

4. ಕ್ರಿಸ್ ಗೇಲ್(2011) 608 ರನ್

4. ಕ್ರಿಸ್ ಗೇಲ್(2011) 608 ರನ್

ನಾಲ್ಕನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಕ್ರಿಸ್ ಗೇಲ್ 12 ಇನಿಂಗ್ಸ್‌ಗಳನ್ನಾಡಿ 2 ಶತಕ ಸಹಿತ 608 ರನ್ ಸಿಡಿಸಿ ಆರೆಂಜ್‌ ಕ್ಯಾಪ್ ಪಡೆದುಕೊಂಡಿದ್ದರು.

5. ಕ್ರಿಸ್‌ ಗೇಲ್(2012) 733 ರನ್

5. ಕ್ರಿಸ್‌ ಗೇಲ್(2012) 733 ರನ್

ಗೇಲ್ ಅಬ್ಬರ 5ನೇ ಆವೃತ್ತಿಯ ಐಪಿಎಲ್‌ನಲ್ಲೂ ಮುಂದುವರೆದಿತ್ತು. RCB ಪರ 14 ಪಂದ್ಯಗಳನ್ನಾಡಿದ ಕೆರಿಬಿಯನ್ ದಿಗ್ಗಜ 61ರ ಸರಾಸರಿಯಲ್ಲಿ 1 ಶತಕ ಹಾಗೂ 7 ಅರ್ಧಶತಕ ಸಹಿತ 733 ರನ್ ಬಾರಿಸಿ ಸತತ ಎರಡನೇ ಬಾರಿಗೆ ಆರೆಂಜ್ ಕ್ಯಾಪ್‌ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

6. ಮೈಕಲ್ ಹಸ್ಸಿ(2013) 733 ರನ್

6. ಮೈಕಲ್ ಹಸ್ಸಿ(2013) 733 ರನ್

ಸ್ಥಿರ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗುರುತಿಸಿಕೊಂಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಬ್ಯಾಟ್ಸ್‌ಮನ್ ಮೈಕಲ್ ಹಸ್ಸಿ 7ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 17 ಇನಿಂಗ್ಸ್‌ಗಳನ್ನಾಡಿ 52ರ ಸರಾಸರಿಯಲ್ಲಿ 733 ರನ್ ಬಾರಿಸಿ ಆರೆಂಜ್ ಕ್ಯಾಪ್ ವಿಜೇತರಾಗಿ ಹೊರಹೊಮ್ಮಿದ್ದರು.

7. ರಾಬಿನ್ ಉತ್ತಪ್ಪ(2014) 660 ರನ್

7. ರಾಬಿನ್ ಉತ್ತಪ್ಪ(2014) 660 ರನ್

ಕೋಲ್ಕತ ನೈಟ್‌ ರೈಡರ್ಸ್ ತಂಡ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಪಾತ್ರ ಮಹತ್ವದಾಗಿತ್ತು. 16 ಇನಿಂಗ್ಸ್‌ಗಳನ್ನಾಡಿದ ಉತ್ತಪ್ಪ 44ರ ಸರಾಸರಿಯಲ್ಲಿ 5 ಅರ್ಧಶತಕ ಸಹಿತ 660 ರನ್ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಕಲೆಹಾಕಿದ ಬ್ಯಾಟ್ಸ್‌ಮನ್ ಎನಿಸಿದರು.

8. ಡೇವಿಡ್ ವಾರ್ನರ್(2015) 562 ರನ್

8. ಡೇವಿಡ್ ವಾರ್ನರ್(2015) 562 ರನ್

ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ 14 ಇನಿಂಗ್ಸ್‌ಗಳನ್ನಾಡಿ 43ರ ಸರಾಸರಿಯಲ್ಲಿ 7 ಅರ್ಧಶತಕ ಸಹಿತ 562 ರನ್ ಗಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡರು.

9. ವಿರಾಟ್ ಕೊಹ್ಲಿ(2016) 973 ರನ್

9. ವಿರಾಟ್ ಕೊಹ್ಲಿ(2016) 973 ರನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಒಂದೇ ಆವೃತ್ತಿಯಲ್ಲಿ 4 ಶತಕ ಸಿಡಿಸುವ ಮೂಲಕ ಆಡಿದ 16 ಪಂದ್ಯಗಳಲ್ಲಿ 81ರ ಸರಾಸರಿಯಲ್ಲಿ 973 ರನ್ ಬಾರಿಸಿದ್ದರು.

10. ಡೇವಿಡ್ ವಾರ್ನರ್(2017) 641 ರನ್

10. ಡೇವಿಡ್ ವಾರ್ನರ್(2017) 641 ರನ್

ಸನ್‌ ರೈಸರ್ಸ್ ಹೈದರಾಬಾದ್ ತಂಡದ ನಾಯಕ ವಾರ್ನರ್ 14 ಪಂದ್ಯಗಳನ್ನಾಡಿ 58ರ ಸರಾಸರಿಯಲ್ಲಿ 1 ಶತಕ ಹಾಗೂ 4 ಅರ್ಧಶತಕ ಸಹಿತ 641 ರನ್ ಬಾರಿಸಿ ಎರಡನೇ ಬಾರಿಗೆ ಆರೆಂಜ್ ಕ್ಯಾಪ್‌ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

11. ಕೇನ್ ವಿಲಿಯಮ್ಸನ್(2018) 735 ರನ್

11. ಕೇನ್ ವಿಲಿಯಮ್ಸನ್(2018) 735 ರನ್

ಸನ್‌ ರೈಸರ್ಸ್‌ ಹೈದರಾಬಾದ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ 17 ಪಂದ್ಯಗಳನ್ನಾಡಿ 52ರ ಸರಾಸರಿಯಲ್ಲಿ 8 ಅರ್ಧಶತಕ ಸಹಿತ 735 ರನ್ ಬಾರಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡರು.

12. ಡೇವಿಡ್ ವಾರ್ನರ್(2019) 692 ರನ್

12. ಡೇವಿಡ್ ವಾರ್ನರ್(2019) 692 ರನ್

ಸನ್‌ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ 12 ಇನಿಂಗ್ಸ್‌ಗಳನ್ನಾಡಿ 69.2ರ ಸರಾಸರಿಯಲ್ಲಿ 1 ಶತಕ ಹಾಗೂ 8 ಅರ್ಧಶತಕಗಳ ನೆರವಿನಿಂದ 692 ರನ್ ಬಾರಿಸಿ ದಾಖಲೆಯ ಮೂರನೇ ಬಾರಿಗೆ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡರು.

loader