RCB ಸಂಭಾವ್ಯ ತಂಡ: ಡೆಲ್ಲಿ ವಿರುದ್ಧದ ಮಹತ್ವದ ಪಂದ್ಯದಲ್ಲಿ ವಿರಾಟ್ ಪಡೆಯಲ್ಲಿ 2 ಬದಲಾವಣೆ?
ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಟೂರ್ನಿಯ ಆರಂಭದಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹತ್ವದ ಘಟ್ಟದಲ್ಲಿ ಸತತ 3 ಸೋಲು ಕಂಡು ಲೀಗ್‌ನಿಂದಲೇ ಹೊರಬೀಳುವ ಭೀತಿ ಎದುರಿಸುತ್ತಿದೆ.
ಹೌದು, ಇದೀಗ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸುತ್ತಿದ್ದು, 2 ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಇಂದಿನ(ನ.02) ಪಂದ್ಯದಲ್ಲಿ ಗುರುಕೀರತ್ ಮನ್ ಹಾಗೂ ಇಸುರು ಉಡಾನಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಆರ್‌ಸಿಬಿ ಸಂಭಾವ್ಯ ತಂಡ ಇಲ್ಲಿದೆ ನೋಡಿ.
1. ಜೋಸ್ ಫಿಲಿಫ್ಫಿ: ಆಸೀಸ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್, ಕಳೆದೆರಡು ಪಂದ್ಯಗಳಲ್ಲಿ 30+ ರನ್ ಬಾರಿಸಿ ಗಮನ ಸೆಳೆದಿದ್ದಾರೆ.
2. ದೇವದತ್ ಪಡಿಕ್ಕಲ್: ಎಡಗೈ ಆರಂಭಿಕ ಬ್ಯಾಟ್ಸ್‌ಮನ್, ಉತ್ತಮ ಫಾರ್ಮ್‌ನಲ್ಲಿರುವ ಕರ್ನಾಟಕದ ಪ್ರತಿಭೆ
3. ವಿರಾಟ್ ಕೊಹ್ಲಿ; ತಂಡದ ನಾಯಕ ಹಾಗೆಯೇ ರನ್ ಮಷೀನ್ ಕೂಡಾ ಹೌದು.
4. ಎಬಿ ಡಿವಿಲಿಯರ್ಸ್: ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್, ಮಿಸ್ಟರ್ 360 ಖ್ಯಾತಿಯ ಆಟಗಾರ
5. ಮೊಯೀನ್ ಅಲಿ: ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗಬಲ್ಲ ಆಟಗಾರ
6. ಶಿವಂ ದುಬೆ: ಮ್ಯಾಚ್ ಫಿನಿಶಿಂಗ್ ಮಾಡುವ ಸಾಮರ್ಥ್ಯವಿರುವ ಆಲ್ರೌಂಡರ್
7. ಕ್ರಿಸ್ ಮೋರಿಸ್: ಆರ್‌ಸಿಬಿಯ ಮತ್ತೋರ್ವ ಸ್ಟಾರ್ ಆಲ್ರೌಂಡರ್, ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್ ಕೂಡಾ ಹೌದು
8. ವಾಷಿಂಗ್ಟನ್ ಸುಂದರ್: ಪವರ್ ಪ್ಲೇ ಓವರ್‌ಗಳಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕಿ ವಿಕೆಟ್ ಕಬಳಿಸಬಲ್ಲ ಬೌಲರ್, ಬ್ಯಾಟಿಂಗ್‌ನಲ್ಲೂ ಆಸರೆಯಾಗಬಲ್ಲ ಆಲ್ರೌಂಡರ್
9. ನವದೀಪ್ ಸೈನಿ: ಆರ್‌ಸಿಬಿ ತಂಡದ ವೇಗದ ಅಸ್ತ್ರ, ಮಾರಕ ದಾಳಿ ನಡೆಸಬಲ್ಲ ವೇಗಿ
10. ಮೊಹಮ್ಮದ್ ಸಿರಾಜ್: ಆರ್‌ಸಿಬಿ ತಂಡದ ಮತ್ತೋರ್ವ ವೇಗಿ, ಕ್ರಾಸ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್ ಕಾಡಬಲ್ಲ ಬೌಲರ್
11. ಯುಜುವೇಂದ್ರ ಚಹಲ್: ತಂಡದ ಅತ್ಯಂತ ಅನುಭವಿ ಸಿನ್ನರ್. ಅಗತ್ಯ ಸಂದರ್ಭದಲ್ಲಿ ತಂಡಕ್ಕೆ ವಿಕೆಟ್ ಕಬಳಿಸಿಕೊಡಬಲ್ಲ ಬೌಲರ್.