IPL 2020:ಒಪನಿಂಗ್ ಸೆರಮನಿ ಇಲ್ಲ, ಫ್ಯಾನ್ಸ್‌ಗಿಲ್ಲ ಪ್ರವೇಶ, ಚೀಯರ್ ಲೀಡರ್ಸ್ ಕತೆ ಏನು?
ಕಳೆದ 12 ಆವೃತ್ತಿಗಳಿಂದ ಈ ಬಾರಿ IPL 2020 ಟೂರ್ನಿ ವಿಶೇಷವಾಗಿದೆ. ಕ್ರಿಕೆಟ್‌ನ್ನು ಮನರಂಜನೆಯಾಗಿ ಮಾರ್ಪಡಿಸಿದ ಐಪಿಎಲ್ ಟೂರ್ನಿ, ವಿಶ್ವದ ಕಲರ್‌ಫುಲ್ ಕ್ರೀಡೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಈ ಬಾರಿ ಎಲ್ಲಾ ಮನರಂಜನೆಗೆ ಬ್ರೇಕ್ ಬಿದ್ದಿದೆ. ಅಭಿಮಾನಿಗಳಿಗೆ ಪ್ರವೇಶವಿಲ್ಲ, ಉದ್ಘಾಟನಾ ಸಮಾರಂಭವಿಲ್ಲ. ಆದರೆ ಚಿಯರ್ ಲೀಡರ್ಸ್ ಕತೆ ಏನು? ಇಲ್ಲಿದೆ ವಿವರ.
ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಆರಂಭಗೊಳ್ಳುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಹಲವು ವಿಶೇಷತೆಗಳಿವೆ. ಕೊರೋನಾ ವೈರಸ್ ಕಾರಣ ಅಭಿಮಾನಿಗಳಿಗೆ ಕ್ರೀಡಾಂಗಣ ಪ್ರವೇಶ ನಿರಾಕರಿಸಲಾಗಿದೆ.
ಆಟಗಾರರು, ತಂಡದ ಕೋಚ್, ಸಹಾಯ ಸಿಬ್ಬಂಧಿ, ಮೈದಾನದ ಸಿಬ್ಬಂದಿಗಳು, ಭದ್ರತಾ ಪಡೆ, ಕ್ರಿಕೆಟ್ ಅಧಿಕಾರಿಗಳು ಸೇರಿದಂತೆ ಕೆಲವೇ ಕೆಲವು ಮಂದಿ ಮಾತ್ರ ಕ್ರೀಡಾಂಗಣಲ್ಲಿ ಇರಲಿದ್ದಾರೆ.
2019ರಿಂದ ಐಪಿಎಲ್ ಟೂರ್ನಿ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್ ಬಿದ್ದಿದೆ. 2019ರ ಪುಲ್ವಾಮ ದಾಳಿಯಿಂದಾಗಿ ಉದ್ಘಾಟನಾ ಸಮಾರಂಭ ರದ್ದು ಮಾಡಿ, ಈ ಹಣವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಲಾಗಿತ್ತು.
2019ರಲ್ಲೇ ದುಂದು ವೆಚ್ಚ ಮಾಡುವ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಲಾಗಿದೆ. ಈ ಬಾರಿಯೂ ಯಾವುದೇ ಉದ್ಘಟಾನ ಸಮಾರಂಭ ಇರುವುದಿಲ್ಲ
ಐಪಿಎಲ್ ಟೂರ್ನಿಯ ಯಶಸ್ಸಿನಲ್ಲಿ ಅಭಿಮಾನಿಗಳ ಪಾತ್ರದ ಜೊತೆಗೆ ಚಿಯರ್ ಲೀಡರ್ಸ್ ಪಾತ್ರವೂ ಪ್ರಮುಖವಾಗಿತ್ತು. ಆದರೆ ಈ ಬಾರಿ ಚಿಯರ್ ಲೀಡರ್ಸ್ ಕೂಡ ಇರುವುದಿಲ್ಲ
ಕ್ರೀಡಾಂಗಣಕ್ಕೆ ಅಭಿಮಾನಿಗಳ ಪ್ರವೇಶ ನಿರಾಕರಿಸಿರುವ ಕಾರಣ ಈ ಬಾರಿ ಐಪಿಎಲ್ ಟಿವಿ ರೇಟಿಂಗ್ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ
ಐಪಿಎಲ್ ಟೂರ್ನಿ ಫೈನಲ್ ಪಂದ್ಯಕ್ಕೆ ಶೇಕಡಾ 30 ರಷ್ಟು ಅಭಿಮಾನಿಗಳಿಗೆ ಅವಕಾಶ ನೀಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಯುಎಇ ಕ್ರಿಕೆಟ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.
ಕ್ರಿಕೆಟಿಗರು ಹೊಟೆಲ್, ಮೈದಾನ ಬಿಟ್ಟು ಬೆರೆಡೆ ತೆರಳುವಂತಿಲ್ಲ. ಕೊರೋನಾ ವೈರಸ್ ಕಾರಣ ಕ್ರಿಕೆಟಿಗರಿಗೂ ಕಟ್ಟು ನಿಟ್ಟಿನ ಮಾರ್ಗಸೂಚಿ ಜಾರಿ ಮಾಡಲಾಗಿದೆ