IPL 2020: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಬಲಿಷ್ಠ ಸಂಭಾವ್ಯ ತಂಡ ಪ್ರಕಟ..!
ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ತಂಡವೆಂದರೆ ಅದು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ. ದಾಖಲೆಯ 4 ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ಇದೀಗ 5ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಅದರಲ್ಲೂ ಟ್ರೆಂಟ್ ಬೌಲ್ಟ್ ತಂಡ ಕೂಡಿಕೊಂಡಿರುವುದು ಮುಂಬೈ ಬೌಲಿಂಗ್ ಪಡೆ ಮತ್ತಷ್ಟು ಬಲಾಢ್ಯವನ್ನಾಗಿದೆ. ರೋಹಿತ್, ಡಿಕಾಕ್, ಪಾಂಡ್ಯ ಬ್ರದರ್ಸ್, ಬುಮ್ರಾ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಐಪಿಎಲ್ ಜ್ವರ ಕಾವೇರುತ್ತಿರುವ ಬೆನ್ನಲ್ಲೇ 13ನೇ ಆವೃತ್ತಿಗೆ ಸುವರ್ಣ ನ್ಯೂಸ್.ಕಾಂ ಹಾಲಿ ಚಾಂಪಿಯನ್ ಬಲಿಷ್ಠ ಸಂಭಾವ್ಯ ತಂಡವನ್ನು ಪ್ರಕಟಿಸಿದೆ. ಸುವರ್ಣ ನ್ಯೂಸ್.ಕಾಂ ಪ್ರಕಟಿಸಿದ ಸಂಭಾವ್ಯ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
1. ರೋಹಿತ್ ಶರ್ಮಾ:(ನಾಯಕ&ಆರಂಭಿಕ ಬ್ಯಾಟ್ಸ್‌ಮನ್)
ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಐಪಿಎಲ್ ಟೂರ್ನಿಯ ಅತ್ಯಂತ ಯಶಸ್ವಿ ನಾಯಕ. ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ರೋಹಿತ್ ಎತ್ತಿದ ಕೈ.
2. ಕ್ವಿಂಟನ್ ಡಿಕಾಕ್(ಆರಂಭಿಕ ಬ್ಯಾಟ್ಸ್‌ಮನ್& ವಿಕೆಟ್ ಕೀಪರ್)
ಸ್ಫೋಟಕ ಎಡಗೈ ಆರಂಭಿಕ ಬ್ಯಾಟ್ಸ್‌ಮನ್. ಕಳೆದ ಆವೃತ್ತಿಯಲ್ಲಿ 529 ರನ್ ಸಿಡಿಸುವ ಮೂಲಕ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ ಆಟಗಾರ. ಈ ಬಾರಿಯು ಅಂತಹದ್ದೇ ಪ್ರದರ್ಶನದ ವಿಶ್ವಾಸದಲ್ಲಿರುವ ಡಿಕಾಕ್
3. ಸೂರ್ಯ ಕುಮಾರ್ ಯಾದವ್; (ಬಲಗೈ ಬ್ಯಾಟ್ಸ್‌ಮನ್)
ಮುಂಬೈ ಪಾಳಯದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್. ಕಳೆದ ಎರಡು ಆವೃತ್ತಿಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿರುವ ಪ್ರತಿಭಾನ್ವಿತ ಆಟಗಾರ.
4. ಇಶನ್ ಕಿಶನ್(ಎಡಗೈ ಬ್ಯಾಟ್ಸ್‌ಮನ್)
ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದರು, ಮುಗಿಲೆತ್ತರದ ಸಿಕ್ಸರ್ ಬಾರಿಸುವುದರಲ್ಲಿ ಇಶನ್ ಕಿಶನ್ ನಿಸ್ಸೀಮ. ದೊಡ್ಡ ಇನಿಂಗ್ಸ್ ಕಟ್ಟುವುದಕ್ಕೂ ಕಿಶನ್ ರೆಡಿ.
5. ಹಾರ್ದಿಕ್ ಪಾಂಡ್ಯ(ಆಲ್ರೌಂಡರ್)
ಹಾರ್ಡ್ ಹಿಟ್ಟರ್, ಉಪಯುಕ್ತ ಆಲ್ರೌಂಡರ್. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡುವ ಕ್ಷಮತೆ ಇರುವ ತಂಡದ ಉಪಯುಕ್ತ ಆಟಗಾರ.
6. ಕಿರಾನ್ ಪೊಲ್ಲಾರ್ಡ್(ಆಲ್ರೌಂಡರ್)
ಮುಂಬೈ ಇಂಡಿಯನ್ಸ್ ತಂಡದ ಮತ್ತೋರ್ವ ಹಾರ್ಡ್ ಹಿಟ್ಟರ್. ಸಿಪಿಎಲ್‌ನಲ್ಲಿ ಅಬ್ಬರಿಸಿರುವ ಪೊಲ್ಲಾರ್ಡ್ ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.
7. ಕೃನಾಲ್ ಪಾಂಡ್ಯ(ಆಲ್ರೌಂಡರ್)
ತಂಡದ ಮತ್ತೋರ್ವ ಸ್ಟಾರ್ ಆಲ್ರೌಂಡರ್. ಮಧ್ಯಮ ಕ್ರಮಾಂಕದಲ್ಲಿ ಅಗತ್ಯ ತಕ್ಕಂತೆ ಬ್ಯಾಟ್ ಬೀಸಬಲ್ಲ ಮತ್ತೋರ್ವ ಪ್ರತಿಭಾನ್ವಿತ ಆಲ್ರೌಂಡರ್
8. ರಾಹುಲ್ ಚಹರ್(ಲೆಗ್ ಸ್ಪಿನ್ನರ್)
ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಲೆಗ್ ಸ್ಪಿನ್ನರ್. ಕಳೆದ ಆವೃತ್ತಿಯಲ್ಲಿ ಹಲವು ಸ್ಟಾರ್ ಆಟಗಾರರನ್ನು ತನ್ನ ಗೂಗ್ಲಿ ಬೌಲಿಂಗ್ ಮೂಲಕ ತಬ್ಬಿಬ್ಬು ಮಾಡಿರುವ ಆಟಗಾರ
9. ನೇಥನ್ ಕೌಲ್ಟರ್-ನೀಲ್ (ವೇಗದ ಬೌಲರ್)
ಆಸೀಸ್ ಅನುಭವಿ ವೇಗಿ. ಸ್ಲಾಗ್ ಓವರ್‌ನಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬಲ್ಲ ವೇಗಿ. ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕಾಣಿಕೆ ನೀಡಬಲ್ಲ ಆಟಗಾರ
10. ಟ್ರೆಂಟ್ ಬೌಲ್ಟ್ (ವೇಗದ ಬೌಲರ್)
ಯಾರ್ಕರ್ ಸ್ಪೆಷಲಿಸ್ಟ್. ಪವರ್ ಪ್ಲೇ ಓವರ್‌ನಲ್ಲೇ ಮಾರಕ ದಾಳಿ ನಡೆಸಿ ವಿಕೆಟ್ ಕಬಳಿಸಬಲ್ಲ ಎಡಗೈ ವೇಗಿ
11. ಜಸ್ಪ್ರೀತ್ ಬುಮ್ರಾ(ವೇಗದ ಬೌಲರ್)
ಮುಂಬೈ ಇಂಡಿಯನ್ಸ್ನ ಮತ್ತೋರ್ವ ಡೆಡ್ಲಿ ಬೌಲರ್. ಯಾರ್ಕರ್ ಬೌಲಿಂಗ್ ಜತೆಗೆ ಬುಮ್ರಾ ಡೆತ್ ಓವರ್ ಸ್ಪೆಷಲಿಸ್ಟ್ ಕೂಡಾ ಹೌದು.