ಭಾರತದ ಯಾವ ರಾಜ್ಯದ ಮಹಿಳೆಯರು ಅತಿಹೆಚ್ಚು ಮದ್ಯ ಸೇವಿಸುತ್ತಾರೆ? ಕರ್ನಾಟಕದ ಪಾಲೆಷ್ಟು?
ಭಾರತದಲ್ಲಿ ಮಹಿಳೆಯರು ಮದ್ಯಪಾನ ಮಾಡುವುದು ಈಗ ಸಾಮಾನ್ಯವಾಗುತ್ತಿದೆ, ಹೆಚ್ಚು ಹೆಚ್ಚು ಜನ ಇತ್ತ ಒಲವು ತೋರುತ್ತಿದ್ದಾರೆ. ಸಾಮಾಜಿಕ ನಿಯಮಗಳಿಂದ ಬಹಳ ಕಾಲ ದಬ್ಬಾಳಿಕೆಗೆ ಒಳಗಾಗಿದ್ದ ಮಹಿಳೆಯರು ಈಗ ಸ್ವತಂತ್ರವಾಗಿ ವರ್ತಿಸಲು ಪ್ರಾರಂಭಿಸಿದ್ದಾರೆ. ಅವರ ಮದ್ಯಪಾನವೂ ಹೆಚ್ಚುತ್ತಿದೆ.

ಭಾರತದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಜನರ ಮದ್ಯಪಾನದ ಅಭ್ಯಾಸಗಳು ಬದಲಾಗುತ್ತವೆ. ಭಾರತದ ಕೆಲವು ರಾಜ್ಯಗಳಲ್ಲಿ, ಮಹಿಳೆಯರು ಇತರರಿಗಿಂತ ಹೆಚ್ಚು ಮದ್ಯಪಾನಕ್ಕೆ ಒಳಗಾಗುತ್ತಾರೆ. ಇಡೀ ಭಾರತದಲ್ಲಿ ಶೇ.1ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5), 2019-20ರ ದತ್ತಾಂಶದ ಆಧಾರದ ಮೇಲೆ, ಮಹಿಳೆಯರು ಹೆಚ್ಚು ಮದ್ಯಪಾನ ಮಾಡುವ ಏಳು ರಾಜ್ಯಗಳನ್ನು ನೋಡೋಣ.
ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದಲ್ಲಿ, 15-49 ವರ್ಷ ವಯಸ್ಸಿನ 26% ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಈ ಹೆಚ್ಚಿನ ಪ್ರಮಾಣವು ಮದ್ಯಪಾನವನ್ನು ಪ್ರೋತ್ಸಾಹಿಸುವ ರಾಜ್ಯದ ಸಂಸ್ಕೃತಿಯಿಂದಾಗಿ.
ಸಿಕ್ಕಿಂ: ಸಿಕ್ಕಿಂನಲ್ಲಿ, 16.2% ಮಹಿಳೆಯರು ಮದ್ಯಪಾನ ಮಾಡುತ್ತಾರೆ, ಇದು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ರಾಜ್ಯವು ತನ್ನ ಮನೆಯಲ್ಲಿ ತಯಾರಿಸಿದ ಮದ್ಯಕ್ಕೆ ಹೆಸರುವಾಸಿಯಾಗಿದೆ.
ಅಸ್ಸಾಂ:
ಅಸ್ಸಾం ರಾಜ್ಯದಲ್ಲಿ ಶೇ.7.3ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಾರೆ. ಮೊದಲ ಎರಡು ಈಶಾನ್ಯ ರಾಜ್ಯಗಳಂತೆ, ಅಸ್ಸಾಂನ ಬುಡಕಟ್ಟು ಸಮುದಾಯಗಳು ಸಹ ಮದ್ಯ ತಯಾರಿಕೆ ಮತ್ತು ಸೇವನೆಯ ದೀರ್ಘ ಸಂಪ್ರದಾಯವನ್ನು ಹೊಂದಿವೆ.
ತೆಲಂಗಾಣ: ಈ ದಕ್ಷಿಣ ಭಾರತದ ರಾಜ್ಯದಲ್ಲಿ, 6.7% ಮಹಿಳೆಯರು ಮದ್ಯಪಾನ ಮಾಡುತ್ತಾರೆ. ನಗರ ಪ್ರದೇಶಗಳಿಗಿಂತ ಹೆಚ್ಚು ಗ್ರಾಮೀಣ ಮಹಿಳೆಯರು ಮದ್ಯಪಾನ ಮಾಡುತ್ತಾರೆ.
ಜಾರ್ಖಂಡ್: ಈಶಾನ್ಯ ರಾಜ್ಯಗಳ ಪಕ್ಕದಲ್ಲಿಯೇ ಇರುವ ಜಾರ್ಖಂಡ್ ರಾಜ್ಯದಲ್ಲಿಯೂ ಕೂಡ ಶೇ.6.1 ಮಹಿಳೆಯರು ಮದ್ಯಪಾನ ಮಾಡುತ್ತಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು: ಇನ್ನು ಪಟ್ಟಿಯಲ್ಲಿರುವ ಏಕೈಕ ಕೇಂದ್ರಾಡಳಿತ ಪ್ರದೇಶವೆಂದರೆ ಅದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು. ಇಲ್ಲಿ ಶೇ.5 ಮಹಿಳೆಯರು ಮದ್ಯಪಾನ ಮಾಡುತ್ತಾರೆ.
ಛತ್ತೀಸ್‌ಗಢ: ಪೂರ್ವ ಕರಾವಳಿ ರಾಜ್ಯದ ನೆರೆಹೊರೆ ಮತ್ತು ಈಶಾನ್ಯ ರಾಜ್ಯಗಳ ಹೆಬ್ಬಾಗಿಲೂ ಆಗಿರುವ ಛತ್ತೀಸ್‌ಗಢ ರಾಜ್ಯದಲ್ಲಿ ಸುಮಾರು ಶೇ.5 ಮಹಿಳೆಯರು ಮದ್ಯಪಾನ ಮಾಡುತ್ತಾರೆ.
ಕರ್ನಾಟಕದ ಮಹಿಳೆಯರು ತುಂಬಾ ಡೀಸೆಂಟ್: ಕರ್ನಾಟಕದಲ್ಲಿ ಶೇ.0.21 ಪರ್ಸೆಂಟ್ ಮಹಿಳೆಯರು ಮಾತ್ರ ಮದ್ಯಪಾನ ಮಾಡುತ್ತಾರೆ. ಇದು ದೇಶದ ಒಟ್ಟಾರೆ ಮಹಿಳೆಯ ಮದ್ಯಪಾನ ಮಾಡುವ ಶೇಕಡಾವಾರಿಗಿಂತ ಕಡಿಮೆಯಿದೆ. ಇದರ ಹೊರತಾಗಿ ಬೆಂಗಳೂರಿನಲ್ಲಿ ಶೇ.09ರಷ್ಟು ಮಹಿಳೆಯರು ಮದ್ಯವ್ಯಸನಿಗಳಾಗಿದ್ದಾರೆ. ಈ ಪೈಕಿ ಈಶಾನ್ಯ ಮತ್ತು ಉತ್ತರ ಭಾರತದಿಂದ ಬಂದ ಮಹಿಳೆಯರೇ ಅಧಿಕವಾಗಿದ್ದಾರೆ. ಒಟ್ಟಾರೆ, ದಕ್ಷಿಣ ಭಾರತದಲ್ಲಿ ತೆಲಂಗಾಣ ಹೊರತುಪಡಿಸಿದರೆ ಬೇರಾವ ರಾಜ್ಯಗಳಲ್ಲಿ ಕೂಡ ಮಹಿಳೆಯರು ಹೆಚ್ಚಾಗಿ ಮದ್ಯ ಸೇವಿಸುವುದಿಲ್ಲ.