ನೀಲಿ ನಂಬರ್ ಪ್ಲೇಟ್ ಅನ್ನು ಯಾರು ಬಳಸಬಹುದು? ಭಾರತದಲ್ಲಿ ಇದರ ವಿಶೇಷತೆ ಏನು?
ಬಿಳಿ ಹಾಗೂ ಹಳದಿ ಬಣ್ಣದ ನಂಬರ್ ಪ್ಲೇಟ್ ಇರುವ ಕಾರುಗಳು ಸಾಮಾನ್ಯ ಆದರೆ ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಹಸಿರು ಬಣ್ಣದ ನಂಬರ್ ಪ್ಲೇಟ್‌ಗಳನ್ನು ನೀಡಲಾಗುತ್ತಿದ್ದು ಅವುಗಳು ಕೂಡ ಈಗ ಸಾಮಾನ್ಯ ಎನಿಸಿವೆ. ಆದರೆ ಇವುಗಳಲ್ಲದೇ ನೀಲಿ ಬಣ್ಣದ ನಂಬರ್ ಪ್ಲೇಟ್‌ಗಳಿರುವ ಕಾರುಗಳನ್ನು ಕೂಡ ನೀವು ಅಪರೂಪಕ್ಕೊಮ್ಮೆ ನೋಡಿರುತ್ತೀರಿ. ಹಾಗಿದ್ರೆ ಈ ನೀಲಿ ಬಣ್ಣದ ನಂಬರ್ ಪ್ಲೇಟ್‌ಗಳಿರುವ ಕಾರುಗಳ ವಿಶೇಷತೆ ಏನು ಅಂತ ನೋಡೋಣ.
ರೋಡ್ ಮೇಲೆ ಹೋಗ್ತಾ ಇದ್ರೆ ನಮಗೆ ತರತರದ ನಂಬರ್ ಪ್ಲೇಟ್ ಇರೋ ವಾಹನಗಳು ಕಾಣಿಸ್ತಿರುತ್ತವೆ. ಸಾಮಾನ್ಯ ಜನರ ಕಾರುಗಳಿಗೆ ಬಿಳಿ ಬಣ್ಣದ ನಂಬರ್ ಪ್ಲೇಟ್ ಕೊಡ್ತಾರೆ. ವ್ಯವಹಾರಗಳಿಗೆ ಉಪಯೋಗಿಸೋ ವೆಹಿಕಲ್ಸ್‌ಗೆ ಹಳದಿ, ಕಪ್ಪು ಬಣ್ಣದ ಪ್ಲೇಟ್‌ಗಳಿರುತ್ತವೆ. ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಜಾಸ್ತಿ ಆಗಿದೆ. ಎಲ್ಲೆಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳು, ಬೈಕುಗಳು, ಕಾರುಗಳು, ಬಸ್ಸುಗಳು ಸಹ ಮಾರ್ಕೆಟ್‌ಗೆ ಬಂದಿವೆ. ಆ ವಾಹನಗಳಿಗೆ ಹಸಿರು ಬಣ್ಣದ ನಂಬರ್ ಪ್ಲೇಟ್‌ಗಳಿರುತ್ತವೆ.
ಬಿಳಿ, ಹಳದಿ, ಕಪ್ಪು, ಹಸಿರು ಬಣ್ಣದ ನಂಬರ್ ಪ್ಲೇಟ್ ಇರೋ ವಾಹನಗಳ ಜೊತೆಗೆ ನೀಲಿ ಬಣ್ಣದ ನಂಬರ್ ಪ್ಲೇಟ್ ಇರೋ ವೆಹಿಕಲ್ಸ್ ಕೂಡ ಇವೆ. ಇಂಡಿಯಾದಲ್ಲಿ ಯಾವ ವಾಹನಗಳಿಗೆ ಈ ನೀಲಿ ನಂಬರ್ ಪ್ಲೇಟ್ ಕೊಡ್ತಾರೆ ಅಂತ ತಿಳಿದುಕೊಳ್ಳೋಣ. ನೀಲಿ ಬಣ್ಣದ ನಂಬರ್ ಪ್ಲೇಟ್ ಯಾಕೆ ಮಾಡಿದ್ರು ಅಂತ ಇಲ್ಲಿ ತಿಳಿದುಕೊಳ್ಳೋಣ.
ನೀಲಿ ನಂಬರ್ ಪ್ಲೇಟ್ ಇರೋ ಕಾರುಗಳನ್ನ ವಿದೇಶಿ ರಾಯಭಾರ ಕಚೇರಿಗಳು ಅಥವಾ ರಾಜತಾಂತ್ರಿಕ ಅಧಿಕಾರಿಗಳು ಉಪಯೋಗಿಸ್ತಾರೆ. ವಿದೇಶಿ ರಾಯಭಾರಿಗಳು, ಸಿಬ್ಬಂದಿ ಉಪಯೋಗಿಸೋ ವಾಹನಗಳು ಈ ನೀಲಿ ನಂಬರ್ ಪ್ಲೇಟ್ ಹೊಂದಿರುತ್ತವೆ.
ಬಿಳಿ, ಹಳದಿ ಬಣ್ಣದ ನಂಬರ್ ಪ್ಲೇಟ್‌ಗಳ ಮೇಲೆ ನಂಬರ್‌ಗಳು ಕಪ್ಪು ಬಣ್ಣದಲ್ಲಿರುತ್ತವೆ. ಹಸಿರು ಬಣ್ಣದ ಪ್ಲೇಟ್ ಮೇಲೆ ನಂಬರ್‌ಗಳು ಬಿಳಿ ಬಣ್ಣದಲ್ಲಿರುತ್ತವೆ. ನೀಲಿ ನಂಬರ್ ಪ್ಲೇಟ್‌ಗಳ ಮೇಲೆ ಅಕ್ಷರಗಳು, ನಂಬರ್‌ಗಳು ಬಿಳಿ ಬಣ್ಣದಲ್ಲಿರುತ್ತವೆ. ಆ ನಂಬರ್‌ನಲ್ಲಿ ದೇಶ, ಸಂಸ್ಥೆ ಕೋಡ್, ಅಧಿಕಾರಿ ಅಥವಾ ಮಾಲೀಕರ ಶ್ರೇಣಿ ಕೋಡ್ ಇರುತ್ತದೆ.
ವಾಹನಗಳಲ್ಲಿ ಪ್ರಯಾಣಿಸುವವರಿಗೆ ಕೊಡುವ ಅಧಿಕಾರದ ಆಧಾರದ ಮೇಲೆ ಈ ರೀತಿಯ ಬಣ್ಣ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಕೊಡ್ತಾರೆ. ನೀಲಿ ಬಣ್ಣದ ನಂಬರ್ ಪ್ಲೇಟ್ ಇರೋ ವಾಹನಗಳು ವಿದೇಶಿ ರಾಯಭಾರ ಕಚೇರಿಗೆ ಕೆಲಸ ಮಾಡುತ್ತವೆ. ಹಾಗಾಗಿ ಅವು ಅಂತರರಾಷ್ಟ್ರೀಯ ಕಾನೂನುಗಳ ವ್ಯಾಪ್ತಿಗೆ ಬರುತ್ತವೆ. ಇವುಗಳಿಗೆ ತೆರಿಗೆ ವಿನಾಯಿತಿ ಇರುತ್ತದೆ. ವಿಶೇಷ ಭದ್ರತೆ, ಟ್ರಾಫಿಕ್ ನಿಯಮಗಳಲ್ಲಿ ಸಡಿಲಿಕೆಗಳು ಸಹ ಸಿಗುತ್ತವೆ. ನೀಲಿ ಬಣ್ಣದ ನಂಬರ್ ಪ್ಲೇಟ್ ಇರೋ ವಾಹನಗಳು ಹೆಚ್ಚಾಗಿ ದೆಹಲಿ, ಮೆಟ್ರೋ ನಗರಗಳಲ್ಲಿ ಕಾಣಿಸುತ್ತವೆ.