ರಾಮ ವಿಯೋಗದ ವೇಳೆ ನಟ ಸಾವು, ಕಣ್ನೀರಾದ ಪ್ರೇಕ್ಷಕರು, ಹಲವರ ಮನೆಯಲ್ಲಿ ಉರಿಯಲಿಲ್ಲ ಒಲೆ!
ಭಗವಾನ್ ಶ್ರೀರಾಮ ವನವಾಸಕ್ಕೆ ಹೋದಾಗ ಆತನ ತಂದೆ ಮತ್ತು ಅಯೋಧ್ಯೆಯ ರಾಜ ದಶರಥ ಹೇಗೆ ತನ್ನ ಪ್ರಾಣ ತ್ಯಜಿಸಿದ ಎಂಬ ವಿಚಾರ ಎಲ್ಲರಿಗೂ ತಿಳಿದಿರುವಂತಹುದ್ದು. ಆದರೀಗ ಯುಪಿಯ ಬಿಜ್ನೋರ್‌ನಿಂದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಹೌದು ರಾಮಲೀಲಾ ವೇದಿಕೆಯಲ್ಲಿ ದಶರಥನ ಪಾತ್ರವನ್ನು ನಿರ್ವಹಿಸುತ್ತಿದ್ದ ರಾಜೇಂದ್ರ ಸಿಂಗ್ (62) ರಾಮ ಅರಣ್ಯಕ್ಕೆ ಹೊರಟಿರುವುದರಿಂದ ದುಃಖಿತನಾಗಿ, ನೆಲದ ಮೇಲೆ ಬೀಳುತ್ತಾನೆ. ಇದು ರಾಮಲೀಲಾದ ದೃಶ್ಯವೆಂದೇ ಜನರು ಭಾವಿಸಿದ್ದರು. ಆದರೆ ವಾಸ್ತವವಾಗಿ ಆ ದೃಶ್ಯ ನಿರ್ವಹಿಸುತ್ತಿದ್ದ ಪಾತ್ರಧಾರಿ ಅಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.

ವಾಸ್ತವವಾಗಿ, ರಾಜೇಂದ್ರ ಸಿಂಗ್ 20 ವರ್ಷಗಳಿಂದ ರಾಮಲೀಲಾದಲ್ಲಿ ದಶರಥನ ಪಾತ್ರವನ್ನು ನಿರ್ವಹಿಸುತ್ತಿದ್ದರು. ಅವರ ನಟನೆ ಕಂಡ ಪ್ರತಿಯೊಬ್ಬರೂ ಅವರು ನಿಜಕ್ಕೂ ದಶರಥ ಎಂದು ಭಾವಿಸುತ್ತಿದ್ದರು. ಅಲ್ಲದೇ ನಟಿಸುತ್ತಿದ್ದ ವೇಳೆ ಬಿದ್ದುಹೋದಾಗ, ಜನರಿಗೆ ಅವರು ಮೃತಪಟ್ಟಿದ್ದಾರೆಂದು ನಂಬಲು ಸಾಧ್ಯವಾಗಿಲ್ಲ. ಅವರು ನಟಿಸುತ್ತಿದ್ದಾರೆಂದೇ ಜನರು ಅರ್ಥಮಾಡಿಕೊಂಡಿದ್ದರು. ಕೆಲ ಸಮಯದ ಬಳಿ ಪ್ರೇಕ್ಷಕರೂ ಚಪ್ಪಾಳೆ ತಟ್ಟಿದ್ದರು. ಆದರೆ ತುಂಬಾ ಸಮಯವಾದರೂ ಅವರು ಮೇಲೆಳೆದಾಗ, ಉಳಿದ ನಟರು ಅವರ ಬಳಿ ತೆರಳಿದ್ದಾರೆ. ಹೀಗಿರುವಾಗ ನಟ ಮೃತಪಟ್ಟಿರುವ ವಿಚಾರ ತಿಳಿದಿದೆ.
ಪ್ರತಿ ವರ್ಷ ಸಪ್ತಮಿಯಿಂದ ದಸರಾವರೆಗೆ, ಬಿಜ್ನೋರ್ ಜಿಲ್ಲೆಯ ಹಸನ್ಪುರ್ ಗ್ರಾಮದಲ್ಲಿ ಸತತ ನಾಲ್ಕು ದಿನಗಳ ಕಾಲ ಹಳ್ಳಿಯ ಕಲಾವಿದರಿಂದ ರಾಮಲೀಲಾ ಪ್ರದರ್ಶನವಾಗುತ್ತದೆ. ಹತ್ತಿರದ ಅನೇಕ ಹಳ್ಳಿಗಳ ಜನರು ನೋಡಲು ಬರುತ್ತಾರೆ. ಆದರೆ ನಡುವೆ ನಡೆದ ಈ ಘಟನೆ, ಇಡೀ ಹಳ್ಳಿಯ ಜನರನ್ನು ಭಾವುಕಗೊಳಿಸಿದೆ. ಅನೇಕರು ಒಲೆ ಉರಿಸದೇ ಉಪವಾಸ ಕುಳಿತಿದ್ದಾರೆ.
ರಾಮಲೀಲಾವನ್ನು ಅಕ್ಟೋಬರ್ 14 ರಂದು ಪ್ರದರ್ಶಿಸಲಾಯಿತು. ಇದರಲ್ಲಿ ರಾಮನ ವನವಾಸದ ನಂತರ ತೆರೆ ಹಾಕಲಾಯ್ತು. ಈ ವೇಳೆ ಕೆಳ ಬಿದ್ದಿದ್ದ ದಶರಥನಾಗಿ ನಟಿಸುತ್ತಿದ್ದ ರಾಜೇಂದ್ರ ಎದ್ದು ಹೊಗಬೇಕಾಗಿತ್ತು. ಆದರೆ ಪರದೆ ಎತ್ತಿದಾಗಲೂ, ರಾಜೇಂದ್ರ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಮಲಗಿದ್ದರು.
ಇಂತಹ ನಿಜವಾದ ಕಲಾವಿದನನ್ನು ನಾವು ಇಲ್ಲಿಯವರೆಗೆ ನೋಡಿಲ್ಲ ಎಂದು ಜನರು ಹೇಳಿದ್ದಾರೆ. ನಟಿಸುವಾಗ ಈ ಜಗತ್ತನ್ನು ತೊರೆದವನು. ಅಂತಹ ಜನರು ದೇವರಂತೆ. ಅವರ ನಟನೆ ಎಷ್ಟು ಜೀವಂತವಾಗಿತ್ತು ಎಂದರೆ ಜನರು ಭಾವುಕರಾಗುತ್ತಿದ್ದರು ಎನ್ನಲಾಗಿದೆ.
ರಾಮಲೀಲಾದಲ್ಲಿ ಮೃತಪಟ್ಟ ಕಲಾವಿದ ರಾಜೇಂದ್ರ ಸಿಂಗ್ ಅವರಿಗೆ ಮೂವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಕಿರಿಯ ಮಗ ಬಿಎಸ್‌ಎಫ್‌ನಲ್ಲಿದ್ದು, ಆತನ ಆಗಮನದ ನಂತರವೇ ಅಂತ್ಯಕ್ರಿಯೆ ನಡೆಯಲಿದೆ.