ತಿಮ್ಮಪ್ಪನ ಭಕ್ತರಿಲ್ಲದೇ ತಿರುಪತಿಯೂ ಬಣ ಬಣ, ಕೊರೋನಾ ಇದು ಏನಣ್ಣ?

First Published 21, Mar 2020, 9:20 PM IST

ಏನೇ ಸಮಸ್ಯೆ ಎದುರಾದರೂ ದೇವರು ಕಾಪಾಡುತ್ತಾನೆ ಎಂದು ಮೊರೆ ಹೋಗುವ ಸಂಸ್ಕೃತಿ ಭಾರತೀಯರಿದ್ದು. ದೇವರ ಮುಂದೆ ಸಲ್ಲಿಸುವ ಪ್ರಾರ್ಥನೆಗೆ ಅಂಥ ಶಕ್ತಿ ಇದೆ ಎಂದೇ ಪುರಾತನ ಕಾಲದಿಂದಲೂ ನಂಬಲಾಗಿದೆ. ಆದರೆ, ಇಡೀ ವಿಶ್ವವೇ ಸಾಂಕ್ರಾಮಿಕ ರೋಗದ ಭೀತಿಯಿಂದ ಬಳಲುತ್ತಿದೆ. ಮನಸ್ಸು ಖಾಲಿ ಖಾಲಿ. ಏನೋ ಭಯ, ಆತಂಕ. ದೇವಸ್ಥಾನಕ್ಕಾದರೂ ಹೋಗೋಣ ಅಂದರೆ ಅದೂ ಕ್ಲೋಸ್. ಇಂಥ ಪರಿಸ್ಥಿತಿಯಲ್ಲಿ ಸದಾ ಭಕ್ತರಿಂದ ಗಿಜಿಗುಡುವ ತಿರುಪತಿಯೂ ಇದೀಗ ಬಣಗುಡುತ್ತಿದೆ. ಅಲ್ಲಿ ಹೇಗಿದೆ ನೀವೇ ನೋಡಿ....

ಪ್ರತಿ ದಿನ ಸುಮಾರು ಲಕ್ಷ ಭಕ್ತರು ಭೇಟಿ ನೀಡುವ ತಿರುಪತಿಗೂ ಕೊರೋನಾ ಬಿಸಿ ತಟ್ಟಿದೆ.

ಸೋಂಕು ಹರಡುವ ನಿಟ್ಟಿನಲ್ಲಿ ಮಾ.31ರವರೆಗೆ ದೇವಸ್ಥಾನಕ್ಕೆ ಬೀಗ ಜಡಿಯಲಾಗಿದೆ.

ವೆಂಕಟೇಶ್ವರ ದೇವಾಲಯ ಸೇರಿ ಆಂಧ್ರ ಹಾಗೂ ಕರ್ನಾಟಕದ ಬಹುತೇಕ ಎಲ್ಲಾ ದೇವಾಲಯಗಳೂ ಬಂದ್ ಆಗಿವೆ.

ಭಕ್ತರಿಗೆ ಪ್ರವೇಶ ನಿಷೇಧಿಸಿದ್ದರೂ, ಪೂಜೆ ಪುನಸ್ಕಾರಗಳು ಎಂದಿನಂತೆಯೇ ನಡೆಯುತ್ತಿವೆ.

ಕಾಲಿಡಲೂ ಜಾಗವಿರೋಲ್ಲ ತಿರುಪತಿಯಲ್ಲಿ. ಇದೀಗ ಪಿನ್ ಡ್ರಾಪ್ ಸೈಲೆನ್ಸ್.

ಹಬ್ಬದ ದಿನಗಳಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು 5 ಲಕ್ಷಕ್ಕೂ ಹೆಚ್ಚು ಮಂದಿ ಸೇರುವುದೂ ಇದೆ.

2018ರಲ್ಲಿ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ಕಾಗಿ ಆರು ದಿನ ಮುಚ್ಚಲಾಗಿತ್ತು.

ಇದೀಗ ಕೊರೋನಾ ಕಾರಣದಿಂದ ಎರಡನೇ ಬಾರಿ ಮುಚ್ಚಲಾಗಿದೆ.

ಜನ ಸಂದಣಿ ಸೇರುವ ಎಲ್ಲ ಪ್ರದೇಶಗಳನ್ನೂ ದೇಶದೆಲ್ಲೆಡೆ ಮುಚ್ಚಲಾಗಿವೆ.

ತಿರುಪತಿಗೆ ಹೋಗುವ ರಸ್ತೆಗಳೂ ಫುಲ್ ಖಾಲಿ ಖಾಲಿ.

ಕೊರೋನಾಗೆ ಯಾವುದೇ ಔಷಧ ಇಲ್ಲ. ಸಾಮಾಜಿಕ ನಿರ್ಬಂಧನೆಯೇ ದೊಡ್ಡ ಪರಿಹಾರ.

ನಾಲ್ಕು ಜನ ಸೇರುವಲ್ಲಿ ಹೋಗಬಾರದು. ಮನೆಯಲ್ಲಿರುವುದೇ ಸೇಫ್.

ಒಟ್ಟಿನಲ್ಲಿ ಈ ತಿಮ್ಮಪ್ಪನೇ ನಮ್ಮನ್ನು ಕಾಪಾಡಬೇಕು.

loader