ಅತ್ಯುತ್ತಮ ವೇತನದ ಐಟಿ ಉದ್ಯೋಗ ತೊರೆದು ದೇಶದ ಪ್ರಸಿದ್ಧ ಆಧ್ಯಾತ್ಮಿಕ ಚಿಂತಕನಾದ ಇಂಜಿನಿಯರ್!
ಇಂಜಿನಿಯರ್‌ಗಳು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಾರೆ. ಕಲೆಯಿಂದ ಹಿಡಿದು ತಂತ್ರಜ್ಞಾನದವರೆಗೆ ಎಂಜಿನಿಯರ್ ಇದ್ದಾರೆ. ಖಗೋಳ ಶಾಸ್ತ್ರದಲ್ಲಿ ಸೂರ್ಯನ ಅಧ್ಯಯನದಿಂದ ಹಿಡಿದು ಮನರಂಜನಾ ಉದ್ಯಮದಲ್ಲಿಯೂ ಬಿಟೆಕ್ ಎಂಜಿನಿಯರ್‌ಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭಾರತದ ಅದೆಷ್ಟೋ ಮಂದಿ ಇಂಜಿನಿಯರ್‌ಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಿ ದೇಶಕ್ಕೆ ಹೆಸರು ತಂದು ಕೊಟ್ಟಿದ್ದಾರೆ. ಅಂತದರಲ್ಲಿ ಇಲ್ಲೊಬ್ಬ ಇಂಜಿನಿಯರ್ ಅವೆಲ್ಲವನ್ನು ತೊರೆದು ಆಧ್ಯಾತ್ಮದ ಕಡೆಗೆ ತಿರುಗಿ ಇಂದು ದೇಶದ ಪ್ರಸಿದ್ಧ ಆಧ್ಯಾತ್ಮಿಕ ಚಿಂತಕನಾಗಿದ್ದಾರೆ. 75 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ. ಯಾರದು ಇಲ್ಲಿದೆ ಡೀಟೆಲ್ಸ್...

ಮೂಲತ ಇಂಜಿನಿಯರ್ ಆದರೆ ಇಂದು 'ವಿಜ್ಞಾನ' ಮತ್ತು 'ತರ್ಕ' ಜಗತ್ತನ್ನು ತೊರೆದು ಆಧ್ಯಾತ್ಮಿಕತೆಯ ಹಾದಿಯನ್ನು ಅನುಸರಿಸಿ ಸನ್ಯಾಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 75 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ. ಅವರೇ ಗೌರ್ ಗೋಪಾಲ್ ದಾಸ್.
ಗೌರ್ ಗೋಪಾಲ್ ದಾಸ್ ಭಾರತೀಯ ಸನ್ಯಾಸಿ, ಜೀವನಶೈಲಿ ತರಬೇತುದಾರ ಮತ್ತು ಪ್ರಖರ ಜ್ಞಾನಿ, ಆಧ್ಯಾತ್ಮಿಕ ಚಿಂತಕ, ಉತ್ತಮ ವಾಗ್ಮಿ, ಕೃಷ್ಣನ ಭಕ್ತ. ಮಾತ್ರವಲ್ಲ ಮಾಜಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದಾರೆ.
24 ಡಿಸೆಂಬರ್ 1973ರಲ್ಲಿ ಮಹಾರಾಷ್ಟ್ರದ ವಾಂಬೋರಿಯಲ್ಲಿ ಜನಿಸಿದ ಗೌರ್ ಗೋಪಾಲ್ ದಾಸ್ ಅವರು ಇಂಟರ್ನ್ಯಾಷನಲ್ ಸೊಸೈಟಿ ಆಫ್ ಕೃಷ್ಣ ಕಾನ್ಶಿಯಸ್ನೆಸ್ (ISKON) ನನ್ನು ಹಿಂಬಾಲಿಸುವ ಸನ್ಯಾಸಿಗಳಲ್ಲಿ ಒಬ್ಬರು.
ಗೌರ್ ಗೋಪಾಲ್ ದಾಸ್ ಅವರು ತಮ್ಮ ಎಲ್ಲಾ ಶಿಕ್ಷಣವನ್ನು ಪುಣೆಯಲ್ಲಿ ಮುಗಿಸಿದ್ದಾರೆ. ಅಲ್ಲಿನ ಕುಸ್ರೊ ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮತ್ತು ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಪದವಿ ಪಡೆದಿದ್ದಾರೆ. 1996 ರಲ್ಲಿ, ದಾಸ್ ಅವರು ಹೆವ್ಲೆಟ್-ಪ್ಯಾಕರ್ಡ್‌ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರು. ಬಳಿಕ ಈ ಕೆಲಸವನ್ನು ತೊರೆದು ಸನ್ಯಾಸಿಯಾಗಲು ನಿರ್ಧರಿಸಿದರು.
ಇಂಜಿನಿಯರ್ ಕೆಲಸವನ್ನು ತೊರೆದ ನಂತರ, ಗೌರ್ ಗೋಪಾಲ್ ದಾಸ್ ISKON ಗೆ ಸೇರಿದರು . ಬರೋಬ್ಬರಿ 22 ವರ್ಷಗಳ ಕಾಲ ಇಸ್ಕಾನ್ ಅಲ್ಲಿಯೇ ಇದ್ದರು, ಪ್ರಾಚೀನ ತತ್ತ್ವಶಾಸ್ತ್ರ ಮತ್ತು ಸಮಕಾಲೀನ ಮನೋವಿಜ್ಞಾನವನ್ನು ಕಲಿತು ಜೀವನ ತರಬೇತುದಾರರಾದರು.
ಕಳೆದ 2 ದಶಕಗಳಿಂದ ಭಾರತ ಮತ್ತು ವಿದೇಶಗಳಲ್ಲಿನ ವಿವಿಧ ಶೈಕ್ಷಣಿಕ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು, ಹಲವು ಆಧ್ಮಾತ್ಮಿಕ ಸಮಾರಂಬಗಳಲ್ಲಿ ಮಾತನಾಡುತ್ತಿದ್ದಾರೆ. ವಿಶ್ವಸಂಸ್ಥೆಯಲ್ಲಿ ಮತ್ತು ಮೂರು ಬಾರಿ ಬ್ರಿಟಿಷ್ ಸಂಸತ್ತಿನಲ್ಲಿ ಮಾತನಾಡಿದ್ದಾರೆ. ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿ ಹೊಂದಿದ್ದು, ಅದರ ಅಭಿವೃದ್ಧಿಗೆ ನಿಧಿ ಸಂಗ್ರಹಿಸಲು ಅವರು ಅನೇಕ ದತ್ತಿ ಕಾರ್ಯಕ್ರಮಗಳಲ್ಲಿ ಮಾತನಾಡಿದ್ದಾರೆ.
ಅವರ ಜೀವನ ಬೋಧನೆಗಳನ್ನು ಅನೇಕ ಜನರು ಅನುಸರಿಸುತ್ತಾರೆ. ಅವರು ಇಸ್ಕಾನ್‌ನ ಅತ್ಯಂತ ಜನಪ್ರಿಯ ಸನ್ಯಾಸಿಗಳಲ್ಲಿ ಒಬ್ಬರು. ಅವರು ಸಾಮಾಜಿಕ ಜಾಲತಾಣದಲ್ಲಿ 75 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. 2018 ರಲ್ಲಿ ಅವರು ಲೈಫ್ಸ್ ಅಮೇಜಿಂಗ್ ಸೀಕ್ರೆಟ್ಸ್ ಪುಸ್ತಕವನ್ನು ಪ್ರಕಟಿಸಿದ್ದಾರೆ. ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) ನಿಂದ ಗೌರವ ಡಾಕ್ಟರೇಟ್ ಲಭಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ