MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಟೆಲಿಕಾಂ ನೀತಿ ಸಡಿಲಿಕೆಯಿಂದ ವಿದೇಶಿ ಕಂಪೆನಿಗಳ ಪ್ರಾಬಲ್ಯ, ಭಾರತೀಯ ಸಂಸ್ಥೆಗೆ ಅಪಾಯ: ಜಿಟಿಆರ್‌ಐ ಎಚ್ಚರಿಕೆ

ಟೆಲಿಕಾಂ ನೀತಿ ಸಡಿಲಿಕೆಯಿಂದ ವಿದೇಶಿ ಕಂಪೆನಿಗಳ ಪ್ರಾಬಲ್ಯ, ಭಾರತೀಯ ಸಂಸ್ಥೆಗೆ ಅಪಾಯ: ಜಿಟಿಆರ್‌ಐ ಎಚ್ಚರಿಕೆ

ದೂರಸಂಪರ್ಕ ವಲಯದ ಸಾರ್ವಜನಿಕ ಖರೀದಿ ಆದೇಶದಲ್ಲಿ ಸ್ಥಳೀಯ ವಿಷಯ ನಿಯಮಗಳ ಸಡಿಲಿಕೆ ಭಾರತೀಯ ತಯಾರಕರಿಗೆ ಹಿನ್ನಡೆಯಾಗಬಹುದು ಎಂದು GTRI ವರದಿ ಎಚ್ಚರಿಸಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಇದು ಲಾಭದಾಯಕವಾಗಬಹುದು. ಈ ನಡೆ  ಸ್ಥಳೀಕರಣಕ್ಕೆ ಹಾನಿಕರ ಮತ್ತು ವಿದೇಶಿ ಅವಲಂಬನೆಗೆ ದಾರಿ ಮಾಡಿಕೊಡಬಹುದು.

2 Min read
Author : Gowthami K
Published : Jun 22 2025, 06:37 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Gemini

ಬೆಂಗಳೂರು: ದೂರಸಂಪರ್ಕ ವಲಯಕ್ಕೆ ಸಂಬಂಧಿಸಿದ ಸಾರ್ವಜನಿಕ ಖರೀದಿ ಆದೇಶದಲ್ಲಿ (PPP-MII) ಸ್ಥಳೀಯ ವಿಷಯ (Local Content) ನಿಯಮಗಳ ಸಡಿಲಿಕೆಗಳು ಭಾರತೀಯ ತಯಾರಕರಿಗೆ ಹಿನ್ನಡೆಯಾಗಬಹುದು ಎಂದು ಜಾಗತಿಕ ವ್ಯಾಪಾರ ಸಂಶೋಧನಾ ಇಂಡೆಕ್ಸ್ (GTRI) ತನ್ನ ಇತ್ತೀಚಿನ ವರದಿಯಲ್ಲಿ ಎಚ್ಚರಿಸಿದೆ. ಈ ಬದಲಾವಣೆಗಳು ಬಹುರಾಷ್ಟ್ರೀಯ ಕಂಪನಿಗಳಿಗೆ (MNCs) ಲಾಭದಾಯಕವಾಗಬಹುದು ಎಂಬ ಆತಂಕ ಕೂಡ ವ್ಯಕ್ತವಾಗಿದೆ. ದೂರಸಂಪರ್ಕ ಇಲಾಖೆ (DoT) ಜುಲೈ 3ರವರೆಗೆ ಸಾರ್ವಜನಿಕ ಸಮಾಲೋಚನೆಗಾಗಿ “ಭಾರತದಲ್ಲಿ ತಯಾರಿಸಿ ಆದ್ಯತೆ” ಯೋಜನೆಯ (PPP-MII) ಪರಿಷ್ಕೃತ ತಿದ್ದುಪಡಿಗಳ ನಿಯಮವನ್ನು ಪ್ರಸ್ತಾಪಿಸಿದೆ. ಇದರಲ್ಲಿ ಸರ್ಕಾರಿ ಖರೀದಿಯಲ್ಲಿ ಬಳಕೆಯಾದ ದೂರಸಂಪರ್ಕ ಉತ್ಪನ್ನಗಳ ಸ್ಥಳೀಯ ವಿಷಯ ಪ್ರಮಾಣವನ್ನು ನಿರ್ಧರಿಸುವ ನೀತಿಗಳ ಪರಿಷ್ಕರಣೆ ಮಾಡಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Image Credit : our own

"ಸ್ಥಳೀಯ ವಿಷಯದ ನಿಯಮಗಳನ್ನು ಸಡಿಲಿಸುವ ಪ್ರಯತ್ನ ಸಿಸ್ಕೋ, ಎರಿಕ್ಸನ್ ಮುಂತಾದ MNCಗಳಿಗೆ ಲಾಭಕಾರಿಯಾಗಬಹುದಾದರೆ, ಇದು ದೇಶೀಯ ತಯಾರಕರಿಗೆ ಮತ್ತು ಭಾರತದಲ್ಲಿ ತಮ್ಮ ಆರ್ ಮತ್ತು ಡಿ ಹಾಗೂ ಉತ್ಪಾದನಾ ಬಾಳಿಗೆ ಹೂಡಿಕೆ ಮಾಡಿದ ಕಂಪನಿಗಳಿಗೆ ಹಾನಿಕಾರಕವಾಗಬಹುದು" ಎಂದು GTRI ಹಿರಿಯ ಸಂಶೋಧಕ ಹಾಗೂ ಮಾಜಿ ಭಾರತೀಯ ವ್ಯಾಪಾರ ಸೇವೆಯ ಅಧಿಕಾರಿ ಅಜಯ್ ಶ್ರೀವಾಸ್ತವ ANI ಗೆ ನೀಡಿದ ಟಿಪ್ಪಣಿಯಲ್ಲಿ ಹೇಳಿದ್ದಾರೆ. PPP-MII ನೀತಿಯ ಪ್ರಕಾರ, ಸರ್ಕಾರಿ ಖರೀದಿಯಲ್ಲಿ “ವರ್ಗ-I ಪೂರೈಕೆದಾರ” ಸ್ಥಾನ ಪಡೆಯಲು ಕಂಪನಿಗಳು ಕನಿಷ್ಠ 50% ಸ್ಥಳೀಯ ವಿಷಯ ಹೊಂದಿರುವ ಉತ್ಪನ್ನಗಳನ್ನು ನೀಡಬೇಕು. 2024 ಅಕ್ಟೋಬರ್‌ನಲ್ಲಿ ನವೀಕರಿಸಿದ ಈ ನೀತಿ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ.

35
Image Credit : our own

ಆದರೆ, ಈಗ ಕೆಲವು ವಿದೇಶಿ ಟೆಲಿಕಾಂ ಕಂಪನಿಗಳು ಈ 50% ಮಾನದಂಡವನ್ನು ಪೂರೈಸುವುದು ಕಷ್ಟಕರವೆಂದು ನೋಡಿ, ಇದನ್ನು ತಗ್ಗಿಸಲು ದೂರಸಂಪರ್ಕ ಇಲಾಖೆ ಮೇಲೆ ಲಾಬಿ ಮಾಡುತ್ತಿವೆ ಎಂಬುದು GTRI ವರದಿಯ ವಿಶ್ಲೇಷಣೆ. ಇದನ್ನು ಪರಿಗಣಿಸಿದರೆ, ಭಾರತದಲ್ಲಿ ಉತ್ಪಾದನೆಯ ಬದಲಾಗಿ ಕೇವಲ ಫೈನಲ್ ಅಸೆಂಬ್ಲಿ ಅಥವಾ ಸಾಫ್ಟ್‌ವೇರ್ ತಿದ್ದುವಿಕೆಯಿಂದಲೇ ‘ವರ್ಗ-I ಪೂರೈಕೆದಾರ’ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗುತ್ತದೆ.

45
Image Credit : pixabay

ಈ ನೀತಿಯು ರೂಟರ್‌ಗಳು, ಈಥರ್‌ನೆಟ್ ಸ್ವಿಚ್‌ಗಳು, GPON ಸಾಧನಗಳು, ಮಾಧ್ಯಮ ಗೇಟ್‌ವೇಗಳು, ಟೆಲಿಕಾಂ ಬ್ಯಾಟರಿಗಳು, ಆಪ್ಟಿಕಲ್ ಫೈಬರ್ ಮತ್ತು ಕೇಬಲ್‌ಗಳು ಸೇರಿದಂತೆ 36 ಪ್ರಮುಖ ದೂರಸಂಪರ್ಕ ಉತ್ಪನ್ನಗಳಿಗೆ ಅನ್ವಯಿಸುತ್ತದೆ. ಆದರೆ, ಈ ನಿಯಮಗಳು ಆಮದು ಮಾಡಿದ ಭಾಗಗಳು, ರಾಯಲ್ಟಿಗಳು, ವಿದೇಶಿ ತಾಂತ್ರಿಕ ಶುಲ್ಕಗಳು ಇತ್ಯಾದಿಗಳನ್ನು ಸ್ಥಳೀಯ ವಿಷಯದ ಎಣಿಕೆಯಿಂದ ಹೊರಗಿಡುತ್ತವೆ.

GTRI ವರದಿ ಪ್ರಕಾರ, "ಅಂತಾರಾಷ್ಟ್ರೀಯ ಕಂಪನಿಗಳು ತಮ್ಮ ಹೆಚ್ಚಿನ ತಾಂತ್ರಿಕ ಕೆಲಸವನ್ನು ವಿದೇಶಿ ಪೋಷಕ ಸಂಸ್ಥೆಗಳ ಮೂಲಕ ಹೊರಗುತ್ತಿಗೆ ಮೂಲಕ ನಿರ್ವಹಿಸುತ್ತಿವೆ. ಐಪಿ ಹಕ್ಕುಗಳನ್ನು ಮತ್ತು ಲಾಭದ ಹೆಚ್ಚಿನ ಭಾಗವನ್ನೂ ಅವೇ ಕಾಪಾಡಿಕೊಳ್ಳುತ್ತವೆ. ಇದು ದೇಶೀಯ ಕಂಪನಿಗಳಿಗೆ ಅಸಮಾನ ಸ್ಪರ್ಧಾತ್ಮಕ ಪರಿಸ್ಥಿತಿಯನ್ನು ಉಂಟುಮಾಡುತ್ತದೆ.

55
Image Credit : Nothing

ಸ್ಥಳೀಯ ವಿಷಯ ಮಾನದಂಡಗಳನ್ನು ಸಡಿಲಿಸುವ ಈ ನಡೆ, ನಿಜವಾದ ತಾಂತ್ರಿಕ ಸ್ಥಳೀಕರಣವನ್ನು ಉತ್ತೇಜಿಸುವ ಬದಲು, ತಾತ್ಕಾಲಿಕ ಜೋಡಣೆ ಅಥವಾ ಸಾಫ್ಟ್‌ವೇರ್ ತಿದ್ದುಪಡಿ ಕೇಂದ್ರಿತ ದೃಷ್ಠಿಕೋನಕ್ಕೆ ದಾರಿ ಮಾಡಿಕೊಡಬಹುದು. ಇದರ ಪರಿಣಾಮವಾಗಿ ಭಾರತವು ದೂರಸಂಪರ್ಕ ತಂತ್ರಜ್ಞಾನದಲ್ಲಿ ವಿದೇಶಿ ಅವಲಂಬನೆಗೇ ಸೀಮಿತವಾಗಬಹುದು ಎಂಬ ಆತಂಕವನ್ನು ವರದಿ ವ್ಯಕ್ತಪಡಿಸುತ್ತದೆ. ಸಾರಾಂಶವಾಗಿ, ಈ ನೀತಿಗಳ ಪುನರ್ ವಿಮರ್ಶೆ ಅಥವಾ ಸಡಿಲಿಕೆಯಿಂದ ದೇಶೀಯ ತಯಾರಿಕೆ, ಆರ್‌ & ಡಿ, ಮತ್ತು ನಾವೀನ್ಯತೆ ಪೀಡಿತವಾಗುವ ಸಾಧ್ಯತೆ ಇರುವುದರಿಂದ, ನೀತಿನಿರ್ಧಾರಕರಿಂದ ಹೆಚ್ಚಿನ ಜಾಗರೂಕತೆ ಮತ್ತು ತಾಂತ್ರಿಕ ಸಮತೆ ಬೇಕು ಎಂಬುದು ಜಾಗತಿಕ ವ್ಯಾಪಾರ ಸಂಶೋಧನಾ ಉಪಕ್ರಮ ವರದಿಯ ಮುಖ್ಯ ಸಂದೇಶ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ದೂರಸಂಪರ್ಕ
ಭಾರತ ಸುದ್ದಿ
ಭಾರತ
ತಂತ್ರಜ್ಞಾನ
 
2nd TEST • PAK vs SL 2026
PAKPAK
Tue, 17 Nov, 2026
SLSL
10:00 am
Match yet to begin.
Schedule ›
3rd ODI • AUS vs ENG 2026
AUSAUS
Wed, 18 Nov, 2026
ENGENG
09:00 am
Match yet to begin.
Schedule ›
2nd ODI • AUS vs ENG 2026
Result
AUSAUS
220
ENGENG
355/6
ENG beat AUS by 135 runs
Schedule ›
5th ODI • NZ vs IND 2026
Result
NZNZ
187
INDIND
209
IND beat NZ by 22 runs
Schedule ›
1st ODI • AUS vs ENG 2026
Result
AUSAUS
132/3
ENGENG
131
AUS won by 7 wickets
Schedule ›
4th ODI • NZ vs IND 2026
Result
NZNZ
333
INDIND
89
NZ beat IND by 244 runs
Schedule ›
3rd ODI • NZ vs IND 2026
abandoned
NZNZ
-
INDIND
-
Match abandoned
Schedule ›
1st TEST • PAK vs SL 2026
Result
PAKPAK
434 & 284/8
SLSL
446
Match drawn
Schedule ›
15th T20 • WBBLT20
Result
SS-WSS-W
162/2
ST-WST-W
158
Sydney Sixers Women Won by 9 runs (D/L) method
Schedule ›
Latest Videos
Recommended Stories
Recommended image1
India Latest News Live: ಹೆಲ್ಮೆಟ್‌ಗೂ ಇದೆ ಎಕ್ಸ್‌ಪೈರಿ ಡೇಟ್, ನೀವು ಒಂದನ್ನು ಎಷ್ಟು ವರ್ಷ ಬಳಸಬಹುದು?
Recommended image2
ಸೋನಿಯಾ ಆತ್ಮಕತೆ ಕೇವಲ 6 ದಿನದಲ್ಲಿ 2 ಲಕ್ಷ ಪ್ರತಿಗಳು ಸೇಲ್‌, ₹20 ಕೋಟಿ ಆದಾಯ!
Recommended image3
ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆಯಲ್ಲಿ 5ನೇ ಸಾಲಲ್ಲಿ ಕುಳಿತ ಮಾಜಿ ಸಿಎಂ ಸಿದ್ದರಾಮಯ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved