ಜೈಲಿನಿಂದ ಹೊರಬಂದ 'ನಾಯಕ'ನ ಶಕ್ತಿ ಪ್ರದರ್ಶನ, 300 ವಾಹನಗಳ ರ‍್ಯಾಲಿ!
ಔರೆಯಾ ಭಾಗ್ಯನಗರ ಕ್ಷೇತ್ರದ ಸಮಾಜವಾದಿ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯ ಧರ್ಮೇಂದ್ರ ಯಾದವ್ ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ಸದ್ದು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ಜೈಲಿನಿಂದ ಬಿಡುಗಡೆಗೊಂಡ ಬಳಿಕ ಸುಮಾರು 300 ವಾಹನಗಳ ರ‍್ಯಾಲಿ ನಡೆಸಿದ್ದಾರೆ. ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿರುವ ಸಮಾಜವಾದಿ ಪಕ್ಷದ ನಾಯಕ ಮಾಸ್ಕ್ ಕೂಡಾ ಧರಿಸಿಲ್ಲ. ಆದರೆ ಈ ವಿಚಾರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಸಂಬಂಧ ಇಟಾವಾ ಪೊಲೀಸರು ಧರ್ಮೇಂದ್ರ ಯಾದವ್ ಹಾಗೂ 200 ಮಂದಿ ಅನಾಮಿಕರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಔರೆಯಾದ ಭಾಗ್ಯನಗರ ಸೀಟ್ ನಂಬರ್ 4ರಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಧರ್ಮೇಂದ್ರ ಯಾದವ್ ಔರೆಯಾದ ಯುವಜನ್ ಸಭಾದ ಜಿಲ್ಲಾಧ್ಯಕ್ಷರೂ ಹೌದು. ಅವರ ವಿರುದ್ಧ ಅನೇಕ ಕೇಸ್‌ಗಳಿವೆ. ಪ್ರಕರಣವೊಂದರಲ್ಲಿ ಸಿಲುಕಿ ಹೊರಬರಲಾಗದೆ ಇಟಾವಾ ಜೈಲಿನಲ್ಲಿ ಬಂಧಿಯಾಗಿದ್ದರು. ಆದರೆ ಶನಿವಾರ ಸಂಜೆ ಬಿಡುಗಡೆಯಾಗಿದ್ದಾರೆ.

ಧರ್ಮೇಂದ್ರ ಯಾದವ್ ಜೈಲಿನಿಂದ ಹೊರ ಬಂದಾಗ ಅವರ ಬೆಂಬಲಿಗರು ಬಹುದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದಾದ ಬಳಿಕ ತಮ್ಮ ನಾಯಕನೊಂದಿಗೆ 300 ವಾಹನಗಳ ರ‍್ಯಾಲಿ ಮೂಲಕ ಹೊರಟಿದ್ದಾರೆ.

ಇನ್ನು ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಲಾಕ್‌ಡೌನ್ ಮಾರ್ಗಸೂಚಿ ಉಲ್ಲಂಘನೆ ಸಂಬಂಧ ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ. ಇನ್ನು ಈ ವಿಡಿಯೋ ಭಾನುವಾರ ಬೆಳಗ್ಗಿನದ್ದಾಗಿದ್ದು, ಧರ್ಮೇಂದ್ರ ಯಾದವ್ ರಾತ್ರಿ ಇಡೀ ಎಲ್ಲಿದ್ದರೆಂಬ ವಿಚಾರ ಪೊಲೀಸರನ್ನು ಸತಾಯಿಸುತ್ತಿದೆ.

ಸದ್ಯ 200 ಅನಾಮಿಕರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಜೊತೆಗೆ ಧರ್ಮೇಂದ್ರ ಯಾದವ್ ಹುಡುಕಾಟ ಮುಂದುವರೆದಿದೆ. ಅಲ್ಲದೇ ಈ ರ‍್ಯಾಲಿಯಲ್ಲಿ ಭಾಗವಹಿಸಿದ 24 ವಾಹನಗಳ ಜೊತೆ 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಧರ್ಮೆಂದ್ರ ಯಾದವ್ ಸದ್ಯ ಪರಾರಿಯಾಗಿದ್ದಾನೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ