ಕಾಂಗ್ರೆಸ್‌ನ ಚಾಣಕ್ಯ ಇನ್ನಿಲ್ಲ, ಕುಟುಂಬಕ್ಕೆ ಬಿಟ್ಟು ಹೋದ್ರು ಇಷ್ಟು ಆಸ್ತಿ!
First Published Nov 25, 2020, 4:49 PM IST
ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸೋನಿಯಾ ಗಾಂಧಿ ಸಲಹೆಗಾರರಾಗಿದ್ದ ಅಹ್ಮದ್ ಪಟೇಲ್ ಬುಧವಾರ ಮುಂಜಾನೆ ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಕಳೆದ ತಿಂಗಳು ಕೊರೋನಾ ಸೋಂಕು ತಗುಲಿರುವುದೂ ದೃಢಪಟ್ಟಿತ್ತು. ಹೀಗಾಗಿ ಅವರನ್ನು ಮೇದಾಂತ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಹ್ಮದ್ ಪಟೇಲ್‌ರನ್ನು ಕಾಂಗ್ರೆಸ್‌ನ ಚಾಣಕ್ಯ ಎಂದೂ ಕರೆಯಲಾಗುತ್ತದೆ. ಅದರಲ್ಲೂ ವಿಶೇಷವಾಗಿ ರಾಜೀವ್ ಗಾಂಧಿ ಹತ್ಯೆ ಬಳಿಕ ಸೋನಿಯಾ ಗಾಂಧಿಯನ್ನು ರಾಜಕೀಯದಲ್ಲಿ ಬಲವಾಗಿ ಬೇರೂರುವಂತೆ ಮಾಡಿದ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ.

ಅಹ್ಮದ್ ಪಟೇಲ್ ಗುಜರಾಥ್ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯರಾಗಿದ್ದರು. ಅಲ್ಲದೇ ಅವರು ಕಾಂಗ್ರೆಸ್‌ನ ಖಜಾಂಜಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಹಾಗಾದ್ರೆ ಅಹ್ಮದ್ ಪಟೇಲ್ ಬಳಿ ಇದ್ದ ಆಸ್ತಿ ಎಷ್ಟು? ಮುಂದಿದೆ ವಿವರ

myneta.info ಅನ್ವಯ ಅಹ್ಮದ್ ಪಟೇಲ್ ಆಸ್ತಿ 2011 ರಿಂದ 2017ವರೆಗೆ ಶೇ 23ರಷ್ಟು ಹೆಚ್ಚಳವಾಗಿತ್ತು. ಚುನಾವಣಾ ಆಯೋಗಕ್ಕೆ ನೀಡಿದ್ದ ಅಫಿಡವಿಟ್‌ನಲ್ಲಿ ಅಹ್ಮದ್ ಪಟೇಲ್ ತಮ್ಮ ವಾರ್ಷಿಕ ಆದಾಯ 15,10,147ರೂ. ಎಂದು ತಿಳಿಸಿದ್ದರು. ಇನ್ನು ಅವರ ಪತ್ನಿ ಮೈಮೂನಾರವರ ಆದಾಯ 20,15,900 ರೂ. ಎಂದು ತಿಳಿಸಿದ್ದರು. ಅಂದರೆ ಇಬ್ಬರ ಒಟ್ಟು ಆದಾಯ 35,26,047 ರೂ. ಆಗಿತ್ತು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?