ದೇಗುಲದ ಹುಂಡಿಯಲ್ಲಿ ಚಿನ್ನಾಭರಣ, ಬೆಳ್ಳಿಯ ಐಫೋನ್: 'ಖಜಾನೆ' ಹಣ ಎಣಿಸಲು ಬೇಕು 10 ದಿನ!
ಇಡೀ ವಿಶ್ವದಲ್ಲಿ ದೇಣಿಗೆ ವಿಚಾರದಲ್ಲಿ ಪ್ರಖ್ಯಾತಿ ಗಳಿಸಿರುವ ರಾಜಸ್ಥಾನದ ಮೇವಾರ್‌ನಲ್ಲಿ ನಿರ್ಮಿಸಲಾಗಿರುವ ಕೃಷ್ಣ ಧಾಮ ಶ್ರೀ ಸಾನ್ವಾಲಿಯಾಜಿ ಸೇಠ್(Sanwaliya Seth temple) ದೇವಾಲಯದ ದೇಣಿಗೆ ಪೆಟ್ಟಿಗೆಯನ್ನು ತೆರೆಯಲಾಗಿದೆ. ಈ ಬಾರಿ ಸುಮಾರು 5 ಕೋಟಿ ನಗದು ಮತ್ತು ಚಿನ್ನ ಮತ್ತು ಬೆಳ್ಳಿಯ ಹಲವು ಬೆಲೆಬಾಳುವ ಆಭರಣಗಳು ಪತ್ತೆಯಾಗಿವೆ. ಇಷ್ಟೇ ಅಲ್ಲದೇ, ಭಕ್ತರೊಬ್ಬರು ಬೆಳ್ಳಿಯಿಂದ ಮಾಡಿದ ಐಫೋನ್ ಅನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದ್ದಾರೆ. ಕಳೆದ ತಿಂಗಳು, 7 ಕೋಟಿಗೂ ಹೆಚ್ಚು ಮೌಲ್ಯದ ದೇಣಿಗೆ ಬಂದಿತ್ತು.

ವಾಸ್ತವವಾಗಿ, ಪ್ರತಿ ತಿಂಗಳು ಶ್ರೀ ಸಾನ್ವಾಲಿಯಾ ಸೇಠ್ ದೇವಾಲಯದ ದೇಣಿಗೆ ಪೆಟ್ಟಿಗೆಯನ್ನು ತೆರೆಯಲಾಗುತ್ತದೆ. ಈ ಬಾರಿ ಮಂಗಳವಾರ ಅಂದರೆ ಕೃಷ್ಣ ಚತುರ್ದಶಿಯಂದು ತೆರೆಯಲಾಯಿತು. ಕಳೆದ ಎರಡು ದಿನಗಳ ಕಾಲ ನಿರಂತರವಾಗಿ ನೋಟುಗಳ ಎಣಿಕೆ ನಡೆಯುತ್ತಿದೆದ್ದು, ಇದರಲ್ಲಿ ದೇವಸ್ಥಾನ ಸಮಿತಿಯು 150 ಕ್ಕೂ ಹೆಚ್ಚು ಜನರು ಸೇವೆ ಸಲ್ಲಿಸಿದ್ದಾರೆ. ಆದರೆ ಇಲ್ಲಿಯವರೆಗೆ ಎಣಿಕೆ ಪೂರ್ಣಗೊಂಡಿಲ್ಲ. ಪ್ರತಿ ವರ್ಷದಂತೆ, ಈ ಬಾರಿಯೂ ನೋಟುಗಳನ್ನು ಎಣಿಸಲು ಕನಿಷ್ಠ 8 ರಿಂದ 10 ದಿನಗಳು ಆಗಬಹುದೆನ್ನಲಾಗಿದೆ. ಸದ್ಯಕ್ಕೆ, ದೇವಾಲಯದ ಬಾಗಿಲು ಭಕ್ತರಿಗಾಗಿ ಮುಚ್ಚಲ್ಪಟ್ಟಿದೆ, ಇನ್ನು ಗುರುವಾರ ದೇಗುಲ ತೆರೆಯಲಾಗುತ್ತದೆ.
ಇನ್ನು ಈ ದೇಣಿಗೆ ಪೆಟ್ಟಿಗೆಯನ್ನು ಶ್ರೀ ಸಾನ್ವಲಿಯಾ ಜಿ ಮಂದಿರ ಮಂಡಲದ ಅಧ್ಯಕ್ಷ ಕನ್ಹಯ್ಯದಾಸ್ ವೈಷ್ಣವ್, ಎಡಿಎಂ ಮತ್ತು ಮಂದಿರ ಮಂಡಳಿಯ ಸಿಇಒ ರತನ್ ಕುಮಾರ್ ಸ್ವಾಮಿ ಅವರ ಸಮ್ಮುಖದಲ್ಲಿ ತೆರೆಯಲಾಯಿತು. ಇದರೊಂದಿಗೆ, ಹನ್ನೆರಡಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗು ನಿಯೋಜಿಸಲಾಗಿದೆ. ಜೊತೆಗೆ ನಗದಿನ ಜೊತೆ ಮನಿ ಆರ್ಡರ್ ಹಾಗೂ ಮತ್ತು ಡಾಲರ್‌ಗಳೂ ಕಾಣಿಕೆ ಪೆಟ್ಟಿಗೆಯಲ್ಲಿ ಕಂಡುಬಂದಿವೆ. ಇವುಗಳೊಂದಿಗೆ ಭಕ್ತರು ಸಲ್ಲಿಸಿರುವ ಹರಕೆ ಪತ್ರಗಳನ್ನೂ ಸಂಗ್ರಹಿಸಿಡಲಾಗಿದೆ.
ಭಕ್ತರು ಇಲ್ಲಿ ಎಷ್ಟು ದೇಣಿಗೆ ನಿಡುತ್ತಾರೋ ದೇವರು ಅದಕ್ಕೂ ಹೆಚ್ಚಿನ ಸಂಪತ್ತು ಅವರಿಗೆ ನೀಡುತ್ತಾರೆ ಎಂಬ ನಂಬಿಕೆ ಶ್ರೀ ಸನ್ವಾಲಿಯಾ ದೇವಾಲಯಕ್ಕೆ ಬರುವವರ ನಂಬಿಕೆಯಾಗಿದೆ. ಅಲ್ಲದೇ, ಅನೇಕ ಜನರು ತಮ್ಮ ವಾರ್ಷಿಕ, ಮಾಸಿಕ ಆದಾಯದ ಒಂದು ಭಾಗವನ್ನು ಇಲ್ಲಿ ಇಟ್ಟು ಹೋಗುತ್ತಾರೆ. ಈ ಮೊತ್ತ ಸುಮಾರು ಶೇ 2 ರಿಂದ 20 ಇರುತ್ತದೆ. ಹೀಗೆ ಮಾಡುವುದರಿಂದ ದೇವರು ಅವರ ಆದಾಯವನ್ನು ದ್ವಿಗುಣಗೊಳಿಸುತ್ತಾರೆಂಬ ಪ್ರತೀತಿಯೂ ಇದೆ.
ಸಂವಾಲಿಯಾ ಜಿ ದೇವಸ್ಥಾನದಲ್ಲಿ ಸುಮಾರು 500 ಜನ ಸಿಬ್ಬಂದಿ ಇದ್ದಾರೆ. ಯಾರು ದೇವಸ್ಥಾನದ ನಿರ್ವಹಣೆ, ದೇಗುಲದ ಟ್ರಸ್ಟ್ ದೇಣಿಗೆ ಪೆಟ್ಟಿಗೆಯಿಂದ ಹೊರಬರುವ ಮೊತ್ತದಿಂದಅನೇಕ ಸೇವಾ ಕಾರ್ಯಗಳನ್ನು ಕೂಡ ಮಾಡುತ್ತಾರೆ. ಸುಮಾರು 25 ಹಳ್ಳಿಗಳ ಅಭಿವೃದ್ಧಿಯನ್ನು ಈ ದಾನ ಮೊತ್ತದಿಂದ ಮಾಡಲಾಗುತ್ತದೆ. ಉದಾಹರಣೆಗೆ, ಈ ಮೊತ್ತವನ್ನು ಶಿಕ್ಷಣ, ವೈದ್ಯಕೀಯ, ಧಾರ್ಮಿಕ ಕಾರ್ಯಕ್ರಮಗಳು, ಅಭಿವೃದ್ಧಿ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತದೆ.
ಶ್ರದ್ಧೆಯಿಂದ ಇಲ್ಲಿ ಬೇಡಿದರೆ ಬಯಸಿದ ಆಸೆ ಈಡೇರುತ್ತದೆ ಎಂದು ಹೇಳಲಾಗುತ್ತದೆ, ಸಾನ್ವಾಲಿಯಾ ದೇವರು ಪ್ರತಿಯೊಬ್ಬರ ಜೋಳಿಗೆಯನ್ನು ತುಂಬುತ್ತಾನೆ ಎಂಬ ನಂಬಿಕೆ ಇದೆ. ಆದುದರಿಂದಲೇ ವ್ಯಕ್ತಿಯೊಬ್ಬ ಬಯಸಿದ್ದಕ್ಕಿಂತ ಹೆಚ್ಚಿನದ್ದನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ನಾಯಕರು ಮತ್ತು/ಅಥವಾ ನಟರು ಎಲ್ಲರೂ ಇಲ್ಲಿಗೆ ಬಂದು ಸಂವಾಲಿಯಾ ದೇವಸ್ಥಾನದಲ್ಲಿ ದರ್ಶನ ಪಡೆಯುತ್ತಾರೆ. ದೇಶದ ಅತಿದೊಡ್ಡ ಮತ್ತು ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯವರ ಕುಟುಂಬ ದರ್ಶನಕ್ಕಾಗಿ ಹಲವು ಬಾರಿ ಇಲ್ಲಿಗೆ ಬಂದಿದೆ. ಅಲ್ಲದೇ, ಅವರ ತಂದೆ ಕೈಗಾರಿಕೋದ್ಯಮಿ ಧೀರೂಭಾಯಿ ಅಂಬಾನಿ ಪತ್ನಿ ಕೋಕಿಲಾಬೆನ್ ಅಂಬಾನಿ ಅವರು ಸಾನ್ವಾಲಿಯಾದಲ್ಲಿ ದರ್ಶನ ಪಡೆದಿದ್ದರು. ಬಾಲಿವುಡ್ ನಟರಾದ ಧರ್ಮೇಂದ್ರ, ಶಕ್ತಿ ಕಪೂರ್ ಮತ್ತು ಸಂಜಯ್ ದತ್ ಇಲ್ಲಿ ಹರಕೆ ಹಾಕಿದ್ದರು ಎಂಬ ಮಾರುಗಳೂ ಕೇಳಿ ಬಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ