ನೆಹರೂ ಅಲ್ಲ, ಏಮ್ಸ್ ನಿರ್ಮಾಣದ ಹಿಂದಿದೆ ರಾಜಕುಮಾರಿ ಅಮೃತ್ ಕೌರ್ ಪರಿಶ್ರಮ!

First Published 29, Aug 2020, 6:17 PM

ದೇಶದ ಅತ್ಯುನ್ನತ ವೈದ್ಯಕೀಯ ಸಂಸ್ಥೆ ಎಂದಾಗ ಎಲ್ಲರ ಬಾಯಲ್ಲಿ ಬರುವ ಮೊದಲ ಹೆಸರೆಂದರೆ ದೆಹಲಿಯ ಏಮ್ಸ್‌ ಆಸ್ಪತ್ರೆ. ಅನಾರೋಗ್ಯಕ್ಕೀಡಾದಾಗ ಕೇಂದ್ರ ಸಚಿವರು, ಹಿರಿಯ ನಾಯಕರು ಹೀಗೆ ಎಲ್ಲರೂ ಇಲ್ಲಿಗೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ. ಸರ್ಕಾರ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ ಎಂಬ ಅಸಮಾಧಾನ ಇರುವ ಇಂದಿನ ದಿನಗಳಲ್ಲಿ, ರಾಜಕೀಯ ಗಣ್ಯರು ಬೇರಾವುದೇಯೋಚನೆ ಮಾಡದೆ ತೆರಳುವಷ್ಟು ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ಇಲ್ಲಿ ನೀಡಲಾಗುತ್ತದೆ. ಆದರೆ ಏಮ್ಸ್‌ ನಿರ್ಮಾಣವಾಗಿದ್ದು ಹೇಗೆ? ದೇಶದ ಅತ್ಯುನ್ನತ ಆಸ್ಪತ್ರೆ ನಿರ್ಮಾಣದ ಹಿಂದೆ ಯಾರ ಪರಿಶ್ರಮ ಇದೆ? ಎಂಬ ಪ್ರಶ್ನೆ ಬಂದಾಗ ಸಾಮಾನ್ಯವಾಗಿ ಜವಾಹರಲಾಲ್ ನೆಹರು ಹೆಸರು ಕೇಳಿ ಬರುತ್ತದೆ. ಆದರೆ ವಾಸ್ತವವಾಗಿ ಈ ಆಸ್ಪತ್ರೆ  ನಿರ್ಮಾಣದ ಹಿಂದಿರುವುದು ರಾಜಕುಮಾರಿ ಅಮೃತ್ ಕೌರ್. ಅಷ್ಟಕ್ಕೂ ಇವರಾರು ಅಂತೀರಾ? ಇಲ್ಲಿದೆ ವಿವರ

1956ರ ಫೆಬ್ರವರಿ 18ರಂದು, ಅಂದಿನ ಆರೋಗ್ಯ ಸಚಿವೆಯಾಗಿದ್ದ ರಾಜಕುಮಾರಿ ಅಮೃತ್ ಕೌರ್ ಲೋಕಸಭೆಯಲ್ಲಿ ನೂತನ ಮಸೂದೆಯಂದನ್ನು ಪ್ರಸ್ತುತಪಡಿಸಿದರು. ಅಂದು ಅವರು ಭಾಷಣ ಮಾಡಲು ಯಾವುದೇ ತಯಾರಿ ನಡೆಸಿರಲಿಲ್ಲ. ಹೀಗಿದ್ದರೂ ಅವರು ತಮ್ಮ ಹೃದಯ ಅಂತರಾಳದಿಂದ ಮಾತನಾಡುತ್ತಾ ಸ್ನಾತಕೋತ್ತರ ಪದವಿಗಾಗಿ ಹಾಗೂ ಗುಣಮಟ್ಟದ ವೈದ್ಯಕೀಯ ಶಿಕ್ಷಣ ದೇಶದಲ್ಲಿ ಒದಗಿಸುವ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಇಂತಹುದ್ದೊಂದು ಸಂಸ್ಥೆ ಇರಬೇಕು. ಈ ಮೂಲಕ ನಮ್ಮ ದೇಶದ ಯುವಜನರಿಗೆ ನಮ್ಮ ದೇಶದಲ್ಲೇ ವೈದ್ಯಕೀಯ ಶಿಕ್ಷಣ ಸಿಗುವಂತಾಗಬೇಕು ಎಂಬುವುದು ನನ್ನ ಕನಸಾಗಿದೆ ಎಂದಿದ್ದರು.

1946ರಲ್ಲೇ ಭಾರತ ಸರ್ಕಾರ ನಡೆಸಿದ್ದ ಆರೋಗ್ಯ ಸಮೀಕ್ಷೆಯಲ್ಲೂ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ನಿರ್ಮಿಸಬೇಕೆಂಬ ಶಿಫಾರಸ್ಸು ಬಂದಿತ್ತು. ಈ ಯೋಜನೆ ಜಾರಿಗೊಳಿಸುವ ಎಲ್ಲರಿಗೂ ಇತ್ತಾದರೂ ಇದಕ್ಕಾಗಿ ಹಣ ಹೊಂದಿಸುವುದೇ ಬಹುದೊಡ್ಡ ಸವಾಲಾಗಿತ್ತು. ಈ ಹಣ ಹೊಂದಿಸಲು ರಾಜಕುಮಾರಿ ಅಮೃತ್‌ ಕೌರ್‌ಗೆ ಹತ್ತು ವರ್ಷಗಳು ತಗುಲಿದವು. ಈ ಪರಿಶ್ರಮದ ಫಲ ಎಂಬಂತೆ ಭಾರತದ ನಂಬರ್ ವನ್ ವೈದ್ಯಕೀಯ ಸಂಸ್ಥೆ ಹಾಗೂ ಆಸ್ಪತ್ರೆಗೆ ಶಿಲಾನ್ಯಾಸ ಮಾಡಲಾಯ್ತು.

ಅಂದು ಕೌರ್‌ರವರು ಮಾಡಿದ್ದ ಆ ಭಾಷಣದಿಂದ ಈ ವೈದ್ಯಕೀಯ ಸಂಸ್ಥೆ ಹೇಗಿರಬೇಕೆಂಬ ಕುರಿತಾಗಿ ಸಂಸತ್ತಿನಲ್ಲಿ ಚರ್ಚೆ ಹುಟ್ಟು ಹಾಕಿತು. ಹೀಗಿದ್ದರೂ ಈ ಮಸೂದೆ ಅತ್ಯಂತ ವೇಗವಾಗಿ ಮುಂದೆ ಸಾಗಿತು ಹಾಗೂ ಎರಡೂ ಸದನಗಳಲ್ಲಿ ಅಂಗೀಕಾರ ಪಡೆಯಿತು,.

ಹೀಗೆ  ಏಮ್ಸ್, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(AIIMS) ಜನ್ಮ ಪಡೆಯಿತು. ಇನ್ನು ಈ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಾಗ ಮಾತನಾಡಿದ್ದ ಕೌರ್ 'ನಾನು ಇದು ಅತ್ಯಂತ ಅದ್ಭುತವಾಗಿರಬೇಕೆಂಬುವುದು ನನ್ನಾಸೆ. ಇದು ನಮ್ಮ ದೇಶ ಎಮ್ಮೆ ಪಡುವಂತಿರಬೇಕು' ಎಂದಿದ್ದರು.

ಕಳೆದ ಕೆಲ ತಿಂಗಳಲ್ಲಿ ಇಡೀ ವಿಶ್ವವನ್ನು ಕಾಡಿದ ಮಹಾಮಾರಿ ಭಾರತವನ್ನೂ ಕಾಡಿದ್ದು, ಹೀಗಿರುವಾಗ ಈ ಸಮರದಲ್ಲಿ ದೇಶದ ಅತ್ಯುನ್ನತ ವೈದ್ಯಕೀಯ ಸಂಸ್ಥೆ ಏಮ್ಸ್‌ ಅನೇಕ ಬಾರಿ ಚರ್ಚೆ ಹುಟ್ಟು ಹಾಕಿದೆ.

ಇನ್ನು ಈ ವೈದ್ಯಕೀಯ ಸಂಸ್ಥೆ ಹೆಸರು ಬಂದಾಗೆಲ್ಲಾ ದೇಶದ ಮೊದಲ ಪ್ರಧಾನ ಮಂತ್ರಿಯಾಗಿದ್ದ ಜವಾಹರಲಾಲ್ ನೆಹರೂ ಕಾಲದಲ್ಲಿ ನಿರ್ಮಾಣವಾಗಿದ್ದೆಂಬ ಮಾತುಗಳು ಬರುತ್ತವೆ. ಈ ಸಂಸ್ಥೆ ನೆಹರೂ ಕಾಲದಲ್ಲಿ ನಿರ್ಮಾಣವಾದರೂ ಇದರ ಹಿಂದಿನ ನಿಜವಾದ ಪರಿಶ್ರಮ ಹಾಗೂ ಶ್ರೇಯಸ್ಸು ಸಲ್ಲಬೇಕಾದದ್ದು ರಾಜಕುಮಾರಿ ಅಮೃತ್‌ ಕೌರ್‌ಗೆ.

ಕಪುರ್ತಲ ರಾಜ್ಯದ ರಾಜಕಮಾರಿ ಹಾಗೂ ಆಕ್ಸ್‌ಫರ್ಡ್‌ನ ವಿದ್ಯಾರ್ಥಿನಿಯಾಗಿದ್ದ ಅಮೃತ್ ಕೌರ್ ಮಹಾತ್ಮ ಗಾಂಧೀಜಿಯ ಅಪ್ಪಟ ಅನುಯಾಯಿ ಹಾಗೂ ಸಾಂವಿಧಾನಿಕ ಸಭೆಯ ಪ್ರಮುಖ ಸದಸ್ಯೆ. ಇಷ್ಟಟೇ ಅಲ್ಲದೇ ಅವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ.

ಅಮೃತ್‌ ಕೌರ್‌ ಕುಟುಂಬ ಸದಸ್ಯರು ಅವರೊಬ್ಬ ಸರಳ ಬದುಕು ಸಾಗಿಸುತ್ತಿದ್ದ ಆದರೆ ಉನ್ನತ ಯೋಚನೆಗಳಿದ್ದ ವ್ಯಕ್ತಿ ಎಂದು ನೆನಪಿಸಿಕೊಂಡಿದ್ದಾರೆ.

ಇನ್ನು ದೇಶದ ಇತಿಹಾಸ ಬ್ರಿಟಿಷರನ್ನು ಓಡಿಸಲು ಅವರಲ್ಲಿದ್ದ ಆ ಹಠ, ಅವರ ಸ್ತ್ರೀಸಮಾನತಾವಾದಿ ಚಿಂತನೆ ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ನೆನಪಿಸುತ್ತದೆ.

ಇನ್ನು ಕಪುರ್ತಲಾ ರಾಜವಂಶದ ರಾಜಕುಮಾರಿಯಾಗಿದ್ದ ಕೌರ್‌ ಇತಿಹಾಸವೂ ಬಹಳ ರೋಚಕವಾದದ್ದು. ಅವರ ತಂದೆ ರಾಜಾ ಸರ್ ಹರ್ನಮ್ ಸಿಂಗ್, ಬಂಗಾಲಿ ಮಿಷನರಿಯಾಗಿದ್ದ ಗೋಲಕ್‌ನಾಥ್ ಚಟರ್ಜಿಯನ್ನು ಜಲಂಧರ್‌ನಲ್ಲಿ ಭೇಟಿಯಾದ ಬಳಿಕ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್‌ ಆಗಿ ಮತಾಂತರಗೊಳ್ಳುತ್ತಾರೆ. ಬಳಿಕ ಅವರ ಮಗಳನ್ನೇ ಮದುವೆಯಾಗುವ ಸಿಂಗ್‌ ದಂಪತಿಗೆ ಹತ್ತು ಮಕ್ಕಳಾಗುತ್ತಾರೆ. ಇವರಲ್ಲಿ ಎಲ್ಲರಿಗಿಂತ ಕಿರಿಯಳಾಗಿದ್ದ ಅಮೃತ್ ಕೌರ್ 1889 ಫೆಬ್ರವರಿ 2 ರಂದು ಜನಿಸಿದ್ದರು.

Amrit Kaur

Amrit Kaur

ಹೀಗಾಗಿ ಕೌರ್ ಓರ್ವ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಆಗಿ ಬೆಳೆದರು. ಆರಂಭದ ಶಿಕ್ಷಣವನ್ನು ಭಾರತದಲ್ಲಿ ಪೂರೈಸಿದ ಕೌರ್ ಮುಂದಿನ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ತೆರಳುತ್ತಾರೆ.

ಇನ್ನು ಕೌರ್ ಓರ್ವ ಕ್ರಿಶ್ಚಿಯನ್ ಆಗಿದ್ದರೂ ಅವರು ಮಿಷನರಿ ಚಟುವಟಿಕೆಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದರು ಎಂಬುವುದು ಕೌರ್‌ರವರ ಮರಿ ಮೊಮ್ಮಗ ಸಿದ್ಧಾಂತ್ ದಾಸ್ ಮಾತಾಗಿದೆ. ಓರ್ವ ಅಪ್ಪಟ ರಾಷ್ಟ್ರಭಕ್ತೆಯಾಗಿದ್ದ ಕೌರ್‌ರವರು ಮಿಷನರಿಗಳು ಭಾರತೀಯರನ್ನು ಅವರ ಸಂಸ್ಕೃತಿಯಿಂದ ದೂರ ಮಾಡುತ್ತಾರೆಂಬ ಕಾರಣಕ್ಕೆ ವಿರೋಧಿಸುತ್ತಿದ್ದರು ಎಂದೂ ಅವರು ಹೇಳಿದ್ದಾರೆ.

ಇನ್ನು ಇಂಗ್ಲೆಂಡ್‌ನಿಂದ ಮರಳಿದ ಬೆನ್ನಲ್ಲೇ ರಾಷ್ಟ್ರೀಯತೆ ಕಡೆ ಆಕರ್ಷಿತರಾಗುವ ಕೌರ್ ಈ ಕುರಿತು ಗೋಪಾಲ ಕೃಷ್ಣ ಗೋಖಲೆ ಹಾಗೂ ಮಹಾತ್ಮ ಗಾಮಧಿಯವರೊಡನೆ ಚರ್ಚೆ ನಡೆಸುತ್ತಾರೆ. ಹೀಗಿರುವಾಗ ಮಹಾತ್ಮ ಗಾಂಧಿಯ ಚಿಂತನೆಗಳಿಂದ ಅವರು ಪ್ರಭಾವಿತರಾಗುತ್ತಾರೆ. ಇವರಿಬ್ಬರ ನಡುವೆ ಉತ್ತಮ ಗೆಳೆತನ ನಿರ್ಮಾಣವಾಗುತ್ತದೆ.

ಮಹಿಳಾವಾದ ಹಾಗೂ ತಮ್ಮ ಅಹಿಂಸಾ ಚಳುವಳಿಯಲ್ಲಿ ಮಹಿಳೆಯರೂ ಭಾಗವಹಿಸಬೇಕೆಂಬ ಮಹಾತ್ಮ ಗಾಂಧೀಜಿಯ ಚಿಂತನೆ ನನ್ನನ್ನು ಬಹಳಷ್ಟು ಆಕರ್ಷಿಸಿತು. ಮಹಿಳೆಯರು ಏನಿದ್ದರೂ ಮಕ್ಕಳನ್ನು ಹಡೆಯಲು ಹಾಗೂ ತಮ್ಮ ಮನೆಯವರ ಸೇವೆ ಮಾಡಲು ಎಂಬ ಚಿಂತನೆಯುಳ್ಳ ದೇಶದಲ್ಲಿ ಇಂತಹ ಅಪೂರ್ವ ಯೋಚನೆ ನನಗೆ ಬಹಳ ಹಿಡಿಸಿತು ಎಂದು ಕೌರ್ ತಮ್ಮ ಕೃತಿಯಲ್ಲಿ ಬರೆದಿದ್ದಾರೆ.

loader