ಮೋದಿಯದ್ದು ಬ್ರಿಟೀಷ್ ಆಳ್ವಿಕೆ, ರೈತ ಪ್ರತಿಭಟನೆ ಚಂಪಾರನ್ ಸತ್ಯಾಗ್ರಹ ಎಂದ ರಾಹುಲ್ ಗಾಂಧಿ!
First Published Jan 3, 2021, 3:39 PM IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈತ ಪ್ರತಿಭಟನೆಯನ್ನು ನಿರ್ಲಕ್ಷ್ಯಿಸಿರುವ ಮೋದಿ ಸರ್ಕಾರ ಅವರ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಇನ್ನು ರೈತರ ಪ್ರತಿಭಟನೆಯನ್ನು ಬ್ರಿಟೀಷರ ಆಳ್ವಿಕೆಯಲ್ಲಿ ನಡೆದ ಚಂಪಾರನ್ ಸತ್ಯಾಗ್ರಹಕ್ಕೆ ಹೋಲಿಸಿದ್ದರೆ, ಮೋದಿಯನ್ನು ಬ್ರಿಟೀಷ್ ಕಂಪನಿಗೆ ಹೋಲಿಸಿದ್ದಾರೆ. ರಾಹುಲ್ ಹೇಳಿದ ಚಂಪಾರನ್ ಸತ್ಯಾಗ್ರಹವೇನು? ಈ ಕುರಿತ ಮಾಹಿತಿ ಇಲ್ಲಿದೆ.

ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ರೈತ ಸತ್ಯಾಗ್ರಹಿಯಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಬ್ರಿಟಿಷರ ವಿರುದ್ದ ಮಹತ್ಮಾ ಗಾಂಧಿ ನೇತೃತ್ವದಲ್ಲಿ ನಡೆದ ಚಂಪಾರನ್ ಸತ್ಯಾಗ್ರಹಕ್ಕೆ ರೈತ ಪ್ರತಿಭಟನೆಯನ್ನು ಹೋಲಿಸಿದ ರಾಹುಲ್ ಗಾಂಧಿ, ಮೋದಿ ಬ್ರಿಟೀಷ್ ಕಂಪನಿ ಎಂದು ಟೀಕಿಸಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?