MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ದೇವಭೂಮಿಯ ಆದಿ ಕೈಲಾಸ, ಪಾರ್ವತಿ ಕುಂಡದಲ್ಲಿ ಪ್ರಧಾನಿ ಮೋದಿ ಪೂಜೆ!

ದೇವಭೂಮಿಯ ಆದಿ ಕೈಲಾಸ, ಪಾರ್ವತಿ ಕುಂಡದಲ್ಲಿ ಪ್ರಧಾನಿ ಮೋದಿ ಪೂಜೆ!

ಕೈಲಾಸ ಪರ್ವತಕ್ಕೆ ಎದುರಾಗಿ ಕುಳಿತು ಪ್ರಧಾನಿ ಮೋದಿ ಧ್ಯಾನ ಮಾಡುತ್ತಿರುವ ಚಿತ್ರಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಉತ್ತರಾಖಂಡ ಪ್ರವಾಸದಲ್ಲಿರುವ ಮೋದಿ, ಆದಿ ಕೈಲಾಸ, ಪಾರ್ವತಿ ಕುಂಡ ಹಾಗೂ ಅಲ್ಮೋರಾದ ಜಗೇಶ್ವರ ಧಾಮಕ್ಕೆ ಭೇಟಿ ನೀಡಿದರು.

2 Min read
Santosh Naik
Published : Oct 12 2023, 03:05 PM IST
Share this Photo Gallery
  • FB
  • TW
  • Linkdin
  • Whatsapp
112

ಪ್ರಧಾನಿ ನರೇಂದ್ರ ಮೋದಿ ಬುಧವಾರ ದೇವಭೂಮಿ ಉತ್ತರಾಖಂಡಕ್ಕೆ ಭೇಟಿ ನೀಡಿದರು. ಈ ವೇಳೆ ಅವರಿಗೆ ವೃದ್ಧಮಹಿಳೆಯೊಬ್ಬರು ತಮ್ಮ ಆಶೀರ್ವಾದ ನೀಡಿದರು.

212

ಉತ್ತಾರಖಂಡಕ್ಕೆ ಆಗಮಿಸಿದ ಬಳಿಕ ನೆರೆದಿದ್ದ ಸ್ಥಳೀಯರ ಕುಶಲೋಪಚರಿ ವಿಚಾರಿಸಿದ ಪ್ರಧಾನಿ ಮೋದಿ, ಪುಟ್ಟ ಮಗುವಿನೊಂದಿಗೆ ಆತ್ಮೀಯವಾಗಿ ಮಾತನಾಡಿದರು.

312

ಇದೇ ವೇಳೆ ಉತ್ತಾರಖಂಡದ ಸಾಂಪ್ರದಾಯಿಕ ಶಾಲುಗಳು ಹಾಗೂ ವಸ್ತಗಳ ಮಳಿಗೆಯಲ್ಲಿ ಪ್ರಧಾನಿ ಮೋದಿ ಕೆಲ ಸಮಯ ಕಳೆದರು. ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗಾಗಿ ಪ್ರಧಾನಿ ಮೋದಿ ಉತ್ತರಾಖಂಡಕ್ಕೆ ತೆರಳಿದ್ದರು.

412

ಉತ್ತರಾಖಂಡದ ಪಿಥೋರ್‌ಗಢದಲ್ಲಿ ದೇವಸ್ಥಾನಗಳ ಭೇಟಿಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಐಟಿಬಿಪಿ ಸೈನಿಕರ ಜೊತೆ ಮಾತುಕತೆ ನಡೆಸಿದರು.

512

ಅದಾದ ಬಳಿಕ ಆದಿ ಕೈಲಾಸ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರು. ಕೆಲ ಹೊತ್ತು ಅಲ್ಲಿನ ಪರಿಸರದಲ್ಲಿ ಮೋದಿ ತಿರುಗಾಟ ನಡೆಸಿದರು. ಈ ವೇಳೆ ಮೋದಿ ಧರಿಸಿದ್ದ ಬಟ್ಟೆ ಗಮನಸೆಳೆದಿದೆ.

612

ಪ್ರಧಾನಿ ನರೇಂದ್ರ ಮೋದಿ ಪಾರ್ವತಿ ಕುಂಡದಲ್ಲಿ ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸಿದರು. ಪವಿತ್ರ ಆದಿ-ಕೈಲಾಸದಿಂದ ಆಶೀರ್ವಾದ ಪಡೆದುಕೊಂಡರು.

712

ಆದಿ ಕೈಲಾಸ ಆಧ್ಯಾತ್ಮಿಕ ಮಹತ್ವ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.'ನಮ್ಮ ಸರ್ಕಾರವು ದೇವಭೂಮಿ ಉತ್ತರಾಖಂಡದ ಜನರ ಕಲ್ಯಾಣ ಮತ್ತು ರಾಜ್ಯದ ತ್ವರಿತ ಅಭಿವೃದ್ಧಿಗೆ ಬದ್ಧವಾಗಿದೆ. ಇದಕ್ಕೆ ಮತ್ತಷ್ಟು ವೇಗ ನೀಡಲು ಪಿಥೋರಗಢದಲ್ಲಿ ಹಲವು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುತ್ತೇನೆ' ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದರು.

812

ಇಲ್ಲಿನ ಗುಂಜಿ ಗ್ರಾಮದಲ್ಲಿ ಜನರೊಂದಿಗೆ ಸಂವಾದ ನಡೆಸಲಿದ್ದೇನೆ. ಈ ಪ್ರವಾಸದ ಸಮಯದಲ್ಲಿ, ಪಾರ್ವತಿ ಕುಂಡ್ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯ ಜಾಗೇಶ್ವರ ಧಾಮದಲ್ಲಿ ದರ್ಶನ ಮತ್ತು ಪೂಜೆಗಾಗಿ ಕಾತುರದಿಂದ ಕಾಯುತ್ತಿದ್ದೇನೆ ಎಂದು ಮೋದಿ ಬರೆದುಕೊಂಡಿದ್ದರು.

912

ಪ್ರಧಾನಿ ಮೋದಿ ಅವರು ಸುಮಾರು ಉತ್ತರಾಖಂಡದಲ್ಲಿ ₹ 4200 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನೆರವೇರಿಸಿದರು.

1012

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY) ಅಡಿಯಲ್ಲಿ 76 ಗ್ರಾಮೀಣ ರಸ್ತೆಗಳು ಮತ್ತು 25 ಸೇತುವೆಗಳು ಈ ವೇಳೆ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಒಂಬತ್ತು ಜಿಲ್ಲೆಗಳಲ್ಲಿ ಬ್ಲಾಕ್ ಡೆವಲಪ್‌ಮೆಂಟ್ ಆಫೀಸ್‌ಗಳಿಗೆ (ಬಿಡಿಒ) 15 ಹೊಸ ಕಟ್ಟಡಗಳನ್ನು ಸರ್ಕಾರ ಅನಾವರಣಗೊಳಿಸಲಿದ್ದು, ಆಡಳಿತಾತ್ಮಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.

1112

ಸುಮಾರು 6200 ಅಡಿ ಎತ್ತರದಲ್ಲಿರುವ ಮತ್ತು ಕಲ್ಲಿನ ದೇವಾಲಯಗಳಿಗೆ ಹೆಸರುವಾಸಿಯಾಗಿರುವ ಅಲ್ಮೋರಾ ಜಿಲ್ಲೆಯ ಜಾಗೇಶ್ವರ ಧಾಮಕ್ಕೆ ಪ್ರಧಾನಿ ಮೋದಿ ಮಧ್ಯಾಹ್ನದ ವೇಳೆಗೆ ಆಗಮಿಸಿದರು.

1212

ಜಗೇಶ್ವರ ಧಾಮಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಶಿವಲಿಂಗಕ್ಕೆ ವಿಶೇಷವಾದ ಪೂಜೆ ಸಲ್ಲಿಸಿದ್ದರು. ಅವರಿಗೆ ಅರ್ಚಕರು ಹಣೆಗೆ ಗಂಧವನ್ನು ಹಚ್ಚಿ ಸ್ವಾಗತಿಸಿದರು.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ನರೇಂದ್ರ ಮೋದಿ
ಉತ್ತರಾಖಂಡ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved