Photos: ಗರ್ಭಗುಡಿಯಲ್ಲಿ ನಿಂತು ರಾಮಲಲ್ಲಾನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು!
ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಆಹ್ವಾನ ನೀಡಿರಲಿಲ್ಲ ಎನ್ನುವ ರಾಹುಲ್ ಗಾಂಧಿ ಅವರ ಸುಳ್ಳು ಆರೋಪದ ನಡುವೆ, ಬುಧವಾರ ದ್ರೌಪದಿ ಮುರ್ಮು ಗರ್ಭಗುಡಿಯಲ್ಲಿ ನಿಂತು ರಾಮಲ್ಲಾನ ದರ್ಶನ ಪಡೆದಿದ್ದಾರೆ.
ಜನವರಿಯಲ್ಲಿ ನಡೆದ ಅಯೋಧ್ಯೆಯ ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಆಹ್ವಾನ ನೀಡಲಾಗಿರಲಿಲ್ಲ ಎನ್ನುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಳ್ಳು ಆರೋಪದ ಮಧ್ಯೆ ದ್ರೌಪದಿ ಮುರ್ಮು ಬುಧವಾರ ಗರ್ಭಗುಡಿಯಲ್ಲಿ ನಿಂತು ಶ್ರೀರಾಮಚಂದ್ರನ ದರ್ಶನ ಪಡೆದುಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಚಂದ್ರನ ದರ್ಶನ ಪಡೆಯುವ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಹನುಮಾನನಿಗೆ ವಿಶೇಷ ಪೂಜೆಯನ್ನೂ ಅವರು ಸಲ್ಲಿಸಿದರು. ಆ ಬಳಿಕ ದೇವಸ್ಥಾನದ ಪ್ರದಕ್ಷಿಣೆ ಹಾಕುವ ಮೂಲಕ ದರ್ಶನ ಪಡೆದುಕೊಂಡರು.
ಬುಧವಾರ ಅಯೋಧ್ಯೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ಸ್ವಾಗತಿಸಿದರು.
ಹನುಮಾನ್ ಗರ್ಹಿಯಲ್ಲಿ ಪೂಜೆ ನಡೆಸಿದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಯೋಧ್ಯೆಯ ಪ್ರಸಿದಧ ಸರಯೂ ಘಾಟ್‌ಗೆ ಆಗಮಿಸಿದರು.
ಸರಯೂ ಘಾಟ್‌ನಲ್ಲಿ ವಿಶೇಷ ಪೂಜೆಯೊಂದಿಗೆ ಗಂಗಾ ಆರತಿ ಕಾರ್ಯಕ್ರಮದಲ್ಲೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗಿಯಾಗಿದ್ದರು.
ಸರಯೂ ಘಾಟ್‌ನಲ್ಲಿ ಪೂಜೆ ಮಾಡಿದಲ್ಲದೆ, ಗಂಗಾ ಆರತಿ ಕಾರ್ಯಕ್ರಮದ ಚಿತ್ರಗಳನ್ನು ಸ್ವತಃ ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಎಕ್ಸ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದರು.
ನಂತರ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದ ಅವರು ಗರ್ಭಗುಡಿಯ ಆವರಣದಲ್ಲಿ ನಿಂತು ಪ್ರಭು ಶ್ರೀರಾಮನಿಗೆ ಪೂಜೆ ಮಾಡಿದರು.
ಆ ಬಳಿಕ ತಾವೇ ರಾಮಲಲ್ಲಾನ ಮೂರ್ತಿಗೆ ಆರತಿಯನ್ನು ಬೆಳಗಿದರು. ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಶ್ರೀರಾಮನ ಆರಾಧನೆ ಮಾಡಿದರು.