ನೇತಾಜಿ ಜಯಂತಿ; ಹರಿಪುರಕ್ಕೂ ಸುಭಾಷ್ ಚಂದ್ರಬೋಸ್‌ಗಿರುವ ನಂಟಿನ ಕತೆ ಹೇಳಿದ ಮೋದಿ!
ಸ್ವಾತಂತ್ರ್ಯ ವೀರ ನೇತಾಜಿ ಸುಭಾಷ್ ಚಂದ್ರಬೋಸ್ ಜನ್ಮ ದಿನಾಚರಣೆಯನ್ನು ಭಾರತದಲ್ಲಿ ಪರಾಕ್ರಮ ದಿವಸ್ ಎಂದು ಆಚರಿಸಲಾಗುತ್ತಿದೆ. ನಾಳೆ(ಜ.23) ದೇಶದೆಲ್ಲೆಡೆ ನೇತಾಜಿ ಜಯಂತಿ ಆಚರಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಹರಿಪುರದಲ್ಲಿ ವಿಶೇಷ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹರಿಪುರಕ್ಕೆ ನೇತಾಜಿಗೂ ಇರುವ ಸಂಬಂಧದ ಕುರಿತು ಮೋದಿ ಹಲವು ಮಾಹಿತಿ ಹಂಚಿಕೊಂಡಿದ್ದಾರೆ.
ಜನವರಿ 23 ಭಾರತದ ಸ್ವಾತಂತ್ರತ್ಯ ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ. 125ನೇ ಜನ್ಮದಿನಾಚರಣೆ ಪ್ರಯುಕ್ತ ದೇಶದೆಲ್ಲೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಗುಜರಾತ್‌ನ ಹರಿಪುರದಲ್ಲಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಮೋದಿ ಸಂತಸ ಹಂಚಿಕೊಂಡಿದ್ದಾರೆ.
ಹರಿಪುರಕ್ಕೂ ನೇತಾಜಿಗೂ ಇರುವ ಸಂಬಂಧ ಕುರಿತು ಮೋದಿ ಕೆಲ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 1938ರಲ್ಲಿ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ನೇತಾಜಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.
ನೇತಾಜಿ ಸುಭಾಷ್ ಚಂದ್ರಬೋಸ್ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಗೌರವಿಸಲು ಹರಿಪುರದಲ್ಲಿನ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನೇತಾಜಿ ಕಾರ್ಯಕ್ರಮ ಪ್ರಯುಕ್ತ ಹರಿಪುರಕ್ಕೆ ಭೇಟಿ ನೀಡಲಿರುವ ಮೋದಿ 2009ರ ಭೇಟಿಯನ್ನು ನೆನೆಪಿಸಿದ್ದಾರೆ. ಅಂದು ಮೋದಿ ಹರಿಪುರದಲ್ಲಿ ಇ ಗ್ರಾಮ್ ವಿಶ್ವಗ್ರಾಮ್ ಯೋಜನೆ ಉದ್ಘಾಟಿಸಿದ್ದರು.
1938ರಲ್ಲಿ ಕಾಂಗ್ರೆಸ್ ಅಧ್ಯಕ್ಷಗಾದಿಗೆ ಏರಿದ ನೇತಾಜಿಯನ್ನು ಇದೇ ಹರಿಪುರದಲ್ಲಿ ಮೆರಣಿಗೆ ಮಾಡಲಾಗಿತ್ತು. 2009ರಲ್ಲಿ ಮೋದಿ ಭೇಟಿ ವೇಳೆ ಇಲ್ಲಿನ ಗ್ರಾಮಸ್ಥರು ಮೋದಿಯನ್ನು 51 ಎತ್ತಿನ ಗಾಡಿ ಮೂಲಕ ಮೆರವಣಿಗೆ ಮಾಡಲಾಗಿತ್ತು.
ಈ ಕಾರ್ಯಕ್ರಮಕ್ಕೂ ಮೊದಲು ಮೋದಿ ಹರಿಪುರದಲ್ಲಿ ನೇತಾಜಿ ತಂಗಿದ್ದ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಕುರಿತು ಮೋದಿ ಟ್ವೀಟ್ ಮೂಲಕ ತಮ್ಮ ಹಳೆ ನೆನಪುಗಳನ್ನು ಬಿಚ್ಚಟ್ಟಿದ್ದಾರೆ.
ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಆಲೋಚನೆ , ಆದರ್ಶಗಳು ನಮಗೆ ದಾರಿದೀಪವಾಗಿದೆ. ನೇತಾಜಿ ಆದರ್ಶಗಳು ನವ ಭಾರತವನ್ನು ನಿರ್ಮಿಸಲು ನಮಗೆ ಪ್ರೇರಣೆಯಾಗಲಿ ಎಂದು ಮೋದಿ ಹೇಳಿದ್ದಾರೆ.