- Home
- News
- India News
- PM Modi Isro Visit: 'ಶಭಾಶ್...' ಇಸ್ರೋ ಅಧ್ಯಕ್ಷರನ್ನು ಕಂಡೊಡನೆ ಬೆನ್ನುತಟ್ಟಿ ಖುಷಿಪಟ್ಟ ಮೋದಿ!
PM Modi Isro Visit: 'ಶಭಾಶ್...' ಇಸ್ರೋ ಅಧ್ಯಕ್ಷರನ್ನು ಕಂಡೊಡನೆ ಬೆನ್ನುತಟ್ಟಿ ಖುಷಿಪಟ್ಟ ಮೋದಿ!
ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಇಸ್ರೋವಿಜ್ಞಾನಿಗಳನ್ನು ಭೇಟಿಯಾಗಲು ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದರು. ಅದರಂತೆ ಪುಟ್ಟ ರೋಡ್ ಶೋ ಬಳಿಕ ಇಸ್ರೋ ಕಚೇರಿಗೆ ಆಗಮಿಸಿದ ಮೋದಿ ಸಂಭ್ರಮದ ಬುಗ್ಗೆಯಾಗಿ ಕಾಣಸಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಸ್ರೋದ ಪ್ರಧಾನ ಕಚೇರಿಗೆ ಆಗಮಿಸಿ ಚಂದ್ರಯಾನ-3 ಯಶಸ್ವಿಗೆ ಕೆಲಸ ಮಾಡಿದ ವಿಜ್ಞಾನಿಗಳೊಂದಿಗೆ ಮಾತನಾಡಿದರು. ಇಸ್ರೋ ಕೇಂದ್ರಕ್ಕೆ ಬಂದವರೆ, ಅಧ್ಯಕ್ಷ ಸೋಮನಾಥ್ ಅವರ ಬೆನ್ನುತಟ್ಟಿ ಸಂಭ್ರಮಿಸಿದರು,
ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೂಗುಚ್ಛ ನೀಡಿ ಸ್ವಾಗತ ಮಾಡಿದರು. ಈ ವೇಳೆ ಇತರ ವಿಜ್ಞಾನಿಗಳು ಜೊತೆಗಿದ್ದರು.
ಆ ಬಳಿಕ ಚಂದ್ರಯಾನ-3 ಯೋಜನೆಯಲ್ಲಿ ಕೆಲಸ ಮಾಡಿದ ವಿಜ್ಞಾನಿಗಳ ಜೊತೆ ಇಸ್ರೋ ಆವರಣದಲ್ಲಿರುವ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್ ಅಂದರೆ ಮಾಕ್ಸ್ ಎದುರು ಫೋಟೋಗೆ ಪೋಸ್ ನೀಡಿದರು.
ಆ ಬಳಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಚಂದ್ರಯಾನ-3 ಪ್ರಾಜೆಕ್ಟ್‌ನ ಬಗ್ಗೆ ಪ್ರಾತ್ಯಕ್ಷಿಕೆಯ ವಿವರಣೆ ನೀಡಿದರು,
ಚಂದ್ರಯಾನ-3 ಮಿಷನ್ ಸಾಧಿಸಿದ ವಿವಿಧ ಮಜಲುಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಪಡೆದರು. ಇಸ್ರೋ ಆವರಣದಲ್ಲಿ ಚಂದ್ರಯಾನದ-3 ವಿಕ್ರಮ್ ಲ್ಯಾಂಡರ್‌ಗಳ ಮಾದರಿ ಇಡಲಾಗಿತ್ತು.
ವಿಕ್ರಮ್ ಲ್ಯಾಂಡರ್‌ನಲ್ಲಿರುವ ಸೋಲಾರ್ ಪ್ಯಾನೆಲ್‌ಗಳು ಅದು ಕಾರ್ಯನಿರ್ವಹಿಸುವ ರೀತಿಯ ಬಗ್ಗೆ ವಿಜ್ಞಾನಿಗಳು ಪ್ರಧಾನಿಗೆ ಮಾಹಿತಿ ನೀಡಿದರು
ರೋವರ್‌ಗಳು ವಿಕ್ರಮ್ ಲ್ಯಾಂಡರ್‌ನಿಂದ ಹೊರಬರುವುದು ಹೇಗೆ, ಅದರ ಕಾರ್ಯವೇನು ಎನ್ನುವ ಮಾಹಿತಿಯನ್ನು ಇಸ್ರೋ ಅಧ್ಯಕ್ಷರು ಹಂಚಿಕೊಂಡರು
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡ್ ಆದ ಸ್ಥಳವನ್ನು ಶಿವಶಕ್ತಿ ಸ್ಥಳ ಎಂದು ನಾಮಕರಣ ಮಾಡಿದರು.
ಅದರೊಂದಿಗೆ ಚಂದ್ರಯಾನ-2ನಲ್ಲಿ ವಿಕ್ರಮ್ ಲ್ಯಾಂಡರ್ ಬಿದ್ದು, ಇಂಪ್ಯಾಕ್ಟ್ ಆದ ಸ್ಥಳವನ್ನು ತಿರಂಗಾ ಪಾಯಿಂಟ್ ಎಂದು ಮೋದಿ ಹೆಸರಿಟ್ಟಿದ್ದಾರೆ.
ಚಂದ್ರಯಾನ-3 ಯಶಸ್ಸು ಕಂಡ ದಿನವನ್ನು ಇನ್ನು ಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ದೇಶದಲ್ಲಿ ಆಚರಣೆ ಮಾಡಲಾಗುತ್ತದೆ ಎಂದಿದ್ದಾರೆ.
ಇಸ್ರೋ ಮಾಕ್ಸ್ ಕಚೇರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಜ್ಞಾನಿಗಳು ಚಪ್ಪಾಳೆ ತಟ್ಟಿ ಸ್ವಾಗತ ನೀಡಿದರು. ಈ ವೇಳೆ ಸ್ವತಃ ಮೋದಿ ಕೂಡ ಅವರಿಗೆ ಚಪ್ಪಾಳೆ ತಟ್ಟಿದರು.
ಭಾಷಣದ ವೇಳೆ ಬಹಳ ಭಾವುಕರಾಗಿದ್ದ ಮೋದಿ, ಉಕ್ಕುತ್ತಿದ್ದ ಭಾವನೆಯನ್ನು ಹಿಡಿದುಕೊಂಡು ವಿಜ್ಞಾನಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ಆಡಿದರು.
ಚಂದ್ರಯಾನ--3 ಪ್ರಾಜೆಕ್ಟ್ ಡೆರೆಕ್ಟರ್ ಆಗಿರುವ ತಮಿಳುನಾಡು ಮೂಲದ ಪಿ.ವೀರಮುತ್ತುವೇಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ-3 ಮಾದರಿಯನ್ನು ನೀಡಿ ಗೌರವಿಸಿದರು.
ಇದೇ ವೇಳೆ ಪ್ರಧಾನಿ ಮೋದಿ ಅವರಿಗೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಬಳಿಕ ಕಳಿಸಿದ ಮೊದಲ ಫೋಟೋವನ್ನು ಉಡುಗೊರೆಯಾಗಿ ನೀಡಿದರು.