PM Modi Traditional Attire ಪಂಚೆ, ಶರ್ಟ್ ಧರಿಸಿ ಕೇರಳಕ್ಕೆ ಆಗಮಿಸಿದ ಪ್ರಧಾನಿ ಮೋದಿ ವಸ್ತ್ರಕ್ಕೆ ಮಾರು ಹೋದ ಜನ!
ಪ್ರಧಾನಿ ಮೋದಿ ಭಾರತದ ಯಾವುದೇ ಮೂಲೆಗೆ ತೆರಳಿದರೂ ಅಲ್ಲಿಯ ಸಂಪ್ರದಾಯ, ಆಚಾರ ವಿಚಾರ, ಭಾಷೆಗಳಿಗೆ ಒತ್ತು ನೀಡುತ್ತಾರೆ. ಈ ಮೂಲಕ ಸ್ಥಳೀಯ ಜನರು ತಮ್ಮ ತಮ್ಮ ಪರಂಪರೆಯನ್ನು ಹೆಮ್ಮೆಯಿಂದ ಕಾಣುವಂತೆ, ಆಚರಿಸುವಂತೆ ಮಾಡಿದ್ದಾರೆ. ಇದೀಗ ಕೇರಳಕ್ಕೆ ಆಗಮಿಸಿದ ಮೋದಿ ತಮ್ಮ ವಿಶೇಷ ವಸ್ತ್ರದಿಂದ ಗಮನಸೆಳೆದಿದ್ದಾರೆ.
ಭಾರತೀಯ ಸಂಸ್ಕೃತಿಯನ್ನು ವಿಶ್ವದ ಮುಂದೆ ಹೆಮ್ಮೆಯಿಂದ ಪ್ರಚುರ ಪಡಿಸಿ ಜನಪ್ರಿಯತೆಯನ್ನು ಹೆಚ್ಚಿಸಿರುವ ನಾಯಕ ಅಂದರೆ ಅದು ಪ್ರಧಾನಿ ನರೇಂದ್ರ ಮೋದಿ. ದೇಶದ ಯಾವುದೇ ಸ್ಥಳಕ್ಕೆ ತೆರಳಿದರೆ ಅಲ್ಲಿನ ವಸ್ತ್ರ, ಅಲ್ಲಿನ ಆಹಾರ, ಭಾಷೆ, ಪರಂಪರೆ, ಸಂಸ್ಕೃತಿಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಇದೀಗ ದಕ್ಷಿಣ ಪ್ರವಾಸದಲ್ಲಿರುವ ಮೋದಿ ಕೇರಳದ ಕೊಚ್ಚಿಗೆ ಬಿಳಿ ಪಂಚೆ, ಶರ್ಟ್ ಹಾಗೂ ಶಲ್ಯ ಹಾಕಿ ಆಗಮಿಸಿದರು.
ಮೋದಿ ಬಟ್ಟೆ ಎಲ್ಲರ ಗಮನಸೆಳೆದಿದೆ. ಕೇರಳದ ವಿಶೇಷ ಉಡುಗೆಯಾಗಿರುವ ಬಿಳಿ ಪಂಚೆ, ಬಿಳಿ ಶರ್ಟ್ ಹಾಗೂ ಶಲ್ಯ ಮೂಲಕ ಮೋದಿ ಕೇರಳಿಗರಾಗಿ ಮಿಂಚಿದರು. ಕೇರಳದಲ್ಲಿ ಬಿಳಿ ಪಂಚೆ ಸರ್ಕಾರಿ ಅಧಿಕೃತ ಉಡುಗೆಯಾಗಿದೆ. ಸರ್ಕಾರಿ ಕಚೇರಿಗಳಿಗೆ ಬಿಳಿ ಪಂಚೆ ಧರಿಸಿ ಕೆಲಸಕ್ಕೆ ಹಾಜರಾಗಬಹುದು. ಇದೀಗ ಮೋದಿ ವಿಶೇಷ ಉಡುಗೆಯಲ್ಲಿ ಮಿಂಚಿದ್ದಾರೆ.
ಕೊಚ್ಚಿಗೆ ಆಗಮಿಸಿದ ಮೋದಿ ವಿಮಾನದಿಂದ ಕೆಳಗಿಳಿಯುತ್ತಿದ್ದಂತೆ ಮೋದಿ ವಸ್ತ್ರಕ್ಕೆ ಜನ ಮಾರುಹೋಗಿದ್ದಾರೆ. ಮೋದಿಯನ್ನು ಸ್ವಾಗತಿಸಲು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ , ಸಿಎಂ ಪಿಣರಾಯಿ ವಿಜಯನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆರೀಫ್ ಮೊಹಮ್ಮದ್ ಹಾಗೂ ಪಿಣರಾಯಿ ವಿಜಯನ್ ಕೂಡ ಬಿಳಿ ಪಂಚೆ ತೊಟ್ಟಿದ್ದರು.
ಕೇರಳದ ಕೊಚ್ಚಿಗೆ ಆಗಮಿಸಿದ ಮೋದಿ ಕೇರಳಿಗರಂತೆ ಮಿಂಚಿದರು. ಕೊಚ್ಚಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿ ಮೋದಿ ಭಾಷಣ ಮಾಡಿದರು. ಈ ವೇಳೆ ಕೇಂದ್ರ ಸರ್ಕಾರದ ಸಾಧನೆ, ಯೋಜನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಕೇರಳಕ್ಕೂ ಡಬಲ್ ಎಂಜಿನ್ ಸರ್ಕಾರದ ಅವಶ್ಯಕತೆ ಇದೆ. ಭ್ರಷ್ಟಾಚಾರ ಮುಕ್ತ ಹಾಗೂ ಅಭಿವೃದ್ಧಿ ಪಥದಲ್ಲಿ ರಾಜ್ಯ ಸಾಗಲು ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಉತ್ತಮ ಎಂದು ಮೋದಿ ಹೇಳಿದ್ದಾರೆ. ಕೇರಳ ಜನ ಬಿಜೆಪಿಯನ್ನು ಆಶಾವಾದಿಂದ ನೋಡುತ್ತಿದ್ದಾರೆ ಎಂದಿದ್ದಾರೆ.
ಮೋದಿ ಭಾಷಣಕ್ಕೆ ಕಿಕ್ಕಿರಿದು ಜನ ಸೇರಿದ್ದರು. ವಿಮಾನ ನಿಲ್ದಾಣದ ಪಕ್ಕದಲ್ಲೇ ಆಯೋಜಿಸಿದ್ದ ಸಾರ್ವಜನಿಕೆ ಸಭೆಗೆ ಆಗಮಿಸಿದ ಜನರಿಗೆ ಮೋದಿ ಧನ್ಯವಾದ ಹೇಳಿದರು. ಇದೇ ವೇಳೆ ಕೇರಳ ಜನತೆಗೆ ಓಣಂ ಹಬ್ಬದ ಶುಭಕೋರಿದ್ದಾರೆ.
modi kerala
ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಿದ ಮೋದಿ ಬಳಿಕ ಆದಿ ಶಂಕರಾಚಾರ್ಯದ ಜನ್ಮಸ್ಥಳ ಕಾಲಡಿಗೆ ತೆರಳಿದರು. ಇದು ನನ್ನ ಸೌಭಾಗ್ಯ ಎಂದು ಶಂಕರಾಚಾರ್ಯಯ ಜನ್ಮಸ್ಥಳ ಬೇಟಿ ಕುರಿತು ಮೋದಿ ಬಣ್ಣಸಿದ್ದಾರೆ.