ಮ್ಯೂನಿಚ್‌ನಲ್ಲಿ ಅದ್ಧೂರಿ ಸ್ವಾಗತ, ಸಂಜೆ 6.30ಕ್ಕೆ ಭಾರತೀಯ ಸಮುದಾಯದ ಜೊತೆ ಮೋದಿ ಮಾತು!
- ಸಂಜೆ 6.30ಕ್ಕೆ ಭಾರತೀಯ ಸಮುದಾಯದ ಜೊತೆ ಮೋದಿ ಮಾತು
- ಜರ್ಮನಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ
- ಮ್ಯೂನಿಚ್‌ನಲ್ಲಿ ಮೋದಿಗೆ ಅದ್ಧೂರಿ ಸ್ವಾಗತ
ಜಿ7 ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಜರ್ಮನಿ ಪ್ರವಾಸ ಕೈಗೊಂಡಿದ್ದಾರೆ. ಮ್ಯೂನಿಚ್‌ಗೆ ಬಂದಿಳಿದ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಮೋದಿ ಆಗಮಿಸುತ್ತಿದ್ದಂತೆ ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳು ಮೊಳಗಿತ್ತು.
ಮೋದಿ ಆಗಮನವನ್ನು ಕಾಯುತ್ತಾ ಹಲವು ಪುಟಾಣಿಗಳು ತಮ್ಮ ಪೋಷಕರೊಂದಿಗೆ ಆಗಮಿಸಿದ್ದರು. ಮೋದಿ ನೋಡುತ್ತಲೇ ಭಾರತೀಯ ಸಮುದಾಯ ಪುಳಕಿತಗೊಂಡಿದೆ. ಇತ್ತ ಮೋದಿ ಪುಟಾಣಿಗಳನ್ನು ಮೋಡಿ ಅವರ ಜೊತೆ ಕೆಲ ಹೊತ್ತು ಕಳೆದಿದ್ದಾರೆ.
ಚಿಕ್ಕ ಮಕ್ಕಳ ಜೊತೆ ಮಾತನಾಡಿದ ಪ್ರಧಾನಿ ಮೋದಿ, ಕೆಲವರಿಗೆ ಆಟೋಗ್ರಾಫ್ ನೀಡಿ ಅವರನ್ನು ಖುಷಿಪಡಿಸಿದ್ದಾರೆ. ಪ್ರಧಾನಿ ಯಾವುದೇ ದೇಶಕ್ಕೆ ಹೋದರು ಭಾರತೀಯ ಸಮುದಾಯ ಹಾಗೂ ಮಕ್ಕಳನ್ನು ಮಾತನಾಡಿಸಿ ಅವರೊಂದಿಗೆ ಕೆಲ ಹೊತ್ತು ಕಳೆಯುತ್ತಾರೆ.
ಹೊಟೆಲ್‌ನಲ್ಲೂ ಪ್ರಧಾನಿ ಮೋದಿ ಹಲವು ಮಕ್ಕಳೊಂದಿಗೆ ಮಾತುಕತೆ ನಡೆಸಿದ್ದಾರೆ. ಹಲವುರು ಹಿಂದಿಯಲ್ಲೇ ಮೋದಿ ಜೊತೆ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
ಇಂದು ಸಂಜೆ(ಜೂ.26) 6.30ಕ್ಕೆ ಜರ್ಮನಿಯಲ್ಲಿರುವ ಭಾರತೀಯ ಸಮುದಾಯನವನ್ನುದ್ದೇಶಿ ಮೋದಿ ಮಾತುಕತೆ ನಡೆಸಲಿದ್ದಾರೆ. ಮ್ಯೂನಿಚ್‌ನಲ್ಲಿ ಭಾರತೀಯ ಸಮುದಾಯದ ಜೊತೆಗಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮ್ಯೂನಿಚ್‌ನಲ್ಲಿ ಭಾರತೀಯ ಸಮುದಾಯದ ಜನರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಇದು ಕೋವಿಡ್ ನಂತರ ವಿದೇಶವೊಂದರಲ್ಲಿ ಪ್ರಧಾನಿ ಮೋದಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಿರುವ ದೊಡ್ಡ ಕಾರ್ಯಕ್ರಮ ಎನ್ನಲಾಗಿದೆ.