ರಾಜಕೀಯಕ್ಕೆ ಎಂಟ್ರಿ ಕೊಡಲು ಮೋದಿ ಅಣ್ಣನ ಮಗಳು ರೆಡಿ, ಬೇಡಿಕೆ ಕೇಳಿ ಬಿಜೆಪಿ ಸುಸ್ತು!

First Published Feb 4, 2021, 5:33 PM IST

ಭಾರತೀಯ ರಾಜಕೀಯದಲ್ಲಿ ಕುಟುಂಬ ರಾಜಕಾರಣದ ಆರೋಪ ಸರ್ವೇ ಸಾಮಾನ್ಯ. ಈ ವಿಚಾರವಾಗಿ ಪಿಎಂ ಮೋದಿ ಹಾಗೂ ಬಿಜೆಪಿ ನಾಯಕರು ಇತರ ಪಕ್ಷದ ವಿರುದ್ಧ ಆರೋಪವನ್ನು ಮಾಡುತ್ತಲೇ ಬಂದಿದ್ದಾರೆ. ಆದರೀಗ ಈ ಆರೋಪದ ನಡುವೆಯೇ ಪಿಎಂ ಮೋದಿ ಅಣ್ಣನ ಮಗಳು ಸೋನಲ್ ಮೋದಿ ಕೂಡಾ ರಾಜಕೀಯಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆಂಬ ಮಾತುಗಳು ಹರಿದಾಡಿವೆ. ಅವರು ಗುಜರಾತ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್‌ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಒಂದೆಡೆ ಇಲ್ಲಿನ ಪ್ರಾದೇಶಿಕ ಬಿಜೆಪಿ ಅಧ್ಯಕ್ಷ ಪಕ್ಷದ ನಾಯಕರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಮಾತುಗಳನ್ನಾಡಿದ್ದಾರೆ. ಹೀಗಿರುವಾಗ ಸೋನಲ್ ಮೋದಿ ಸ್ಪರ್ಧೆ ಬಿಜೆಪಿಗೆ ಬಹುದೊಡ್ಡ ಧರ್ಮ ಸಂಕಟವನ್ನು ತಂದಿಟ್ಟಿದೆ.