ಸುದರ್ಶನ ಸೇತು ಉದ್ಘಾಟಿಸಿದ ನಮೋ; ಏನೀ ಕೇಬಲ್ ಸೇತುವೆಯ ವಿಶೇಷತೆ?
ಸರಿಸುಮಾರು 980 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 2.5 ಕಿಮೀ ಕೇಬಲ್ ಸೇತುವೆಯು ಭಾರತದಲ್ಲೇ ಅತಿ ಉದ್ದವಾದ ಈ ನಮೂನೆಯ ಸೇತುವೆಯಾಗಿದೆ.
ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಓಖಾ ಮುಖ್ಯ ಭೂಭಾಗವನ್ನು ಬೇಟ್ ದ್ವಾರಕಾ ದ್ವೀಪಕ್ಕೆ ಸಂಪರ್ಕಿಸುವ ‘ಸುದರ್ಶನ ಸೇತು’ ಸೇತುವೆಯನ್ನು ಉದ್ಘಾಟಿಸಿದರು.
ಸರಿಸುಮಾರು 980 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 2.5 ಕಿಮೀ ಕೇಬಲ್ ಸೇತುವೆಯು ಭಾರತದಲ್ಲೇ ಅತಿ ಉದ್ದವಾದ ಈ ನಮೂನೆಯ ಸೇತುವೆಯಾಗಿದೆ.
ಬೇಟ್ ದ್ವಾರಕಾ ಓಖಾ ಬಂದರಿನ ಸಮೀಪವಿರುವ ಒಂದು ದ್ವೀಪವಾಗಿದ್ದು, ಇದು ದ್ವಾರಕಾ ಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಅಲ್ಲಿ ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ ದೇವಾಲಯವಿದೆ. ಬೇಟ್ ದ್ವಾರಕಾದಲ್ಲಿರುವ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಹಗಲಿನಲ್ಲಿ ಮಾತ್ರ ದೋಣಿಯಲ್ಲಿ ಪ್ರಯಾಣಿಸಬಹುದು.
ಆದರೆ ಇನ್ನು ಹೊಸ ಸೇತುವೆಯು ಸದಾ ಸಂಚರಿಸಲು ಅನುವು ಮಾಡಿಕೊಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ದೇವಾಲಯಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿದ್ದಾರೆ ಮತ್ತು ಅಲ್ಲಿನ ಜನರೊಂದಿಗೆ ಸಂವಾದ ನಡೆಸಲಿದ್ದಾರೆ.
ಸುದರ್ಶನ ಸೇತುವಿನ ಕೆಲವು ಪ್ರಮುಖ ಲಕ್ಷಣಗಳು ಇಲ್ಲಿವೆ..
ನಾಲ್ಕು ಪಥದ 27.20-ಮೀ ಅಗಲದ ಸೇತುವೆಯು ಪ್ರತಿ ಬದಿಯಲ್ಲಿ 2.50-ಮೀ ಅಗಲದ ಕಾಲುದಾರಿಗಳನ್ನು ಹೊಂದಿದೆ.
ಸುದರ್ಶನ ಸೇತು ಭಾರತದ ಅತಿ ಉದ್ದದ ಕೇಬಲ್ ಸೇತುವೆಯಾಗಿದ್ದು, ಫುಟ್‌ಪಾತ್‌ನ ಮೇಲಿನ ಭಾಗಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲಾಗಿದೆ. ಇದು ಒಂದು ಮೆಗಾವ್ಯಾಟ್‌ನಷ್ಟು ವಿದ್ಯುತ್ ಉತ್ಪಾದಿಸುತ್ತದೆ.
ಸೇತುವೆಯು ಭಗವದ್ಗೀತೆಯ ಶ್ಲೋಕಗಳು ಮತ್ತು ಭಗವಾನ್ ಕೃಷ್ಣನ ಚಿತ್ರಣಗಳಿಂದ ಅಲಂಕರಿಸಲ್ಪಟ್ಟ ಪಾದಚಾರಿ ಮಾರ್ಗವನ್ನು ಒಳಗೊಂಡಿದೆ.
ಮೂಲತಃ 'ಸಿಗ್ನೇಚರ್ ಬ್ರಿಡ್ಜ್' ಎಂದು ಕರೆಯಲ್ಪಡುವ ಈ ರಚನೆಯನ್ನು 'ಸುದರ್ಶನ ಸೇತು' ಅಥವಾ ಸುದರ್ಶನ ಸೇತುವೆ ಎಂದು ಮರುನಾಮಕರಣ ಮಾಡಲಾಗಿದೆ.
Sudarshan Setu
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 2017ರಲ್ಲಿ ಈ ಸೇತುವೆಗೆ ಅಡಿಪಾಯ ಹಾಕಿದರು. ಸುದರ್ಶನ ಸೇತುವನ್ನು ₹978 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಓಖಾ- ಬೇಟ್ ದ್ವಾರಕಾ ಸಿಗ್ನೇಚರ್ ಸೇತುವೆಯು ಪ್ರವಾಸಿ ಆಕರ್ಷಣೆಯ ಸ್ಥಳವಾಗಿಯೂ ಕಾರ್ಯ ನಿರ್ವಹಿಸುತ್ತದೆ. ಗುಜರಾತ್ ಪ್ರವಾಸಿಗರಿಗೆ ಇದು ಪ್ರಮುಖ ವೀಕ್ಷಣಾ ಸ್ಥಳವಾಗಲಿದೆ.