ಹಮಾಸ್ ಉಗ್ರ ದಾಳಿ ಖಂಡಿಸಿದ ಪ್ರಧಾನಿ ಮೋದಿ , ಇಸ್ರೇಲ್ ಬೆಂಬಲಕ್ಕೆ ನಿಂತ ಭಾರತ!
ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯನ್ನು ಭಾರತ ಖಂಡಿಸಿದೆ. ಈ ಕುರಿತು ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಂಕಷ್ಟದ ಸಂದರ್ಭದಲ್ಲಿ ಭಾರತ ದೇಶ ಇಸ್ರೇಲ್ ಬೆಂಬಲಕ್ಕೆ ನಿಲ್ಲಲಿದೆ ಎಂದು ಮೋದಿ ಹೇಳಿದ್ದಾರೆ.
ಇಸ್ರೇಲ್ ಮೇಲೆ ಹಮಾಸ್ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ರಾಕೆಟ್ ದಾಳಿ, ಬಾಂಬ್, ಗನ್, ಮಿಸೈಲ್ ಮೂಲಕ ಇಸ್ರೇಲ್ ಮೇಲಿನ ದಾಳಿಯಿಂದ ಸಂಪೂರ್ಣ ಇಸ್ರೇಲ್ ನಲುಗಿ ಹೋಗಿದೆ. ಇತ್ತ ಇಸ್ರೇಲ್ ಕೂಡ ಪ್ರತಿ ದಾಳಿ ಆರಂಭಿಸಿದೆ. 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರೆ, 200ಕ್ಕೂ ಹೆಚ್ಚು ಮಂದಿಯನ್ನು ಉಗ್ರರ ವಶದಲ್ಲಿಟ್ಟುಕೊಂಡಿದ್ದಾರೆ.
ಇನ್ನು 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್ ಮೇಲಿನ ಭೀಕರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಹಮಾಸ್ ಉಗ್ರದಾಳಿಗೆ ಆಘಾತ ವ್ಯಕ್ತಪಡಿಸಿರು ಮೋದಿ, ದಾಳಿಯಿಂದ ಮೃತಪಟ್ಟ ಕುಟುಂಬದ ಸಂಕಷ್ಟಕ್ಕೆ ಮೋದಿ ಮರುಗಿದ್ದಾರೆ. ಇದೇ ವೇಳೆ ಇಸ್ರೇಲ್ ಜೊತೆಗೆ ಭಾರತ ಒಗ್ಗಟ್ಟಿನಿಂದ ನಿಲ್ಲಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇಸ್ರೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದ ಆಘಾತವಾಗಿದೆ. ದಾಳಿಯಿಂದ ಮೃಪಟ್ಟ, ಗಾಯಗೊಂಡ, ಉಗ್ರರ ವಶದಲ್ಲಿರುವ ಇಸ್ರೇಲಿಗರು ಹಾಗೂ ಅವರ ಕುಟುಂಬಕ್ಕಾಗಿ ಪ್ರಾರ್ಥಿಸುತ್ತೇನೆ. ಈ ಕಷ್ಟದ ಸಂದರ್ಭದಲ್ಲಿ ಭಾರತ ಇಸ್ರೇಲ್ ಜೊತೆ ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇಸ್ರೇಲ್ ಮೇಲಿನ ದಾಳಿಯನ್ನು ಹಲವು ನಾಯಕರು ಖಂಡಿಸಿದ್ದಾರೆ. ಇತ್ತ ಇಸ್ರೇಲ್ ಪ್ರತಿ ದಾಳಿ ಆರಂಭಿಸಿದೆ. ಇದು ಆಪರೇಶನ್ ಅಲ್ಲ, ಯುದ್ಧ ಎಂದು ಇಸ್ರೇಲ್ ಘೋಷಿಸಿದೆ.
ಹಮಾಸ್ ಉಗ್ರರ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್ ಆರಂಭಿಸಿದೆ. ಇಷ್ಟಾದರೂ ಇಸ್ರೇಲ್ ಹಲವು ಭಾಗಕ್ಕೆ ನುಗ್ಗಿರುವ ಪ್ಯಾಲೆಸ್ತಿನ್ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.
ಇಸ್ರೇಲ್ ಮೇಲಿನ ದಾಳಿಯನ್ನು ಹಲವು ಮುಸ್ಲಿಮ್ ಮೂಲಭೂತವಾದಿಗಳು, ಮುಸ್ಲಿಂ ನಾಯಕರು ಬೆಂಬಲಿಸಿದ್ದಾರೆ. ಇದೇ ವೇಳೆ ಇರಾನ್ ಹಮಾಸ್ ಉಗ್ರರಿಗೆ ಸಂಪೂರ್ಣ ಬೆಂಬಲ ನೀಡಿದೆ.
ಕಳದೆ ಹಲವು ತಿಂಗಳಿನಿಂದ ಪ್ಲಾನ್ ಮಾಡಿದ್ದ ಹಮಾಸ್ ಉಗ್ರರು, ಇಸ್ರೇಲ್ ಮೇಲೆ ಏಕಾಏಕಿ 5000 ರಾಕೆಟ್ ದಾಳಿ ನಡೆಸಿತ್ತು. ಬಳಿಕ ಹಮಾಸ್ ಉಗ್ರರು ಇಸ್ರೇಲ್ ಗಡಿಯೊಳಕ್ಕೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ್ದಾರೆ.
ಹಲವು ಇಸ್ರೇಲ್ ಸೈನಿಕರನ್ನು ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಹಲವರನ್ನು ವಶಕ್ಕೆ ಪಡೆದು ಗಾಜಾ ಪಟ್ಟಿಗೆ ಎಳೆದೊಯ್ದಿದ್ದಾರೆ. ಇಸ್ರೇಲ್ ಮಹಿಳಾ ಸೈನಿಕರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ. ಹಲವು ಮಹಿಳಾ ಸೈನಿಕರನ್ನು ಉಗ್ರರು ವಶದಲ್ಲಿಟ್ಟುಕೊಂಡಿದ್ದಾರೆ.