ಶೇ.80 ರಷ್ಟು ಭಾರತೀಯರಿಗೆ ಮೋದಿಯೇ ಅಚ್ಚು ಮೆಚ್ಚು, 3ನೇ ಬಾರಿಗೆ ಪ್ರಧಾನಿಯಾಗಲು ಬೆಂಬಲ!
ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರಬಾಕಿ. ಇದರ ಬೆನ್ನಲ್ಲೇ ಹಲವು ಸಂಸ್ಥೆಗಳು ಸಮೀಕ್ಷಾ ವರದಿಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ Pew ಸಂಶೋಧನಾ ಸಂಸ್ಥೆ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ಶೇಕಡಾ 80 ರಷ್ಟು ಭಾರತೀಯರು ಪ್ರಧಾನಿ ಮೋದಿಯೇ ಅಚ್ಚು ಮೆಚ್ಚು ಎಂದಿದ್ದಾರೆ. 3ನೇ ಬಾರಿ ಪ್ರಧಾನಿ ಪಟ್ಟಅಲಂಕರಿಸಲು ಮೋದಿಗೆ ಬೆಂಬಲಿಸಿದ್ದಾರೆ.
Pew ಸಂಶೋಧನಾ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಶೇಕಡಾ 80 ರಷ್ಟು ಭಾರತೀಯರು ಪ್ರಧಾನಿ ಮೋದಿ ಪರ ಒಲವು ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಜಾಗತಿಕ ಮಟ್ಟದಲ್ಲಿ ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Pew ಸರ್ವೇ ತಂಡ ಭಾರತ ಹಾಗೂ 23 ದೇಶಗಳಲ್ಲಿ ಓಟ್ಟು 30,800 ವಯಸ್ಕರ ಅಭಿಪ್ರಾಯ ಕೇಳಿ ಸಮೀಕ್ಷಾ ವರದಿ ಸಂಗ್ರಹಿಸಿದೆ. ಈ ಪೈಕಿ ಶೇಕಡಾ 80 ರಷ್ಟು ಮಂದಿ ಜಾಗತಿಕ ಮಟ್ಟದಲ್ಲಿ ಭಾರತದ ಚರಿಷ್ಮಾ ಬದಲಿಸಿದ ಮೋದಿ ಪರ ಒಲವು ವ್ಯಕ್ತಪಡಿಸಿದ್ದಾರೆ
ಶೇಕಡಾ 55 ರಷ್ಟು ಮಂದಿ 2014ರಿಂದ ಭಾರತ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ ಎಂದಿದ್ದಾರೆ. ಮೋದಿ ಆಡಳಿತದಲ್ಲಿ ನವ ಭಾರತವಾಗಿ ರೂಪುಗೊಂಡಿದೆ. ಮೋದಿ ಆಡಳಿತ ಉತ್ತಮ ಎಂದಿದ್ದಾರೆ.
ಶೇಕಡಾ 55ರಷ್ಟು ಮಂದಿ 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ 3ನೇ ಬಾರಿಗೆ ಪ್ರಧಾನಿಯಾಗಲು ಒಲವು ವ್ಯಕ್ತಪಡಿಸಿದ್ದಾರೆ. ಮೋದಿಯೇ ಸೂಕ್ತ ಪ್ರಧಾನಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯಲ್ಲಿ ಸೆಪ್ಟೆಂಬರ್ 9 ಹಾಗೂ 10 ರಂದು ನಡೆಯಲಿರುವ ಜಿ20 ಶೃಂಗಸಭೆಗೂ ಒಂದು ವಾರ ಮುನ್ನ ಈ ಅಂಕಿ ಅಂಶ ಬಹಿರಂಗಗೊಂಡಿದೆ. ಇದರೊಂದಿಗೆ ಮೋದಿ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ.
ಈ ಸಮೀಕ್ಷೆಯಲ್ಲಿ ಕೇವಲ ಭಾರತ ಮಾತ್ರವಲ್ಲ, ಇತರ 23 ದೇಶಗಳ ಜನರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಪ್ರಧಾನಿ ಮೋದಿ ಕಡೆಗಿರುವ ಒಲವಿನ ಪ್ರಮಾಣ ದುಪ್ಪಟ್ಟಾಗಿದೆ.
ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್ ಬಳಿಕ ಭಾರತ ಜಾಗತಿಕ ಮಟ್ಟದಲ್ಲಿ ವಿಶ್ವಗುರು ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಜೊತೆಗೆ ಸಮೀಕ್ಷಾ ವರದಿಯೂ ಬಿಡುಗಡೆಯಾಗಿದೆ.