ಸ್ಕ್ವಾಡ್ರನ್ ಲೀಡರ್ ದಲೀಪ್ ಸಿಂಗ್‌ಗೆ 100ನೇ ಹುಟ್ಟುಹಬ್ಬದ ಸಂಭ್ರಮ: ಶುಭ ಕೋರಿದ ಸೇನೆ!
ಭಾರತೀಯ ವಾಯುಸೇನೆಯು ಯುದ್ಧ ವಿಮಾನ ಹಾರಿಸಿದ ತನ್ನ ಅತ್ಯಂತ ಹಿರಿಯ ಪೈಲಟ್ ಸ್ಕ್ವಾಡ್ರನ್ ಲೀಡರ್ ದಲೀಪ್ ಸಿಂಗ್ ಮಿಜಿಟಿಯಾರವರ ನೂರನೇ ಹುಟ್ಟುಹಬ್ಬವನ್ನು ಆಚರಿಸಿದೆ. ವಾಯುಸೇನಾ ಅಧಿಕಾರಿಗಳು ತನ್ನ ಹಿರಿಯ ಅಧಿಕಾರಿಗೆ ಹೂಗುಚ್ಛ ನೀಡಿ ಶುಭ ಕೋರಿದ್ದಾರೆ. ಮಿಜಿಟಿಯಾರವರು 1947ರಲ್ಲಿ ನಿವೃತ್ತಿ ಪಡೆದಿದ್ದರು. ಇನ್ನು ಅವರ ಯಾವೊಬ್ಬ ಬ್ಯಾಚ್‌ಮೇಟ್ ಕೂಡಾ ಜೀವಂತವಿಲ್ಲ. ಈ ಮೂಲಕ ಅವರು ಭಾರತೀಯ ವಾಯುಸೇನೆಯ ಜೀವಂತವಿರುವ ಅತ್ಯಂತ ಹಿರಿಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಕೇವಲ 20 ವರ್ಷದ ಹರೆಯದಲ್ಲಿ ಬಾರತೀಯ ವಾಯುಸೇನೆಯ ವಿಮಾನ ಹಾರಿಸಿದ್ದರು. ಅವರ ಕುರಿತಾದ ಕೆಲ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.
1940ರ ಆಗಸ್ಟ್ 1ರಂದು ಮೊದಲ ಹಾರಾಟ: ಮಿಜಿಟಿಯಾರವರು 1940ರ ಆಗಸ್ಟ್ 1ರಂದು ಭಾರತೀಯ ವಾಯುಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಂಡು 1940ರ ಆಗಸ್ಟ್ 5ರಂದು ವಾಯುಸೇನೆಯ ಯುದ್ಧ ವಿಮಾನವನ್ನು ಹಾರಿಸಿದ್ದರು.
ಇವರು ಲಾಹೋರ್ ಏರ್‌ಫೀಲ್ಡ್‌ನಿಂದ ಟೈಗರ್ ಮಾಥ್ ಏರ್‌ಕ್ರಾಫ್ಟ್ ನಲ್ಲಿ ಹಾರಾಟ ಮಾಡಿದ್ದರು. ಅಂದು ಅವರು ತರಬೇತಿ ಪಡೆಯುತ್ತಿದ್ದ ಕಾರಣ ಅವರೊಂದಿಗೆ ಇಬ್ಬರು ಬ್ರಿಟಿಷ್ ತರಬೇತುದಾರರೂ ಇದ್ದರು.
22 ಆಗಸ್ಟ್ 1940ರಲ್ಲಿ ಮಿಜಿಟಿಯಾ ಏಕಾಂಗಿಯಾಗಿ ಮೊದಲ ಬಾರಿ ವಿಮಾನ ಹಾರಿಸಿದ್ದರು.
ಅನೇಕ ವಿಮಾನಗಳನ್ನು ಹಾರಿಸಿರುವ ಹೆಗ್ಗಳಿಕೆ: ಮಿಜಿಟಿಯಾ ಹರಿಕೆನನ್ ಮಾತ್ರವಲ್ಲದೇ ವೆಸ್ಟ್‌ಲೆಂಡ್ ವಾಪಿತಿ ಐಐಎ, ಹಾಕರ್ ಆಡೆಕ್ಸ್ ಹಾಗೂ ಹಾರ್ಟ್‌ನಂತಹ ವಿಮಾನಗಳನ್ನೂ ಹಾರಿಸಿದ್ದಾರೆ.
ಆರಂಭದಲ್ಲಿ ಅವರಿಗೆ ಕೋಸ್ಟ್ ಗಾರ್ಡ್ ವಿಮಾನಗಳನ್ನು ಹಾರಿಸುವ ಜವಾಬ್ದಾರಿ ವಹಿಸಲಾಗಿತ್ತು. ಅವರು ಬಂಗಾಳ ಕೊಲ್ಲಿಯಲ್ಲಿ ಗಸ್ತು ನಡೆಸುತ್ತಿದ್ದರು. ಬಳಿಕ ಅವರನ್ನು ನಂಬರ್ 6 ಸ್ಕ್ವಾಡ್ರನ್‌ಗೆ ಸೇರ್ಪಡೆಗೊಳಿಸಲಾಯ್ತು.
ಲೆಜೆಂಡ್ರಿ ಹಾಕರ್ ಹರಿಕೇನ್ ವಿಮಾನ ಹಾರಾಟ: ನಂಬರ್ 6 ಸ್ಕ್ವಾಡ್ರನ್‌ನಲ್ಲಿದ್ದ ಅವರಿಗೆ ಅಂದಿನ ಅತ್ಯಂತ ಫೇಮಸ್ ವಿಮಾನ ಹಾಕರ್ ಹರಿಕೇನ್‌ನಲ್ಲಿ ಹಾರಾಟ ಮಾಡುವ ಅವಕಾಶ ಸಿಕ್ಕಿತ್ತು. ಈ ವಿಮಾನ ಪ್ರತಿ ಗಂಟೆಗೆ 300 ಕಿ. ಮೀಟರ್‌ಗೂ ಅಧಿಕ ವೇಗವಾಗಿ ಹಾರಾಡಬಲ್ಲ ಸಾಮರ್ಥ್ಯದ ವಿಮಾನವಾಗಿತ್ತು.
ಮಿಜಿಟಿಯಾರವರು ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಹರಿಕೇನ್ ಹಾರಾಟ ಮಾಡಿದ್ದರು. ಬರ್ಮಾ ಫ್ರಂಟ್‌ನಲ್ಲಿ ಅವರ ತಂಡದ ನೇತೃತ್ವವನ್ನು ಬಾಬಾ ಮೆಹರ್ ಸಿಂಗ್ ನಡೆಸಿದ್ದರು. ಬಾಬಾ ಮೆರ್ ಸಿಂಗ್‌ರವರನ್ನು ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಡಿಸ್ಟಿಂಗ್ವಿಶ್ಡ್ ಸರ್ವಿಸ್ ಆರ್ಡರ್ ಮೂಲಲಕ ಸನ್ಮಾನಿಸಲಾಗಿತ್ತು.
ಬ್ರಿಟಿಷ್ ಮಹಿಳೆ ಜೊತೆ ಮದುವೆ: ಜಪಾನ್ ಶರಣಾಗತಿ ಬಳಿಕ ದ್ವಿತೀಯ ವಿಶ್ವಯುದ್ಧ ಮುಕ್ತಾಯಗೊಂಡಿತ್ತು ಹಾಗೂ ಮಿಜಿಟಿಯಾರನ್ನು BCOFಗೆ ಆಯ್ಕೆ ಮಾಡಲಾಗಿತ್ತು. ಅವರು ಮೆಲ್ಬರ್ನ್‌ನಲ್ಲಿದ್ದ BCOF ಮುಖ್ಯ ಕಚೇರಿಗಡ ಕಳುಹಿಸಲಾಗಿತ್ತು. ಅಲ್ಲಿ ಅವರು ಜಾನ್ ಸ್ಯಾಂಡರ್ಸ್‌ರನ್ನು ಭೇಟಿಯಾಗುತ್ತಾರೆ. ಸ್ಯಾಂಡರ್ಸ್ ತಂದೆ ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
18 ಫೆಬ್ರವರಿಯಲ್ಲಿ 1947ರಂದು ದಲೀಪ್ ಸಿಂಗ್ ಮಿಜಿಟಿಯಾ ಉತ್ತರ ಪ್ರದೇಶದ ಗೋರಖ್‌ಪುರದ ತಮ್ಮ ಮನೆಯಲ್ಲಿ ಕುಟುಂಬ ಸದಸ್ಯರೆದುರು ಸ್ಯಾಂಡರ್ಸ್‌ರನ್ನು ಮದುವೆಯಾಗಿದ್ದರು.