ನಿಖಿಲ್, ನುಸ್ರತ್ ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದ ನಟ ಕಂ ರಾಜಕಾರಣಿ!

First Published Jun 10, 2021, 1:31 PM IST

ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂದರೆ ನುಸ್ರತ್ ಜಹಾಂ ಸದ್ಯ ತಮ್ಮ ಪ್ರೆಗ್ನೆನ್ಸಿ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ವರದಿಗಳನ್ವಯ ನುಸ್ರತ್ ಆರು ತಿಂಗಳ ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಆದರೆ ಇವೆಲ್ಲದರ ನಡುವೆ ಅವರ ಗಂಡ ನಿಖಿಲ್ ಜೈನ್ ನಾವಿಬ್ಬರೂ ಕಳೆದ ಆರು ತಿಂಗಳಿನಿಂದ ಒಟ್ಟಿಗೆ ವಾಸಿಸುತ್ತಿಲ್ಲ ಎಂದಾದರೆ ಆ ಮಗು ಹೇಗೆ ನನ್ನದಾಗುತ್ತದೆ ಎಂದು ಪ್ರಶ್ನಿಸಿರುವುದೇ ಭಾರೀ ವಿವಾದ ಸೃಷ್ಟಿಸಿದೆ. ಇನ್ನು ಕೆಲ ವರದಿಗಳು ನುಸ್ರತ್ ಪ್ರೆಗ್ನೆನ್ಸಿ ವಿಚಾರ ನಿಖಿಲ್‌ಗೆ ತಿಳಿದೇ ಇಲ್ಲವೆಂದು ಹೇಳಿದರೆ, ಇನ್ನು ಕೆಲವೆಡೆ ಇಬ್ಬರ ಮದುವೆ ಮುರಿದು ಬೀಳುವ ಹಂತದಲ್ಲಿದೆ ಎನ್ನಲಾಗಿದೆ.