ಸಚಿನ್, ಲತಾ ಅಲ್ಲ, ಮತ್ಯಾರ ವಿರುದ್ಧ ತನಿಖೆ; ವಿರೋಧದ ಬಳಿಕ ಉಲ್ಟಾ ಹೊಡೆದ ಮಹಾ ಸರ್ಕಾರ!
ರೈತ ಪ್ರತಿಭಟನೆ ಹಾಗೂ ದೇಶದ ಪಿತೂರಿ ಕುರಿತು ದೇಶದ ಐಕ್ಯತೆ ಕುರಿತು ಟ್ವೀಟ್ ಮಾಡಿದ್ದ ಸೆಲೆಬ್ರೆಟಿಗಳ ವಿರುದ್ಧ ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿತ್ತು. ಕಂಗೆಡಿಸಿತು. ಹೀಗಾಗಿ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಲತಾ ಮಂಗೇಶ್ಕರ್ ವಿರುದ್ಧ ತನಿಖೆಗೆ ಆದೇಶಿಸಿತ್ತು. ಆದರೆ ಈ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಭಾರಿ ವಿರೋಧದ ಬಳಿಕ ಸರ್ಕಾರ ಉಲ್ಟಾ ಹೊಡೆದಿದೆ.
ರೈತ ಪ್ರತಿಭಟನೆ ಕುರಿತು ವಿದೇಶಿ ಸೆಲೆಬ್ರೆಟಿಗಳ ಪಿತೂರಿಗೆ ಭಾರತೀಯ ಸೆಲೆಬ್ರೆಟಿಗಳು ತಕ್ಕ ತಿರುಗೇಟು ನೀಡಿದ್ದರು. ಭಾರತದ ಆತಂತರಿಕ ವಿಚಾರದಲ್ಲಿ ಮೂಗುತೂರಿಸಬೇಡಿ, ಭಾರತೀರೆಲ್ಲ ಒಗ್ಗಟ್ಟಿನಿಂದ ಇರೋಣ ಎಂದು ಕರೆ ನೀಡಿದ್ದರು.
ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಸೇರಿದಂತೆ ವಿದೇಶಿ ಸೆಲೆಬ್ರೆಟಿಗಳು ಭಾರತದ ವಿರುದ್ಧ ಪಿತೂರಿಗೆ ಸಂಚು ರೂಪಿಸಿದ್ದರು. ಆದರೆ ಇದನ್ನು ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಗಾಯಕಿ ಲತಾ ಮಂಗೇಶ್ಕರ್ ಸೇರಿದಂತೆ ಹಲವರು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಲು ಅವಕಾಶ ನೀಡುವುದಿಲ್ಲ ಎಂದಿದ್ದರು.
ಸಚಿನ್ ಟ್ವೀಟ್ ಮಾಡಿದ ಬೆನ್ನಲ್ಲೇ ಕೇರಳ ಕಾಂಗ್ರೆಸ್ ಸಚಿನ್ ಕಟೌಟ್‌ಗೆ ಮಸಿ ಬಳಿದು ಅವವಾನ ಮಾಡಿತ್ತು. ಇನ್ನು NCP ನಾಯಕ ಶರದ್ ಪವಾರ್, ಸಚಿನ್ ಇತರ ಕ್ಷೇತ್ರದ ಕುರಿತು ಮಾತನಾಡುವಾಗ ಎಚ್ಚರಿಕೆಯಿಂದರಿಲಿ ಎಂದು ವಾರ್ನಿಂಗ್ ಮಾಡಿದ್ದರು
ಈ ಬೆಳವಣಿಗೆಗಳ ಬೆನ್ನಲ್ಲೇ ಸೆಲೆಬ್ರೆಟಿಗಳು ಕೇಂದ್ರ ಸರ್ಕಾರದ ಪರವಾಗಿ ಟ್ವೀಟ್ ಮಾಡಿದ್ದಾರೆ. ಇದರ ಸೆಲೆಬ್ರೆಟಿಗಳು ಒತ್ತಡದಲ್ಲಿ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಮಹಾರಾಷ್ಟ್ರ ಗೃಹ ಸಚಿವರು ತನಿಖೆಗೆ ಆದೇಶಿಸಿದ್ದರು.
ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ದೇಶದ ಪರವಾಗಿ ಟ್ವೀಟ್ ಮಾಡಿದ ಸೆಲೆಬ್ರೆಟಿಗಳ ವಿರುದ್ಧ ತನಿಖೆ ಎಲ್ಲಿಯ ನ್ಯಾಯ ಎಂದು ಭಾರಿ ವಿರೋಧ ವ್ಯಕ್ತಪಡಿಸಿದ್ದರು.
ಇಂಡಿಯಾ ಟುಗೆದರ್, ಸಚಿನ್ ಜೊತೆ ನಾವಿದ್ದೇವೆ ಸೇರಿದಂತೆ ಹಲವು ಅಭಿಯಾನಗಳು ಸಾಮಾಜಿಕ ಜಾಲತಾಣದಲ್ಲಿ ಬಲು ಜೋರಾಗಿತ್ತು. ತಪ್ಪಿನ ಅರಿವಾಗುತ್ತಿದ್ದಂತೆ ಇದೀಗ ಮಹಾರಾಷ್ಟ್ರ ಸರ್ಕಾರ ಉಲ್ಟಾ ಹೊಡೆದಿದೆ.
ಸಚಿನ್ ತೆಂಡುಲ್ಕರ್, ಲತಾ ಮಂಗೇಶ್ಕರ್ ಸೇರಿದಂತೆ ಸೆಲೆಬ್ರೆಟಿಗಳ ವಿರುದ್ಧ ಮಹಾರಾಷ್ಟ್ರ ಸರ್ಕಾರ ತನಿಖೆ ನಡೆಸುತ್ತಿಲ್ಲ. ಬಿಜೆಪಿ ಐಟಿ ಸೆಲ್ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿದೆ. ನಾನು ಸೆಲೆಬ್ರೆಟಿಗಳ ವಿರುದ್ಧ ತನಿಖೆಗೆ ನಡೆಸಲು ಹೇಳಿಲ್ಲ. ಇದರ ಹಿಂದೆ ಬಿಜೆಪಿ ಕೈವಾಡವಿದೆ. ಹೀಗಾಗಿ ಬಿಜೆಪಿ ಐಟಿ ಸೆಲ್ ಮೇಲೆ ತನಿಖೆ ನಡೆಯಲಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.