ಬಾಯ್‌ಫ್ರೆಂಡ್ ಯಶ್ ಮಡಿಲಲ್ಲಿ ಸಂಸದೆ ನುಸ್ರತ್ ಮಗು, ನೆಟ್ಟಿಗರ ಪ್ರಶ್ನೆಗೆ ನಟಿ ದಂಗು!
ತೃಣಮೂಲ ಕಾಂಗ್ರೆಸ್ ಸಂಸದೆ ಮತ್ತು ಬಂಗಾಳಿ ಚಲನಚಿತ್ರ ನಟಿ ನುಸ್ರತ್ ಜಹಾನ್ ಆಗಸ್ಟ್ 25 ರಂದು ಪುಟ್ಟ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಪಾರ್ಕ್ ಸ್ಟ್ರೀಟ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿಅವರ ಹೆರಿಗೆಯಾಗಿದೆ. ಗಂಡು ಮಗುವಿಗೆ ಜನ್ಮ ಕೊಟ್ಟಿರುವ ನುಸ್ರತ್ 4 ದಿನಗಳ ಬಳಿಕ, ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಪಡೆದಿದ್ದಾರೆ. ಆಕೆ ಆಸ್ಪತ್ರೆಯಿಂದ ಹೊರಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ನುಸ್ರತ್ ಮಗ ಆಕೆಯ ಗೆಳೆಯ ಯಶ್ ದಾಸ್ ಗುಪ್ತಾರ ತೋಳಿನಲ್ಲಿತ್ತು ಎಂಬುವುದು ವಿಶೇಷ. ಯಶ್ ಅವರ ಮಡಿಲಲ್ಲಿ, ನುಸ್ರತ್‌ನ ಮಗನನ್ನು ಕಂಡು ನೆಟ್ಟಿಗರು ನಿಮ್ಮ ಮಗುವಿನ ತಂದೆಯ ಹೆಸರೇನು ಎಂದು ಪ್ರಶ್ನಿಸಲಾರಂಭಿಸಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ನುಸ್ರತ್ ತನ್ನ ಮಗನಿಗೆ ಇಶಾನ್(Yishaan) ಎಂದು ನಾಮಕರಣ ಮಾಡಿದ್ದಾರೆ. ಈ ಹೆಸರು ಯಶ್‌ಗೆ ಹೋಲಿಕೆಯಾಗುತ್ತದೆ.
ನುಸ್ರತ್ ಮಗು ಯಶ್ ಮಡಿಲಲ್ಲಿರುವುದನ್ನು ನೋಡಿದ ಜನರು, ಯಶ್ ನಿಮ್ಮ ಮಗುವಿನ ತಂದೆಯೇ ಎಂದು ಕೇಳಿದ್ದಾರೆ. ಹೀಗಿದ್ದರೂ ನುಸ್ರತ್ ತಮ್ಮ ಮಗುವಿನ ತಂದೆ ಹೆಸರು ಯಾವತ್ತಿಗೂ ಬಹಿರಂಗಪಡಿಸುವುದಿಲ್ಲ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಆಸ್ಪತ್ರೆಯಿಂದ ಹೊರಬಂದ ನುಸ್ರತ್ ಜಹಾನ್ ಅವರನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವೇಳೆ, ಅವರು ತಿಳಿ ಗುಲಾಬಿ ಸಲ್ವಾರ್ ಸೂಟ್ ಧರಿಸಿದ್ದರು.
ನುಸ್ರತ್ ಜಹಾನ್ ಮತ್ತು ಆಕೆಯ ಮಗನನ್ನು ನೋಡಲು ಆಸ್ಪತ್ರೆಯ ಹೊರಗೆ ಭಾರೀ ಜನ ಹಾಜರಿದ್ದರು. ಈ ವೇಳೆ, ಅವರು ಅಭಿಮಾನಿಗಳತ್ತ ಕೈಮುಗಿದಿದ್ದಾರೆ.
ನುಸ್ರತ್ ಜಹಾನ್ ಮತ್ತು ಯಶ್ ದಾಸ್ ಗುಪ್ತಾ ಇವರಿಬ್ಬರೂ ಕಂದ ಇಶಾನ್ ಜೊತೆ ಒಂದೇ ಕಾರಿನಲ್ಲಿ ಆಸ್ಪತ್ರೆಯಿಂದ ಹೊರಟಿದ್ದಾರೆ. ಈ ವೇಳೆ ಮಗು ಯಶ್ ಮಡಿಲಲ್ಲಿತ್ತು. ಆದರೆ, ಮಗುವಿನ ಮುಖವನ್ನು ಮುಚ್ಚಲಾಗಿತ್ತು.
ನುಸ್ರತ್ ಜಹಾನ್ ತನ್ನ ವೈಯಕ್ತಿಕ ಜೀವನ ಮತ್ತು ಪ್ರೆಗ್ನೆನ್ಸಿ ವಿಚಾರವಾಗಿ ದೀರ್ಘಕಾಲದಿಂದ ಸುದ್ದಿಯಾಗಿದ್ದಾರೆ. ಪತಿ ನಿಖಿಲ್ ಜೈನ್‌ರಿಂದ ಬೇರ್ಪಟ್ಟಾಗಿನಿಂದ ಅವರ ಮತ್ತು ಯಶ್ ನಡುವಿನ ಸಂಬಂಧದ ಬಗ್ಗೆ ಚರ್ಚೆ ಎದ್ದಿದೆ.
ವರದಿಗಳ ಪ್ರಕಾರ, ಯಶ್ ಹೆರಿಗೆ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದರು. ನುಸ್ರತ್ ಸಿಂಗಲ್ ಪೇರೆಂಟ್ ಆಗಲು ನಿರ್ಧರಿಸಿದ್ದಾರೆ. ಕೋಲ್ಕತ್ತಾದ ಅನೇಕ ಸಿಂಗಲ್ ಮದರ್ಸ್ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ನುಸ್ರತ್ ಜಹಾನ್ ಜೂನ್ 19, 2019 ರಂದು ಟರ್ಕಿಯ ಬೋಡ್ರಮ್ ಪಟ್ಟಣದ ಉದ್ಯಮಿ ನಿಖಿಲ್ ಜೈನ್ ಅವರನ್ನು ವಿವಾಹವಾದರು. ಮುಸ್ಲಿಂ, ಹಿಂದೂ ಮತ್ತು ಕ್ರಿಶ್ಚಿಯನ್ ಹೀಗೇ ಮೂರು ಸಂಪ್ರದಾಯದಂತೆ ಇಬ್ಬರೂ ವಿವಾಹವಾಗಿದ್ದರು.