ಮರದಿಂದ ನೋಟುಗಳ ಮಳೆ, ಮುಗಿ ಬಿದ್ದ ಜನ: ಅಸಲಿಯತ್ತು ಕೇಳಿ ಶಾಕ್!
First Published Dec 15, 2020, 5:04 PM IST
ಆಗ್ರಾದಲ್ಲಿ ಅಕೇಶಿಯಾ ಮರವೊಂದರಿಂದ ನೋಟುಗಳ ಮಳೆ ಸುರಿದಿದೆ. ಮರದಿಂದ ಬೀಳುತ್ತಿದ್ದ 50 ರೂಪಾಯಿಯನ್ನು ಕಂಡ ಜನ ಇವುಗಳನ್ನು ಹೆಕ್ಕಲು ಮುಗಿ ಬಿದ್ದಿದ್ದಾರೆ. ಹತ್ತಿರ ಹೋದವರಿಗೆ ಈ ನೋಟುಗಳನ್ನು ಕೋತಿಯೊಂದು ಎಸೆಯುತ್ತಿದೆ ಎಂಬ ಸತ್ಯ ಅರಿವಾಗಿದೆ. ಒಂದೆರಡು ನೋಟುಗಳನ್ನು ಕೆಳಗೆಸೆಯುತ್ತಿದ್ದ ಕೋತಿ ಮತ್ತೆ ಬೇರೆ ರೆಂಬೆಗೆ ಹಾರಿ ಕುಳಿತುಕೊಳ್ಳುತ್ತಿತ್ತು. ಬರೋಬ್ಬರಿ ಐವತ್ತು ಸಾವಿರ ಮುಗಿಯುವವರೆಗೆ ಕೋತಿ ತನ್ನಾಟ ಮುಂದುವರೆಸಿದೆ. ಈ ಕೋತಿ ಹಣವನ್ನು ಗಾಡಿಯೊಂದರಿಂದ ಎಗರಿಸಿಕೊಂಡು ಬಂದಿತ್ತು. ಕಾರಿನಲ್ಲಿ ಒಟ್ಟು ಐದು ಲಕ್ಷ ರೂಪಾಯಿ ಇರಿಸಲಾಗಿತ್ತು, ಆದರೆ ಕಿಟಕಿ ಮುಚ್ಚಲು ಚಾಲಕ ಮರೆತಿದ್ದ.

ಬಾಹ್‌ನ ಮಹಿಳಾ ಆಸ್ಪತ್ರೆ ಬಳಿ ಮಧ್ಯಾಹ್ನ 12 ಗಂಟೆಗೆ ಇದ್ದಕ್ಕಿದ್ದಂತೆ ಅಕೇಶಿಯಾ ಮರವೊಂದರಿಂದ ಐನೂರು ರೂಪಾಯಿ ನೋಟು ಬೀಳುತ್ತಿರುವುದನ್ನು ಅಲ್ಲಿದ್ದ ಜನ ಗಮನಿಸಿದ್ದು, ಕೂಡಲೇ ಇದನ್ನು ಹೆಕ್ಕಲು ಮರದತ್ತ ಧಾವಿಸಿದ್ದಾರೆ.

ಜೈತ್‌ಪುರದ ತುಳಸೀರಾಮ್ ಎಂಬಾತ ಹೊಲವೊಂದನ್ನು ಖರೀದಿಸಿದ್ದ. ಸೋಮವಾರ ಬೆಳಗ್ಗೆ ಸುಮಾರು 11.30 ಕಾರಿನಲ್ಲಿ ತಹಸೀಲ್‌ಗೆ ತೆರಳಿದ್ದರು. ಅಲ್ಲಿದ್ದ ಮಹಿಳಾ ಆಸ್ಪತ್ರೆ ಬಳಿ ತನ್ನ ಕಾರನ್ನು ಪಾರ್ಕ್ ಮಾಡಿದ್ದರು. ಕಾರಿನಲ್ಲಿ ಚೀಲವೊಂದರಲ್ಲಿ ಐದು ಲಕ್ಷವನ್ನೂ ಇರಿಸಿದ್ದರು. ಕಾರು ನಿಲ್ಲಿಸಿದ ರಾಕೇಶ್ ತನ್ನ ವಕೀಲರನ್ನು ಭೇಟಿಯಾಗಲು ತೆರಳಿದ್ದರು. ಹೀಗಿರುವಾಗ ಕೋತಿಯೊಂದು ಕಾರಿನೊಳಗೆ ನುಗ್ಗಿದೆ.
Today's Poll
ಹೊಸ ಆನ್ಲೈನ್ ಆಟಗಳನ್ನು ಹೇಗೆ ಹುಡುಕಿ ಕೊಳ್ಳುತ್ತೀರಿ?