'ಪ್ರಕೃತಿ ಮಾತೆಯ ಸೆರಗಿನ ಸ್ಟೈಲಿಷ್ ಬಾರ್ಡರ್..' ಇದು ಭಾರತದ ಯಾವ ರೈಲ್ವೇ ನಿಲ್ದಾಣ ಗೆಸ್ ಮಾಡ್ತೀರಾ?
ಬಹುಶಃ ಭಾರತದಲ್ಲಿ ಸಾಕಷ್ಟು ರೈಲ್ವೇ ನಿಲ್ಡಾಣಗಳಿವೆ. 1857ರಲ್ಲಿ ಬ್ರಿಟಿಷರು ಸ್ಥಾಪಿಸಿದ ಒಂದು ರೈಲ್ವೇ ನಿಲ್ದಾಣದ ಬಗ್ಗೆ ನಾವೀಗ ಹೇಳಲೇಬೇಕು. ಅದಕ್ಕೂ ಮುನ್ನ ಈ ಚಿತ್ರದಲ್ಲಿರುವ ರೈಲ್ವೇ ನಿಲ್ದಾಣ ಯಾವುದು ಅಂತಾ ಗೆಸ್ ಮಾಡ್ತೀರಾ ನೋಡಿ!
ಭಾರತದಲ್ಲಿ ಎಷ್ಟೆಲ್ಲಾ ರೈಲು ನಿಲ್ದಾಣಗಳಿವೆ. ಆದರೆ, ಕೆಲವೊಂದು ರೈಲ್ವೆ ನಿಲ್ದಾಣಗಳು ಮಾತ್ರವೇ ನೋಡಲು ರಮಣೀಯವಾಗಿರುತ್ತದೆ. ಅಂಥದ್ದೊಂದು ರೈಲ್ವೇ ನಿಲ್ದಾಣದ ಚಿತ್ರಗಳು ಇಲ್ಲಿವೆ.
ಇದು ಭಾರತದ ಅತ್ಯಂತ 10 ಅಚ್ಚ ಹಸುರಿನ ರೈಲ್ವೇ ನಿಲ್ದಾಣಗಳಲ್ಲಿ ಒಂದು. ಇನ್ನೂ ವಿಶೇಷವೆಂದರೆ, ಈ ರೈಲ್ವೇ ನಿಲ್ದಾಣ ಇರುವುದು ನಮ್ಮ ಕರ್ನಾಟಕದಲ್ಲಿ.
ಪಶ್ಚಿಮಘಟ್ಟದ ಸಾಲಿನಲ್ಲಿರುವ ಈ ರೈಲ್ವೇ ನಿಲ್ದಾಣದ ಇಂಥ ರಮಣೀಯ ದೃಶ್ಯ ಸಿಗುವುದು ಮಳೆಗಾಲದಲ್ಲಿ ಮಾತ್ರ. ಉಳಿದ ಸಮಯದಲ್ಲಿ ಇಲ್ಲಿನ ಈ ಊರಿನಿಂದ ಹೊರಬಿದ್ದರೆ ಸಾಕು ಎನಿಸುತ್ತದೆ.
ಭಾರತದಲ್ಲಿ ಮಾತ್ರವಲ್ಲ ನಾರ್ವೆಯ ಅಂತಾರಾಷ್ಟ್ರೀಯ ಅಭಿವೃದ್ಧಿ ಖಾತೆ ಸಚಿವ ಎರಿಕ್ ಸೋಲ್ಹಿಮ್ ಕೂಡ ಈ ನಿಲ್ದಾಣದ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಬಹುಶಃ ಭಾರತದಲ್ಲಿ ಇರುವ 10 ಅಚ್ಚ ಹಸಿರಿನ ರೈಲ್ವೇ ನಿಲ್ದಾಣಗಳಲ್ಲಿ ಕರ್ನಾಟಕದ ಈ ರೈಲ್ವೇ ನಿಲ್ದಾಣ ಕೂಡ ಒಂದಾಗಿರಬೇಕು ಎಂದು ಅವರು ಟ್ವೀಟ್ ಮಾಡಿದ್ದರು.
ಅವರು ಟ್ವೀಟ್ ಮಾಡಿದ ಆ ರೈಲ್ವೇ ನಿಲ್ದಾಣ ಯಾವುದು ಅನ್ನೋದು ನಿಮ್ಮ ಕುತೂಹಲವಾಗಿರಬಹುದು. ಕೊಂಕಣ ರೈಲ್ವೇಯ ಅಡಿಯಲ್ಲಿ ಬರುವ ನಿಲ್ದಾಣ ಇದು.
ಹೌದು, ಉತ್ತರ ಕನ್ನಡದ ಜಿಲ್ಲಾ ಕೇಂದ್ರ ಕಾರವಾರದ ಶಿರವಾಡದಲ್ಲಿರುವ ರೈಲ್ವೇ ನಿಲ್ದಾಣ ತನ್ನ ಪ್ರಕೃತಿ ಸೊಬಗಿಗೂ ಸಾಕಷ್ಟು ಹೆಸರುವಾಸಿಯಾಗಿದೆ.
857 ರಲ್ಲಿ ಬ್ರಿಟಿಷರು ಸ್ಥಾಪಿಸಿದ ಕಾರವಾರವನ್ನು ಕೆಲವೊಮ್ಮೆ "ಕರ್ನಾಟಕದ ಕಾಶ್ಮೀರ" ಎಂದು ಕರೆಯಲಾಗುತ್ತದೆ. ಹಾಗಂಥ ಈ ಊರು ಹೀಗಿರುವುದು ಮಳೆಗಾಲದಲ್ಲಿ ಮಾತ್ರ.
ಹಾಗಾಗಿ ಕಾರವಾರಕ್ಕೆ ಪ್ರಯಾಣ ಮಾಡಿ ಅಲ್ಲಿನ ರೈಲ್ವೇ ನಿಲ್ದಾಣದ ಅಂದವನ್ನು ಸೆರೆಹಿಡಿಯಲು ಬಯಸುವವರು ಕಡ್ಡಾಯವಾಗಿ ಮಳೆಗಾಲದ ಸಮಯದಲ್ಲಿಯೇ ಪ್ರಯಾಣ ಮಾಡಬೇಕು.
ಇನ್ನು ಈ ರೈಲ್ವೇ ನಿಲ್ದಾಣದ ಫೋಟೋವನ್ನು ಹಂಚಿಕೊಳ್ಳುವ ಹೆಚ್ಚಿನ ಪ್ರಕೃತಿ ರಸಿಕರು, ಇದು ಪ್ರಕೃತಿ ಮಾತೆ ಧರಿಸಿರುವ ಅಂದದ ಸೀರೆಯೊಂದರ ಸೆರಗಿನ ಬಾರ್ಡರ್ ರೀತಿ ಕಾಣುತ್ತದೆ ಎಂದು ವರ್ಣಿಸುತ್ತಾರೆ.
ಕೊಂಕಣ ರೈಲ್ವೇ ಮಾರ್ಗದಲ್ಲಿರುವ ಕಾರವಾರ ರೈಲು ನಿಲ್ದಾಣ ವ್ಯಾಪಾರದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಉತ್ತರ ಕನ್ನಡದ ಉತ್ತರ ಭಾಗ ಹಾಗೂ ಗೋವಾ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಿರುವ ನಿಲ್ದಾಣವಿದು.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕಾರವಾರ ರೈಲ್ವೇ ನಿಲ್ದಾಣ ಎಂದು ಸರ್ಚ್ ಮಾಡಿದರೆ, ಅಲ್ಲಿ ಬರುವಂಥ ಫೋಟೋಗಳನ್ನು ನೋಡುವುದೇ ಆಹ್ಲಾದಕರ ಎನಿಸುತ್ತದೆ.
ಇನ್ನು ಕಾರವಾರಕ್ಕೆ ಬೆಂಗಳೂರಿನಿಂದ ಪ್ರತಿನಿತ್ಯ ರೈಲುಸೇವೆಗಳಿದೆ. ಪಂಚಗಂಗಾ ಎಕ್ಸ್‌ಪ್ರೆಸ್ ಪ್ರತಿನಿತ್ಯ ಈ ಮಾರ್ಗದಲ್ಲಿ ಓಡಾಡುವುದು ಮಾತ್ರವಲ್ಲ, ರಾಜಧಾನಿಯ ಸಂಪರ್ಕ ಕೊಂಡಿ ಎನಿಸಿಕೊಂಡಿದೆ.