- Home
- News
- India News
- ರಾಮ್ ಚರಣ್ ಪತ್ನಿಯ ತಾತ 71 ಆಸ್ಪತ್ರೆಗಳ, 28,000 ಕೋಟಿಯ ಒಡೆಯ 91ನೇ ವಯಸ್ಸಲ್ಲೂ ಮಾಡ್ತಾರೆ ಕೆಲಸ !
ರಾಮ್ ಚರಣ್ ಪತ್ನಿಯ ತಾತ 71 ಆಸ್ಪತ್ರೆಗಳ, 28,000 ಕೋಟಿಯ ಒಡೆಯ 91ನೇ ವಯಸ್ಸಲ್ಲೂ ಮಾಡ್ತಾರೆ ಕೆಲಸ !
ತೆಲುಗು ನಟ ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಅವರ ಅಮ್ಮನ ತಂದೆ, ಡಾ. ಪ್ರತಾಪ್ ರೆಡ್ಡಿ 71 ಆಸ್ಪತ್ರೆಗಳ ಒಡೆಯ. ಇವರ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ.

ನಿಮಗೆ ರಾಮ್ ಚರಣ್ (Ram Charan) ಬಗ್ಗೆ ಗೊತ್ತು, ಅವರ ಪತ್ನಿ ಉಪಾಸನಾ ಕಾಮಿನೇನಿ ಬಗ್ಗೆಯೂ ಗೊತ್ತು. ಉಪಾಸನಾ ಅವರು ರಾಮ್ ಚರಣ್ ಗಿಂತಲೂ ಶ್ರೀಮಂತೆ ಅಂತಾನೇ ಹೇಳಬಹುದು. ಯಾಕಂದ್ರೆ ಇವರು ಅಪೋಲೊ ಗ್ರೂಪ್ಸ್ ನ ವೈಸ್ ಪ್ರೆಸಿಡೆಂಟ್ ಆಗಿದ್ದರು.
ಉಪಾಸನಾ (Upasana Kamineni) ತಂದೆ ಅನಿಲ್ ಕಾಮಿನೇನಿ ಹಾಗೂ ತಾಯಿ ಶೋಭನಾ ಕಾಮಿನೇನಿ. ಆದರೆ ಉಪಸನಾ ಅವರ ತಾತನ ಬಗ್ಗೆ ನಿಮಗೆ ಗೊತ್ತಾ? ಉಪಾಸನಾ ಕಾಮಿನೇನಿ ತಾತ ಡಾ. ಪ್ರತಾಪ್ ರೆಡ್ಡಿ (Dr. PRathap C Reddy). ಇವರು 71 ಆಸ್ಪತ್ರೆಗಳ ಸ್ಥಾಪಕ, 28,880 ಕೋಟಿಗಳ ಒಡೆಯ, ವಯಸ್ಸು 91 ಆಗಿದ್ದರೂ, ಇಂದಿಗೂ ವಾರದಲ್ಲಿ ಆರು ದಿನ ವೈದ್ಯಕೀಯ ವೃತ್ತಿ ಪಾಲಿಸುತ್ತಿದ್ದಾರೆ ಇವರು.
ಡಾ. ಪ್ರತಾಪ್ ಸಿ ರೆಡ್ಡಿ ಅವರು ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ (medical field) ಕ್ರಾಂತಿಯನ್ನುಂಟು ಮಾಡಿದ್ದಾರೆ. ಅಪೋಲೋ ಆಸ್ಪತ್ರೆಗಳ ಸಂಸ್ಥಾಪಕರಾಗಿ, ಅವರ ದೂರದೃಷ್ಟಿಯ ನಾಯಕತ್ವವು ದೇಶದ ಆರೋಗ್ಯ ಸೇವೆ ಉದ್ಯಮವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಶ್ವ ದರ್ಜೆಯ ವೈದ್ಯಕೀಯ ಸೇವೆಗಳನ್ನು ಒದಗಿಸುವ ಅವರ ಬದ್ಧತೆಯು ಅವರಿಗೆ ವ್ಯಾಪಕ ಗೌರವವನ್ನು ತಂದು ಕೊಟ್ಟಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಇವರು ಮಾಡಿರುವ ಸಾಧನೆಗಾಗಿ ಪ್ರತಾಪ್ ರೆಡ್ಡಿಯವರಿಗೆ ಪದ್ಮ ವಿಭೂಷಣ (Padma Vibhushana)ಗೌರವ ಕೂಡ ಲಭಿಸಿತ್ತು. ಇವರಿಗೆ ವಯಸ್ಸು 92 ಆದರೂ ಇನ್ನು ಕೂಡ ದುಡಿಯುವ ಉತ್ಸಾಹ ಕಡಿಮೆಯಾಗಿಲ್ಲ. ಈ ಪವರ್ ಫುಲ್ ಮ್ಯಾನ್ ಕಳೆದ ವರ್ಷ ಫೋರ್ಬ್ಸ್ ಅತ್ಯಂತ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ 94ನೇ ಸ್ಥಾನ ಕೂಡ ಪಡೆದಿದ್ದರು.
ಡಾ. ರೆಡ್ಡಿ ಚೆನ್ನೈನ ಸ್ಟಾನ್ಲಿ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದರ. ನಂತರ ಯುಕೆ ಮತ್ತು ಯುಎಸ್ಎಗಳಲ್ಲಿ ಹೃದ್ರೋಗ ತಜ್ಞರಾಗಿ (heart specialist) ತರಬೇತಿ ಪಡೆದಿದ್ದರು. ಅವರು ಬೋಸ್ಟನ್‌ನ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ಫೆಲೋಶಿಪ್ ಪಡೆದರು ಮತ್ತು ಯುಎಸ್ಎಯ ಮಿಸೌರಿ ಸ್ಟೇಟ್ ಚೆಸ್ಟ್ ಆಸ್ಪತ್ರೆಯಲ್ಲಿ ಹಲವಾರು ಸಂಶೋಧನಾ ಕಾರ್ಯಕ್ರಮಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು, ಅಲ್ಲಿ ಅವರು ಭಾರತಕ್ಕೆ ಮರಳುವ ಮೊದಲು ಹಲವಾರು ವರ್ಷಗಳ ಕಾಲ ಯುಎಸ್ ನಲ್ಲಿ ಕೆಲಸ ಮಾಡಿದ್ದರು.
ಡಾ. ರೆಡ್ಡಿಗೆ ಸಿಕ್ಕಂತಹ ಗೌರವಗಳು
1991: ಪದ್ಮಭೂಷಣ ಪ್ರಶಸ್ತಿ
2010: ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ಪ್ರಶಸ್ತಿ
2018: ಅಪೋಲೋ ಆಸ್ಪತ್ರೆಗಳಿಂದ ಲಯನ್ಸ್ ಮಾನವೀಯ ಪ್ರಶಸ್ತಿ
2022: IMIಯಿಂದ ಜೀವಮಾನ ಸಾಧನೆ ಪ್ರಶಸ್ತಿ