ಪ್ರೇಯಸಿ ಮುಖ ನೋಡಲು ತರಕಾರಿ ಮಾರಿಕೊಂಡು ಬಂದವನಿಗೆ ಇದೆಂತಹಾ ಶಿಕ್ಷೆ!

First Published Jan 27, 2021, 4:07 PM IST

ಪ್ರೇಯಸಿ ಮುಖ ನೋಡಲು ಆಕೆಯ ಮನೆ ಬಳಿ ತರಕಾರಿ ಮಾರಿಕೊಂಡು ಹೋದ ಯುವಕನನ್ನು ಗ್ರಾಮಸ್ಥರೆಲ್ಲಾ ಸೇರಿ ಹಿಡಿದಿದ್ದಾರೆ. ಸಾಲದೆಂಬಂತೆ ಆತನಿಗೆ ಹಿಗ್ಗಾಮುಗ್ಗ ಥಳಿಸಿ, ಮುಖಕ್ಕೆ ಕಪ್ಪು ಮಸಿ ಒರಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಊರಿಡೀ ಮೆರವಣಿಗೆ ಮಾಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದು ಕಾನ್ಪುರದ ಮಂಗಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಎನ್ನಲಾಗಿದೆ.