ಜಗತ್ತಿನ ಅತೀ ಉದ್ದದ 10 ರೈಲ್ವೇ ಫ್ಲಾಟ್‌ಫಾರ್ಮ್‌ಗಳು, ಇವುಗಳಲ್ಲಿ 7 ಭಾರತದ್ದು!
ವಿಶ್ವದ ಅತಿ ಉದ್ದದ ರೈಲ್ವೇ ಫ್ಲಾಟ್‌ಫಾರ್ಮ್‌ಗಳ ವಿಚಾರದಲ್ಲಿ ಭಾರತ ಹೆಮ್ಮೆ ಪಡುವಂಥ ವಿಚಾರವಿದೆ. ಏಕೆಂದರೆ, ಅಗ್ರ 10 ರ ಪಟ್ಟಿಯಲ್ಲಿ ಭಾರತದ್ದೇ ಏಳು ಫ್ಲಾಟ್‌ಫಾರ್ಮ್‌ಗಳಿವೆ.
10. ಚೆರಿಟನ್ ಶಟಲ್ ಟರ್ಮಿನಲ್: ಇಂಗ್ಲೆಂಡ್‌ನ ಕೆಂಟ್ ಕೌಟಿಯಲ್ಲಿರುವ ಚೆರಿಟನ್ ಷಟಲ್ ಟರ್ಮಿನಲ್‌ನ ಫ್ಲಾಟ್‌ಫಾರ್ಮ್ ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, 791 ಮೀಟರ್ ಉದ್ದವಿದೆ.
9. ಬಿಲಾಸ್‌ಪುರ ರೈಲ್ವೇ ಸ್ಟೇಷನ್: ಛತ್ತೀಸ್‌ಗಢ ರಾಜ್ಯದಲ್ಲಿರುವ ಬಿಲಾಸ್‌ಪುರ ರೈಲ್ವೇ ಸ್ಟೇಷನ್‌ನ ಫ್ಲಾಟ್‌ಫಾರ್ಮ್ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇದರ ಉದ್ದ 802 ಮೀಟರ್ ಆಗಿದೆ.
8. ಆಟೋ ಕ್ಲಬ್ ಸ್ಪೀಡ್‌ವೇ: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಆಟೋ ಕ್ಲಬ್ ಸ್ಪೀಡ್‌ವೇಗೆ ಹೊಂದಿಕೊಂಡಿರುವ ಈ ರೈಲ್ವೇ ಸ್ಪೇಷನ್‌ನಲ್ಲಿರುವ ಫ್ಲಾಟ್‌ಫಾರ್ಮ್‌ನ ಉದ್ದ 815 ಮೀಟರ್.
7.ಫಿಲಿಬಿತ್ ಜಂಕ್ಷನ್: ಉತ್ತರ ಪ್ರದೇಶದಲ್ಲಿರುವ ಫಿಲಿಬಿತ್ ಜಂಕ್ಷನ್ 1885ರಲ್ಲಿ ಆರಂಭವಾಗಿತ್ತು. 2016ರಿಂದ ಇಲ್ಲಿ ಬ್ರಾಡ್‌ಗೇಜ್ ಲೈನ್ ಆರಂಭವಾಗಿದೆ. ಇಲ್ಲಿ ವಿಶ್ವದ 7ನೇ ಅತೀ ಉದ್ದದ ಫ್ಲಾಟ್‌ಫಾರ್ಮ್ ಇದ್ದು, ಇದರ ಉದ್ದ 900 ಮೀಟರ್ ಆಗಿದೆ.
6.ಚೆನ್ನೈ ಎಗ್ಮೋರ್: 118 ವರ್ಷಗಳ ಹಿಂದೆ ಆರಂಭವಾಗಿರುವ ಚೆನ್ನೈ ಎಗ್ಮೋರ್ ರೈಲ್ವೇ ಸ್ಟೇಷನ್‌ನಲ್ಲಿ ವಿಶ್ವದ 6ನೇ ಅತೀ ಉದ್ದದ ಫ್ಲಾಟ್‌ಫಾರ್ಮ್ ಇದ್ದು, ಇದರ ಉದ್ದ 925.2 ಮೀಟರ್ ಆಗಿದೆ.
5.ಸ್ಟೇಟ್ ಸ್ಟ್ರೀಟ್ ಸಬ್‌ವೇ: ಅಮೆರಿಕಾದ ಇಲಿನಾಯ್ಸ್ ರಾಜ್ಯದ ಷಿಕಾಗೋ ನಗರದಲ್ಲಿರುವ ಸ್ಟೇಟ್ ಸ್ಟ್ರೀಟ್ ಸಬ್‌ವೇ ಸ್ಟೇಷನ್‌ನಲ್ಲಿ ವಿಶ್ವದ 5ನೇ ಅತೀ ಉದ್ದದ ಫ್ಲಾಟ್‌ಫಾರ್ಮ್ ಇದ್ದು, ಇದರ ಉದ್ದ 1067.1 ಮೀಟರ್ ಆಗಿದೆ.
4.ಖರಗ್‌ಪುರ ಜಂಕ್ಷನ್: ಪಶ್ಚಿಮ ಬಂಗಾಳದ ಖರಗ್‌ಪುರ ಜಂಕ್ಷನ್‌ನಲ್ಲಿರುವ ಫ್ಲಾಟ್‌ಫಾರ್ಮ್ 1072.5 ಮೀಟರ್ ಉದ್ದವಿದೆ. ಇದು 124 ವರ್ಷಗಳ ಹಿಂದೆ ಆರಂಭವಾದ ರೈಲ್ವೇ ಸ್ಟೇಷನ್ ಆಗಿದೆ.
3.ಕೊಲ್ಲಂ ಜಂಕ್ಷನ್: ಕೇರಳದ ಕೊಲ್ಲಂನಲ್ಲಿರುವ ಈ ಜಂಕ್ಷನ್‌ನ ಒಂದು ಫ್ಲಾಟ್‌ಫಾರ್ಮ್ 1180.5 ಮೀಟರ್ ಉದ್ಧವಿದೆ. ಇದು ಕೇರಳದ 2ನೇ ಅತ್ಯಂತ ಪುರಾತನ ರೈಲ್ವೇ ಸ್ಟೇಷನ್ ಕೂಡ ಆಗಿದೆ.
2. ಗೋರಖ್‌ಪುರ ಜಂಕ್ಷನ್: ಉತ್ತರ ಪ್ರದೇಶದ ಗೋರಖ್‌ಪುರ ಜಂಕ್ಷನ್ ವಿಶ್ವದ 2ನೇ ಅತೀ ಉದ್ಧದ ರೈಲ್ವೇ ಫ್ಲಾಟ್‌ಫಾರ್ಮ್ ಹೊಂದಿದೆ. ಇದು 1366.3 ಮೀಟರ್ ಉದ್ದವಿದೆ.
1. ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್: ಕಳೆದ ಮಾರ್ಚ್‌ನಲ್ಲಿ ಉದ್ಘಾಟನೆಯಾಗಿರುವ ಈ ಜಂಕ್ಷನ್‌ನ ಫ್ಲಾಟ್‌ಫಾರ್ಮ್ 1507 ಮೀಟರ್ ಉದ್ದವಿದೆ. ಇದು ವಿಶ್ವದ ಅತೀ ಉದ್ದದ ರೈಲ್ವೇ ಫ್ಲಾಟ್‌ಫಾರ್ಮ್ ಎನಿಸಿದ್ದು, ಕರ್ನಾಟಕದ ಹುಬ್ಬಳ್ಳಿಯಲ್ಲಿದೆ.