ಪಾರ್ಶ್ವವಾಯು ಪೀಡಿತನನ್ನೇ ಮದುವೆಯಾಗಿ ಹೃದಯ ಗೆದ್ದ ಶಹನಾ!

First Published 7, Mar 2020, 12:28 PM IST

ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಇದೀಗ ಕೇರಳದ ಯುವತಿಯೊಬ್ಬಳು ತನ್ನ ಪೋಷಕರನ್ನು ಬಿಟ್ಟು ಪಾರ್ಶ್ವವಾಯುವಿಗೆ ಒಳಗಾಗಿರುವ ಯುವಕನನ್ನು ಮದುವೆಯಾಗಿರುವ ಅಪರೂಪದ ಘಟನೆ ನಡೆದಿದೆ. ಪ್ರಣವ್, ಶಹನಾ ಜೋಡಿಯ ಕೆಲ ಫೋಟೋಗಳು ಇಲ್ಲಿವೆ ನೋಡಿ

ಕೇರಳದಲ್ಲೊಬ್ಬ ಯುವತಿ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಯುವಕನನ್ನ ಮದುವೆಯಾಗಿ ಹಲವರ ಹೃದಯ ಗೆದ್ದಿದ್ದಾಳೆ.

ಈ ಮದುವೆ ಬೇಡ ಎಂದು ಕುಟುಂಬದವರು, ಸಂಬಂಧಿಕರು, ಸ್ವತಃ ಯುವಕನೇ ಬುದ್ಧಿಹೇಳಿದರೂ ಕೇಳದೇ ತಾನು ಇಷ್ಟಪಟ್ಟ ಹುಡುಗನನ್ನ ಮದುವೆಯಾಗಿದ್ದಾಳೆ. ಕೇರಳದ ತಿರುವನಂತಪುರದ ಶಹನಾ, ತ್ರಿಸ್ಸೂರ್ನ ಪ್ರಣವ್ ಎಂಬ ಯುವಕನನ್ನು ಮದುವೆಯಾಗಿದ್ದಾಳೆ.

ಆರು ವರ್ಷಗಳ ಹಿಂದೆ ನಡೆದ ಅಪಘಾತದಿಂದಾಗಿ ಪ್ರಣವ್ ಪಾರ್ಶ್ವವಾಯುವಿಗೆ ತುತ್ತಾಗಿ ದೇಹದ ಅರ್ಧ ಭಾಗವೇ ಸ್ವಾದೀನ ಕಳೆದುಕೊಂಡಿದ್ದರು. ಈ ಘಟನೆಯಿಂದಾಗಿ ಪ್ರಣವ್ ಎದ್ದು ನಿಲ್ಲಲೂ ಆಗದೇ ವ್ಹೀಲ್ ಚೇರ್ ಮೂಲಕ ಓಡಾಡುವಂತಾಯ್ತು.

ದೇಹದ ಅರ್ಧ ಭಾಗವೇ ಸ್ವಾದೀನ ಕಳೆದುಕೊಂಡರೂ ಜೀವನೋತ್ಸಾಹ ಕಳೆದುಕೊಳ್ಳದ ಪ್ರಣವ್ ವೀಲ್ ಚೇರ್ ಬಳಸಿಕೊಂಡೇ ದೇವಸ್ಥಾನಗಳಿಗೆ ಹೋಗೋದೂ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಈ ವಿಡಿಯೋಗಳನ್ನು ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ಶೇರ್ ಮಾಡ್ತಿದ್ರು.

ಪ್ರಣವ್ ಪೋಸ್ಟ್ ಗಳನ್ನು ನೋಡಿದ್ದ ಶಹನಾ, ಫೇಸ್ಬುಕ್ ಮೂಲಕ ಅವರ ಸಂಪರ್ಕಕ್ಕೆ ಬಂದರು. ಕೆಲವೇ ದಿನಗಳಲ್ಲಿ ಪ್ರಣವ್ ಮುಂದೆ ಮದುವೆಯ ಪ್ರಪೋಸಲ್ ಇಟ್ಟಿದ್ದರು ಶಹನಾ. ಆದ್ರೆ ಮದುವೆ ಮಾಡಿಕೊಳ್ಳಲು ಸ್ವತಃ ಪ್ರಣವ್ ಒಪ್ಪಿಕೊಳ್ಳಲಿಲ್ಲ.

ಎರಡೂ ಕುಟುಂಬಗಳೂ ವಿರೋಧ ಮಾಡಿದವು. ಆದರೂ ಛಲ ಬಿಡದ ಶಹನಾ ಕೊನೆಗೆ ಎಲ್ಲರನ್ನೂ ಒಪ್ಪಿಸಿ ಪ್ರಣವ್ನನ್ನ ಮದುವೆಯಾಗಿದ್ದಾಳೆ.

ವೀಲ್ಚೇರ್ ಮೇಲೆ ಕುಳಿತೇ ಪ್ರಣವ್ ಶಹನಾಗೆ ತಾಳಿ ಕಟ್ಟಿದ್ದಾರೆ.

loader