ಸೈಕಲ್ ಗರ್ಲ್ ಖ್ಯಾತಿಯ ಜ್ಯೋತಿ ತಂದೆ ಮೇಲೆ ಗಂಭೀರ ಆರೋಪ, ಲೀಗಲ್ ನೋಟಿಸ್ ಕೂಡಾ ಜಾರಿ!

First Published 4, Jul 2020, 4:59 PM

ಸೈಕಲ್ ಗರ್ಲ್ ಖ್ಯಾತಿಯ ಜ್ಯೋತಿ ಸದ್ಯ ಸಂಕಷ್ಟಕ್ಕೀಡಾಗುತ್ತಿದ್ದಾಳೆ. ಅನಾರೋಗ್ಯ ಪೀಡಿತ ತಂದೆಯನ್ನು ಸೈಕಲ್‌ನಲ್ಲಿ ಕುಳ್ಳಿರಿಸಿ ಗುರುಗಾಂವ್‌ನಿಂದ ಸುಮಾರು 1200 ಕಿ. ಮೀ ಬಿಹಾರದ ದರ್‌ಭಂಗಾಗೆ ಕರೆತಂದ ಈ ಮಗಳ ಸಂಘರ್ಷದ ಕುರಿತು ಸಿನಿಮಾ ಹೊರತರಲು ಎರಡು ಕಂಪನಿಗಳ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ಆದರೀಗ ಈ ಕಂಪನಿಗಳಲ್ಲೊಂದಾದ ಮುಂಬೈನ ಸಿನಿಮಾ ನಿರ್ಮಾಣ ಕಂಪನಿ ಜ್ಯೋತಿ ತಂದೆ ಮೋಹನ್ ಪಾಸ್ವಾನ್ ವಿರುದ್ಧ ಗಂಭೀರ ಆರೋಪವೆಸಗಿದ್ದು, ಅವರು ಕಂಪನಿ ಜೊತೆಗೆ ಸಿನಿಮಾ ನಿರ್ಮಾಣ ಮಾಡುವಂತೆ ಸಹಿ ಹಾಕಿದ್ದ ಒಪ್ಪಂದ ಮುರಿದಿದ್ದಾರೆ ಎಂದು ದೂರಿದೆ. ಈ ನಿಟ್ಟಿನಲ್ಲಿ ಅವರಿಗೆ ಲೀಗಲ್ ನೋಟಿಸ್ ಕೂಡಾ ಕಳುಹಿಸಿದೆ. ಅಲ್ಲದೇ ಜ್ಯೋತಿ ಹಾಗೂ ಆಕೆ ತಂದೆ ಮೇಲೆ ಈ ಘಟನೆ ಸಂಬಂಧ ಸುಳ್ಳು ಹೇಳಿದ್ದಾರೆಂಬ ಆರೋಪವನ್ನೂ ಮಾಡಿದೆ.

ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಜ್ಯೋತಿ ತಂದೆ ಜೊತೆ ಸಿನಿಮಾ ನಿರ್ಮಾಣ ಕಂಪನಿ ಜೊತೆ 2 ಲಕ್ಷ 51 ಸಾವಿರ ರೂಪಾಯಿಗೆ ಒಪ್ಪಂದ ನಡೆಸಿತ್ತು. ಇದಕ್ಕೆ ಜ್ಯೋತಿ ತಂದೆ ಸಹಿಯನ್ನೂ ಹಾಕಿದ್ದು, ಕಂಪನಿಯು 51 ಸಾವಿರ ರೂಪಾಯಿಯನ್ನು ಮೊದಲ ಕಂತಾಗಿ ಅವರ ಖಾತೆಗೆ ಜಮೆ ಮಾಡಿತ್ತು.

ಇನ್ನು ಈ ಕಂಪನಿ ಜ್ಯೋತಿ ತಂದೆ ಜೊತೆ ಒಪ್ಪಂದ ನಡೆಸಿ ಸಿನಿಮಾ ನಿರ್ಮಿಸುವ ಹಕ್ಕನ್ನು ಈ ಕಂಪನಿಗೆ ನೀಡಿದ್ದರೆ, ಅತ್ತ ಮತ್ತೊಂದು ಕಂಪನಿ ಜ್ಯೋತಿಯ ಈ ಘಟನೆಯನ್ನು ಸಿನಿಮಾ ಮಾಡಲು ಬೇಕಾದ ಅಧಿಕಾರ ಖರೀದಿಸಿ, ಸಿನಿಮಾ ಹೊರ ತರಲು ನಿರ್ಧರಿಸಿದೆ.

ಈ ಸಿನಿಮಾದಲ್ಲಿ ಜ್ಯೋತಿ ಪಾತ್ರ ಬೇರಾರೂ ಅಲ್ಲ, ಬದಲಾಗಿ ಖುದ್ದು ಆಕೆಯೇ ನಿರ್ವಹಿಸಲಿದ್ದಾಳೆ. ಈ ಒಪ್ಪಂದ ಜ್ಯೋತಿಯನ್ನು ರಾತ್ರೋ ರಾತ್ರಿ ಓರ್ವ ಸಾಮಾನ್ಯ ಹುಡುಗಿಯಿಂದ ನಟಿ ಎಂಬ ಖ್ಯಾತಿ ಕೊಡಿಸಿತ್ತು. ಆದರೀಗ ಅತ್ತ ಮೊದಲ ಕಂಪನಿ ಸುದ್ದಿಗೋಷ್ಟಿ ಆಯೋಜಿಸಿ ಮೋಹನ್ ಪಾಸ್ವಾನ್ ತಮ್ಮೊಂದಿಗೆ ಒಪ್ಪಂದ ನಡೆಸಿದ್ದು, ಇದು ಕಾನೂನು ಬಾಹಿರ ಹಾಗೂ ಅಕ್ರಮ ಎಂದು ದೂರಿದೆ.

ಕಂಪನಿ ಇದಕ್ಕಾಗಿ ಜ್ಯೋತಿ ತಂದೆಗೆ ಲೀಗಲ್ ನೊಟಿಸ್ ಕೂಡಾ ಕಳುಹಿಸಿದೆ. ಅಲ್ಲದೇ ಹೊಸದಾಗಿ ಮಾಡಿರುವ ಒಪ್ಪಂದವನ್ನು ಕೂಡಲೇ ರದ್ದುಗೊಳಿಸುವಂತೆ ಆದೇಶಿಸಿದೆ. ಈ ಮೂಲಕ ವಿವಾದವಾಗದಂತೆ ನೋಡಿಕೊಳ್ಳಿ ಎಂದು ಆಗ್ರಹಿಸಿದೆ.

ಇನ್ನು ಮೋಹನ್ ಪಾಸ್ವಾನ್ ಈ ಸಂಬಂಧ ಪ್ರತಿಕ್ರಿಯಿಸಿದ್ದು, ನಾನು ಯಾವುದೇ   ಒಪ್ಪಂದ ಮುರಿದಿಲ್ಲ. ಕಂಪನಿಯೇ ಬಹಳ ಸಮಯ ತೆಗೆದುಕೊಂಡಿತು ಎಂದಿದ್ದಾರೆ. ಅಲ್ಲದೇ ಈ ಸಂಬಂಧ ಕೋರ್ಟ್‌ ಮೆಟ್ಟಿಲೇರಲೂ ಸಿದ್ಧರಾಗಿದ್ದಾರೆ.

loader