ಸೇನೆಯಿಂದ ಜನಸಾಮಾನ್ಯರವರೆಗೆ, 75ನೇ ಸ್ವಾತಂತ್ರ್ಯ ದಿನದಂದು ಬಾನೆತ್ತರಕ್ಕೆ ಹಾರಿದ ತ್ರಿವರ್ಣ ಧ್ವಜ!
ಇಂದು ಇಡೀ ದೇಶ 75ನೇ ಸ್ವಾತಂತ್ರ್ಯ ದಿನ ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದೆ. ಪ್ರತಿ ನಗರದ ಪ್ರತಿಯೊಂದು ಬೀದಿಯಲ್ಲೂ ತ್ರಿವರ್ಣ ಧ್ವಜ ಹಾರಿಸಲಾಯಿತು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರತಿಯೊಬ್ಬ ಭಾರತೀಯ ಸ್ವಾತಂತ್ರ್ಯದ ಸಂಭ್ರಮದಲ್ಲಿ ಮುಳುಗಿರುತ್ತಾರೆ. ಒಂದು ಕಡೆ, ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ಧ್ವಜವನ್ನು ಹಾರಿಸಿದ್ದರೆ, ಇತ್ತ ನಮ್ಮ ಹೆಮ್ಮೆಯ ಸೇನೆಯ ಸೈನಿಕರು ದೇಶದ ಗಡಿಯಲ್ಲಿ ಧ್ವಜವನ್ನು ಹಾರಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ 8 ನೇ ಬಾರಿಗೆ ಕೆಂಪು ಕೋಟೆಯಿಂದ ತ್ರಿವರ್ಣ ಧ್ವಜ ಹಾರಿಸಿದರೆ, ಐಟಿಬಿಪಿ ಸಿಬ್ಬಂದಿ ಲಡಾಖ್‌ನ ಪಂಗೊಂಗ್ ತ್ಸೋ ಸರೋವರದ ತೀರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.
ಐಟಿಬಿಪಿ ಜವಾನರು ದೇಶದ ಗಡಿ ಲಡಾಖ್‌ಯಲ್ಲಿ ತ್ರಿವರ್ಣ ಧ್ವಜ ಹೆಮ್ಮೆ ಹಾಗೂ ಗೌರವದಿಂದ ಹಾರಿಸಿದ್ದಾರೆ. ಅವರು ಮೊದಲು ತ್ರಿವರ್ಣ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದ್ದಾರೆ.
ಐಟಿಬಿಪಿ ಜವಾನರು ಭಾರತ-ಚೀನಾ ಗಡಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಬಳಿಕ ಪರೇಡ್ ನಡೆಸಿದ್ದಾರೆ. ದೇಶಭಕ್ತಿ ಗೀತೆಗಳೂ ಮೊಳಗಿವೆ. ಜೊತೆಗೆ ಬಂದೂಕು ಭುಜದ ಮೇಲಿಟ್ಟು, ತ್ರಿವರ್ಣ ಧ್ವಜ ಹಿಡಿದು ಪರೇಡ್ ಮಾಡಿದ್ದಾರೆ.
ಭಾರತ-ಟಿಬೆಟಿಯನ್ ಗಡಿಯಲ್ಲಿ, ಸೈನಿಕರು ಲಡಾಖ್ ನಲ್ಲಿ 14,000 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. ಈ ವೇಳೆ, ಭಾರತ ಮಾತೆಗೆ ಜೈ ಎಂಬ ಘೋಷಣೆಗಳನ್ನೂ ಕೂಗಿದ್ದಾರೆ.
ಈ ಚಿತ್ರವು ದೇಶದ ರಾಜಧಾನಿ ದೆಹಲಿಯ ಕೆಂಪು ಕೋಟೆಯದ್ದಾಗಿದ್ದು, 75 ನೇ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.
ದೆಹಲಿಯಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ ಮೂಲೆ ಮೂಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ.